Home News Kundapura : ದಿನಸಿ ಅಂಗಡಿಗೆ ಬೆಂಕಿ – ಲಕ್ಷಾಂತರ ರೂ. ನಷ್ಟ!! ದ್ವೇಷದಿಂದ ಬೆಂಕಿ ಇಟ್ಟ...

Kundapura : ದಿನಸಿ ಅಂಗಡಿಗೆ ಬೆಂಕಿ – ಲಕ್ಷಾಂತರ ರೂ. ನಷ್ಟ!! ದ್ವೇಷದಿಂದ ಬೆಂಕಿ ಇಟ್ಟ ಶಂಕೆ, ದೂರು ದಾಖಲು

Hindu neighbor gifts plot of land

Hindu neighbour gifts land to Muslim journalist

Kundapura : ಬದಿಯಲ್ಲಿದ್ದ ತಗಡು ಶೀಟಿನ ಸಣ್ಣ ದಿನಸಿ ಅಂಗಡಿಗೆ ಬೆಂಕಿ ತಗುಲಿ ಲಕ್ಷಾಂತರ ರೂ. ನಷ್ಟವಾದ ಘಟನೆ ಕುಂದಾಪುರ(Kundapura ) ತಾಲೂಕಿನ ಜಪ್ತಿಯಲ್ಲಿ ನಡೆದಿದೆ. ಅಂಗಡಿ ಮಾಲೀಕರು ರಾತ್ರಿ ಬಾಗಿಲು ಹಾಕಿ ಮನೆಗೆ ಹೋದ ಬಳಿಕ ರಾತ್ರಿ 10 ಗಂಟೆಗೆ ಸುಮಾರಿಗೆ ಬೆಂಕಿ ಬಿದ್ದಿದೆ ಎನ್ನಲಾಗಿದೆ.

ಹೌದು, ಅಂಬಿಕಾ ಮತ್ತು ಅವರ ಪತಿ ನಡೆಸುತ್ತಿದ್ದ ದಿನಸಿ ಅಂಗಡಿಯಲ್ಲಿ ದಿನಸಿ ಸಾಮಗ್ರಿ, ತಿಂಡಿ, ಕೋಲ್ಡ್‌ ಡ್ರಿಂಕ್ಸ್‌, ತರಕಾರಿ ಇನ್ನಿತರ ಸಾಮಗ್ರಿಗಳಿದ್ದವು. ಅಂಗಡಿ ಮಾಲೀಕರು ರಾತ್ರಿ ಬಾಗಿಲು ಹಾಕಿ ಮನೆಗೆ ಹೋದ ಬಳಿಕ ರಾತ್ರಿ 10 ಗಂಟೆಗೆ ಸುಮಾರಿಗೆ ಬೆಂಕಿ ಬಿದ್ದಿದ್ದು ತಕ್ಷಣ ಸ್ಥಳೀಯ ವ್ಯಕ್ತಿ ಅಂಗಡಿ ಮಾಲೀಕರಿಗೆ ಫೋನ್‌ ಮಾಡಿ ಅಂಗಡಿಗೆ ಬೆಂಕಿ ಬಿದ್ದಿರುವುದಾಗಿ ತಿಳಿಸಿದ್ದರು. ಅಕ್ಕಪಕ್ಕದವರು ಹಾಗೂ ಇತರರು ಸೇರಿ ನೀರು ಹಾಕಿ ಬೆಂಕಿ ನಂದಿಸಿದ್ದರು ಆದರೂ ಅಂಗಡಿಯಲ್ಲಿದ್ದ ಸೊತ್ತುಗಳು ಸುಟ್ಟು ಹೋಗಿವೆ.

ಬಳಿಕ ಪರಿಶೀಲಿಸಿದಾಗ ಅಂಗಡಿಯ ಹಿಂಬದಿಯ ತಗಡನ್ನು ಎತ್ತಿ ಒಳಗೆ ಬೆಂಕಿ ಹಾಕಿರುವುದು ಕಂಡು ಬಂದಿದೆ. ಫ್ರಿಜ್‌, ವಿವಿಧ ಎಣ್ಣೆಗಳ ಪೆಟ್ಟಿಗೆಗಳು ಹಾಗೂ ಪ್ರತಿನಿತ್ಯ ಮಾರಾಟಕ್ಕೆ ಇಟ್ಟಿದ್ದ ಸಾಮಗ್ರಿಗಳು ಸುಟ್ಟು ಹೋಗಿ ಸುಮಾರು 2 ಲಕ್ಷ ರೂ. ನಷ್ಟ ಆಗಿದೆ.ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದ್ವೇಷದ ಕಿಡಿ ಶಂಕೆ:
ಇದೇ ಅಂಗಡಿಯ ಸಮೀಪ ಸಂದೇಶ ಅವರು 3 ವರ್ಷದ ಹಿಂದೆ ತಗಡಿನ ಅಂಗಡಿ ಇಟ್ಟಿದ್ದು, ನನ್ನ ಅಂಗಡಿಯ ಪಕ್ಕದಲ್ಲಿ ಅಂಗಡಿ ಇಡಲು ಎಷ್ಟು ಧೈರ್ಯ ಎಂದು ಅಂಬಿಕಾ ದಂಪತಿಗೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ರಾತ್ರಿ ಅಂಗಡಿಗೆ ಬೆಂಕಿ ಬಿದ್ದ ಸಂದರ್ಭ ಸಂದೇಶ ಮತ್ತು ಶಿವಪ್ರಸಾದ ಎನ್ನುವವರು ಅಂಗಡಿಯ ಬಳಿ ತಿರುಗಾಡಿಕೊಂಡಿದ್ದರು. ಬೆಂಕಿ ನಂದಿಸಿ ಹೋಗುವಾಗ ಅಂಗಡಿ ಬಾಗಿಲು ತೆಗೆದು ಕೋಲ್ಡ್‌ ಕೊಡುವಂತೆ ತಮಾಷೆ ಮಾಡಿದ್ದರು. ಅಂಗಡಿಗೆ ವಿದ್ಯುತ್‌ ಸಂಪರ್ಕ ಇಲ್ಲ. ಅವರ ವ್ಯಂಗದ ನಡೆಯಿಂದಾಗಿ ಅವರೇ ಬೆಂಕಿ ಹಾಕಿರಬಹುದು ಎಂದು ಶಂಕೆ ಇರುವುದಾಗಿ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆಗೆ ನೀಡಿರುವ ದೂರಿನಲ್ಲಿ ಅಂಗಡಿಯ ಮಾಲಕರು ತಿಳಿಸಿದ್ದಾರೆ.