Home Latest Health Updates Kannada Funny Video : ಫಸ್ಟ್‌ನೈಟ್‌ ದಿನ ಪಕ್ಕದ್ಮನೆಯಲ್ಲಿ ಅಡಗಿ ಕುಳಿತ ವರ : ಕಾರಣವೇನು ?

Funny Video : ಫಸ್ಟ್‌ನೈಟ್‌ ದಿನ ಪಕ್ಕದ್ಮನೆಯಲ್ಲಿ ಅಡಗಿ ಕುಳಿತ ವರ : ಕಾರಣವೇನು ?

Hindu neighbor gifts plot of land

Hindu neighbour gifts land to Muslim journalist

ಮದುವೆಮನೆ (Marriage) ಅಂದ್ರೆ ಅದೊಂದು ರೀತಿಯ ಸಂತೋಷ ಸಂಭ್ರಮದ ದಿನಗಳು ಅಂತಲೇ ಹೇಳಬಹುದು. ಹೊಸ ಜೀವನಕ್ಕೆ ಪಾದಾರ್ಪಣೆ ಮಾಡುವ ಸಂಭ್ರಮದಲ್ಲಿ ಕಾತುರರಾಗಿರುತ್ತಾರೆ ವಧು ಮತ್ತು ವರ. ಅದಲ್ಲದೆ ದಂಪತಿಗಳು ಮಧುಚಂದ್ರದ(first night ) ರಾತ್ರಿಗಾಗಿ ಕಾತುರದಿಂದ ಕಾಯುತ್ತಾರೆ. ಆದರೆ ಇಲ್ಲೊಬ್ಬ ವರನು ತನ್ನ ವಧು ತನಗಾಗಿ ಕಾಯುತ್ತಿರುವಾಗ ನೆರೆಹೊರೆಯವರ ಮನೆಯಲ್ಲಿ ಹೋಗಿ ಅಡಗಿ ಕುಳಿತಿದ್ದಾನೆ. ಈ ವಿಚಾರ ತಿಳಿದ ವಧು ಮತ್ತು ಆತನ ಕುಟುಂಬಸ್ಥರು ಶಾಕ್ ಆಗಿದ್ದಾರೆ.

ಸದ್ಯ ಈ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು ಈ ವಿಡಿಯೋ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (viral) ಆಗಿದೆ. ಈ ವರ ತನ್ನ ಮೊದಲ ರಾತ್ರಿಯಂದು ಪಕ್ಕದ ಮನೆಯಲ್ಲಿ ಹೋಗಿ ಅಡಗಿ ಕುಳಿತಿದ್ದಾನೆ. ಇದಕ್ಕೆ ಕಾರಣ ಆತನ ನಾಚಿಕೆ ಸ್ವಭಾವವಂತೆ.

ಸ್ಥಳೀಯ ಮಾಹಿತಿ ಪ್ರಕಾರ ವರನು ಮೊದಲ ರಾತ್ರಿಯ ದಿನ ತನ್ನ ಮನೆಯಿಂದ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದಾನೆ. ವರ ಎಲ್ಲಿ ಹೋದನೋ ಎಂದು ಆತಂಕಗೊಂಡ ಕುಟುಂಬಸ್ಥರು ರಾತ್ರಿಯಿಡೀ ಹುಡುಕಾಡಿದ್ದಾರೆ. ಆದರೆ ಆತ ನೆರೆಯ ಮನೆಯಲ್ಲಿ ಅಡಗಿಕೊಂಡಿದ್ದ ಎಂದಿದ್ದಾರೆ.

ನಂತರ ಮರುದಿನ ಬೆಳಿಗ್ಗೆ ಅವನು ತನ್ನ ಮೊಬೈಲ್ ಫೋನ್ ಆನ್ ಮಾಡಿದಾಗ ಅವನ ಕುಟುಂಬ ಸದಸ್ಯರು ಅವನನ್ನು ಸಂಪರ್ಕಿಸಿದರು. ಈ ರೀತಿ ಏಕೆ ಮಾಡಿದೆ ಎಂದು ಕೇಳಿದಾಗ, ನನಗೆ ನಾಚಿಕೆಯಾಗುತ್ತಿತ್ತು ಎಂದು ಹೇಳಿದ್ದಾನೆ. ಅಷ್ಟೇ ಅಲ್ಲದೆ ಮನೆಗೆ ಹಿಂತಿರುಗಲು ರಾತ್ರಿ ಧೈರ್ಯವೇ ಸಾಕಾಗಿಲ್ಲ ಎಂದಿದ್ದಾನೆ.

ಆಧುನಿಕ ಯುಗದಲ್ಲಿ ಎಲ್ಲವೂ ಕಾಮನ್ ಆಗಿರುವಾಗ ಸದ್ಯ ಮಧುಚಂದ್ರದ ದಿನ ವರ ಓಡಿಹೋದ ಎಂಬುದು ಆಶ್ಚರ್ಯಕರವಾಗಿದೆ. ಇನ್ನು ವಧುವಿನ ಗತಿಯೇನು ಎಂದು ನಕ್ಕು ನಕ್ಕು ಸುಸ್ತಾಗಿದ್ದಾರೆ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಆಗುತ್ತಿರುವ ಈ ಸುದ್ದಿ ಸಖತ್ ಕಾಮಿಡಿ ಆಗಿದ್ದು ಜನರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ.