Home News ಚಹಾ ಕುಡಿದು ಒಂದೇ ಕುಟುಂಬದ ಐವರು ಸಾವು ; ಕಾರಣವಾಯ್ತು ಆಕೆ ಮಾಡಿದ ಎಡವಟ್ಟು!!

ಚಹಾ ಕುಡಿದು ಒಂದೇ ಕುಟುಂಬದ ಐವರು ಸಾವು ; ಕಾರಣವಾಯ್ತು ಆಕೆ ಮಾಡಿದ ಎಡವಟ್ಟು!!

Hindu neighbor gifts plot of land

Hindu neighbour gifts land to Muslim journalist

ಮಹಿಳೆ ಮಾಡಿದ ತಪ್ಪಿಗೆ ಐದು ಜೀವಗಳು ಬಲಿಯಾಗಿದೆ. ಹೌದು. ಆಕೆ ಮಾಡಿದ ಚಹಾ ಕುಡಿದು ಒಂದೇ ಕುಟುಂಬದ ಐವರು ಮೃತಪಟ್ಟಿರುವ ಆಘಾತಕಾರಿ ಘಟನೆ ನಡೆದಿದೆ.

ಮೃತರು ಶಿವಾನಂದನ್ (35), ಅವರ ಮಕ್ಕಳಾದ ಶಿವಂಗ್ (6), ದಿವ್ಯಾಂಶ್ (5), ಮಾವ ರವೀಂದ್ರಸಿಂಗ್ (55) ಮತ್ತು ನೆರೆಹೊರೆಯವರಾದ ಸೊಬ್ರಾನ್ (45).

ಉತ್ತರ ಪ್ರದೇಶದ ಮೈನ್‌ಪುರಿಯಲ್ಲಿ ದುರಂತ ಘಟನೆಯೊಂದು ಸಂಭವಿಸಿದ್ದು, ತಪ್ಪಾಗಿ ಕೀಟನಾಶಕ ಔಷಧ ಬೆರೆಸಿರುವುದೇ ಇದಕ್ಕೆ ಕಾರಣವಾಗಿದೆ. ಒಂದು ಸಣ್ಣ ತಪ್ಪಿನಿಂದ ಗಂಡ ಮತ್ತು ಮುದ್ದಾದ ಇಬ್ಬರು ಮಕ್ಕಳು ಸೇರಿದಂತೆ ಐವರನ್ನು ಕಳೆದುಕೊಂಡಿದ್ದಾರೆ.

ಶಿವಾನಂದನ ಪತ್ನಿ ಭತ್ತದ ಬೆಳೆಗೆ ಸಿಂಪಡಣೆ ಮಾಡಿದ ಔಷಧವನ್ನು ಟೀ ಪುಡಿ ಎಂದು ತಪ್ಪಾಗಿ ಭಾವಿಸಿ ಚಹಾ ಮಾಡಿದ್ದಾರೆ. ಇದನ್ನು ಕುಡಿದ ಆ ಐವರು ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಎಸ್ಪಿ ಕಮಲೇಶ್ ದೀಕ್ಷಿತ್ ಬಹಿರಂಗಪಡಿಸಿದ್ದಾರೆ.

ಶಿವಾನಂದನ್ (35), ಅವರ ಮಕ್ಕಳಾದ ಶಿವಂಗ್ (6), ದಿವ್ಯಾಂಶ್ (5), ಮಾವ ರವೀಂದ್ರಸಿಂಗ್ (55) ಮತ್ತು ನೆರೆಹೊರೆಯವರಾದ ಸೊಬ್ರಾನ್ (45) ಮನೆಯಲ್ಲಿ ಚಹಾ ಕುಡಿದು ತೀವ್ರ ಅಸ್ವಸ್ಥಗೊಂಡಿದ್ದರು. ಅವರೆಲ್ಲರನ್ನೂ ಕೂಡಲೇ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಅಷ್ಟೋತ್ತಿಗಾಗಲೇ ರವೀಂದ್ರ ಸಿಂಗ್, ಶಿವಾಂಗ್ ಮತ್ತು ದಿವಾನ್ಶ್ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು. ಸೊಬ್ರಾನ್ ಮತ್ತು ಶಿವಾನಂದನ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಅವರನ್ನು ಸೈಫಾಯಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಅಲ್ಲಿಯೂ ಇಬ್ಬರೂ ಸಾವನ್ನಪ್ಪಿದ್ದಾರೆ. ಒಟ್ಟಾರೆ ಮಹಿಳೆಯ ಒಂದು ಎಡವಟ್ಟು ಜೀವನ ಪರ್ಯಂತ ಕೊರಗುವಂತೆ ಮಾಡಿದೆ.