Home Interesting February festivals: ಫೆಬ್ರವರಿಯಲ್ಲಿ ಬರುವ ಪ್ರಮುಖ ಹಬ್ಬ ವ್ರತಗಳ ಲಿಸ್ಟ್ ಇಲ್ಲಿದೆ

February festivals: ಫೆಬ್ರವರಿಯಲ್ಲಿ ಬರುವ ಪ್ರಮುಖ ಹಬ್ಬ ವ್ರತಗಳ ಲಿಸ್ಟ್ ಇಲ್ಲಿದೆ

Hindu neighbor gifts plot of land

Hindu neighbour gifts land to Muslim journalist

ಇನ್ನೇನು ವರ್ಷದ ಮೊದಲ ತಿಂಗಳು ಮುಗಿದು, ಎರಡನೇ ತಿಂಗಳು ಫೆಬ್ರವರಿಗೆ ಕಾಲಿಡುತ್ತಿದ್ದೇವೆ. ಅಂದ ಹಾಗೆ, ಈ ತಿಂಗಳ ಆರಂಭವು ಆರಂಭವು ಮಾಘ ಮಾಸದ ಶುಕ್ಲ ಪಕ್ಷ ಏಕಾದಶಿ ತಿಥಿಯಿಂದ ಪ್ರಾರಂಭವಾಗಿ, ಫಾಲ್ಗುಣ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯೊಂದಿಗೆ ಕೊನೆಗೊಳ್ಳುತ್ತದೆ. ಫೆಬ್ರವರಿ 2023ರಲ್ಲಿ, ಮಾಘ ಪೂರ್ಣಿಮಾ, ಜಯ ಏಕಾದಶಿ, ಸೀತಾಷ್ಟಮಿ, ಮಹಾಶಿವರಾತ್ರಿ ಮುಂತಾದ ಪ್ರಮುಖ ಉಪವಾಸ ಹಬ್ಬಗಳನ್ನು ಆಚರಿಸಲಾಗುತ್ತದೆ. ಇದರ ಜೊತೆಗೆ ಇನ್ನೂ ಅನೇಕ ಹಬ್ಬಗಳು ಹಾಗೂ ವ್ರತಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

1 ಫೆಬ್ರವರಿ 2023, ಬುಧವಾರ:- ಈ ದಿನದಂದು ಜಯ ಏಕಾದಶಿ ಮತ್ತು ಭೀಷ್ಮ ದ್ವಾದಶಿಯಿದೆ. ಈ ಏಕಾದಶಿಯು ಮಾಘ ಮಾಸದ ಶುಕ್ಲ ಪಕ್ಷದಲ್ಲಿ ಬರುತ್ತದೆ. ಜಯ ಏಕಾದಶಿಯಂದು ಉಪವಾಸ ಮಾಡುವುದರಿಂದ ವ್ಯಕ್ತಿಯ ಪಾಪಗಳು ಕಳೆದು ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ಧಾರ್ಮಿಕ ನಂಬಿಕೆಯಿದೆ. ಹಾಗಾಗಿ ಈ ದಿನ ವಿಷ್ಣುವನ್ನು ಪೂಜಿಸುವುದರ ಜೊತೆಗೆ ಉಪವಾಸವಿರುವುದರಿಂದ ನಿಮಗೆ ಮೋಕ್ಷ ಪ್ರಾಪ್ತಿಯಾಗಲಿದೆ. ಭೀಷ್ಮ ದ್ವಾದಶಿಯ ದಿನ, ಪೂರ್ವಜರನ್ನು ನೆನೆಸಿಕೊಳ್ಳಬೇಕು ಅಂದರೆ ಈ ದಿನ ಪೂರ್ವಜರಿಗಾಗಿ ಮೀಸಲಿಡಲಾಗಿದೆ. ಈ ದಿನದಂದು ಶ್ರೀ ಕೃಷ್ಣನನ್ನು ಆರಾಧಿಸುವ ಸಂಪ್ರದಾಯವೂ ಇದೆ.

2 ಫೆಬ್ರವರಿ 2023, ಗುರುವಾರ:- ಈ ದಿನದಂದು ಗುರು ಪ್ರದೋಷ ವ್ರತವಿದೆ. ಈ ಮಾಸದಲ್ಲಿ ಗುರುವಾರದಂದು ಪ್ರದೋಷ ವ್ರತ ಬಂದಿರುವುದರಿಂದ, ಇದನ್ನು ಗುರು ಪ್ರದೋಷ ವ್ರತ ಎಂದು ಕರೆಯಲಾಗುತ್ತದೆ.

5 ಫೆಬ್ರವರಿ 2023 ಭಾನುವಾರ: ಈ ದಿನದಂದು ಮಾಘ ಪೂರ್ಣಿಮೆ ಅಥವಾ ಹುಣ್ಣಿಮೆಯಿರಲಿದೆ. ಮಾಘ ಪೂರ್ಣಿಮೆಯ ಮಹತ್ವ ಏನೆಂದರೆ ಈ ದಿನ ಗಂಗಾನದಿಯಲ್ಲಿ ಸ್ನಾನ ಮಾಡುವುದರಿಂದ ಮನುಷ್ಯನಲ್ಲಿರುವ ರೋಗ-ರುಜಿನಗಳು ಮಾಯವಾಗುತ್ತದೆ. ಈ ದಿನ ಎಳ್ಳನ್ನು ದಾನ ಮಾಡುವುದರಿಂದ ಜೀವನದ ಎಲ್ಲಾ ತೊಂದರೆಗಳು ದೂರವಾಗುತ್ತವೆ.ಅಲ್ಲದೆ, ಈ ದಿನ ಗುರು ರವಿದಾಸ್ ಜಯಂತಿ. ಒಬ್ಬರನ್ನೊಬ್ಬರು ಪ್ರೀತಿಸಲು ಮತ್ತು ಭಕ್ತಿಯ ಮಾರ್ಗವನ್ನು ಅನುಸರಿಸಲು ಕಲಿಸಿದ ಸಂತ ರವಿದಾಸರ ಜನ್ಮದಿನವನ್ನು ಈ ದಿನದಂದು ಆಚರಿಸಲಾಗುತ್ತದೆ.

9 ಫೆಬ್ರವರಿ 2023, ಗುರುವಾರ:- ಈ ದಿನದಂದು ದ್ವಿಜಪ್ರಿಯ ಸಂಕಷ್ಟ ಚತುರ್ಥಿ. ಇದು ಫಾಲ್ಗುಣ ಮಾಸದ ಸಂಕಷ್ಟಿ ಚತುರ್ಥಿಯಾಗಿದೆ, ಈ ದಿನ ಗಣಪನಿಗೆ ವಿಶೇಷ ಪೂಜಾ ಸತ್ಕಾರಗಳನ್ನು ಮಾಡಲಾಗುತ್ತದೆ. ಈ ಪುಣ್ಯ ಕಾರ್ಯದಿಂದ ಸಂತೋಷ, ಸಮೃದ್ಧಿ ನೆಲೆಸುತ್ತದೆ ಮತ್ತು ತೊಂದರೆಗಳು ಮತ್ತು ಅಡೆತಡೆಗಳು ದೂರವಾಗುತ್ತವೆ ಎಂಬ ನಂಬಿಕೆಯಿದೆ.

12 ಫೆಬ್ರವರಿ 2023 ಭಾನುವಾರ: ಈ ದಿನದಂದು ಯಶೋದಾ ಜಯಂತಿಯನ್ನು ಆಚರಿಸಲಾಗುತ್ತದೆ. ಶ್ರೀಕೃಷ್ಣನ ತಾಯಿ ಯಶೋದೆಯ ಜನ್ಮದಿನವನ್ನು ಪೂಜಿಸುವುದರಿಂದ ವ್ಯಕ್ತಿಯ ಜೀವನದಲ್ಲಿ ಅದೃಷ್ಟವು ಬರುತ್ತದೆ ಎಂಬುದು ಧಾರ್ಮಿಕ ನಂಬಿಕೆಯಾಗಿದೆ.

13 ಫೆಬ್ರವರಿ 2023 ಸೋಮವಾರ: ಈ ದಿನದಂದು ಕುಂಭ ಸಂಕ್ರಾಂತಿ, ಶಬರಿ ಜಯಂತಿ, ಕಾಲಷ್ಟಮಿಯಿದೆ. ಸೂರ್ಯನು ಪ್ರತಿ ತಿಂಗಳು ತನ್ನ ರಾಶಿಯನ್ನು ಬದಲಾಯಿಸುತ್ತಿರುತ್ತಾನೆ, ಫೆಬ್ರವರಿಯಲ್ಲಿ ಸೂರ್ಯನು ಮಕರ ರಾಶಿಯನ್ನು ತೊರೆದು ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಈ ದಿನದಂದು ಶಿವನನ್ನು ಕಾಲಭೈರವನ ಉಗ್ರ ರೂಪದಲ್ಲಿ ಪೂಜಿಸಲಾಗುತ್ತದೆ, ಈ ರೀತಿ ಪೂಜಿಸುವುದರಿಂದ ಶತ್ರುಗಳ ಮೇಲೆ ವಿಜಯ ತಂದು ಕೊಡುತ್ತದೆ.

17 ಫೆಬ್ರವರಿ 2023 ಶುಕ್ರವಾರ: ಈ ದಿನದಂದು ಪುಣ್ಯ ವೃತವಾದ ವಿಜಯ ಏಕಾದಶಿಯಿದೆ. ಈ ಮಹಾನ್ ವ್ರತವನ್ನು ಆಚರಿಸುವುದರಿಂದ, ಒಬ್ಬ ವ್ಯಕ್ತಿಯು ವಾಜಪೇಯಿ ಯಾಗದ ಫಲವನ್ನು ಪಡೆಯುತ್ತಾನೆ ಹಾಗೂ ವಿಜಯ ಏಕಾದಶಿ ತನ್ನ ಹೆಸರಿನಲ್ಲೆ ಇರುವ ಪ್ರಕಾರ ಶತ್ರುಗಳ ವಿರುದ್ಧ ವಿಜಯವನ್ನು ನಮಗೆ ನೀಡುತ್ತದೆ.

18 ಫೆಬ್ರವರಿ 2023 ಶನಿವಾರ: ಈ ದಿನವು ಬಹಳ ವಿಶೇಷವಾದ ದಿನವಾಗಿದೆ. ಮಹಾಶಿವರಾತ್ರಿ, ಮಾಸಿಕ ಶಿವರಾತ್ರಿ, ಪ್ರದೋಷ ವ್ರತ, ಶನಿ ತ್ರಯೋದಶಿ ಯನ್ನು ಆಚರಿಸಲಾಗುತ್ತದೆ. ಮಹಾಶಿವರಾತ್ರಿ ಹಬ್ಬವು ಶಿವ ಮತ್ತು ಶಕ್ತಿಯ ಸಂಗಮದ ದಿನವಾಗಿದೆ. ಪುರಾಣಗಳ ಪ್ರಕಾರ, ಈ ದಿನ ತಾಯಿ ಪಾರ್ವತಿ ಮತ್ತು ಭಗವಾನ್ ಶಿವನ ವಿವಾಹವು ನಡೆದಿದ್ದು, ಅತ್ಯಂತ ಮಹತ್ವವನ್ನು ಪಡೆದಿದೆ. ಜೊತೆಗೆ ಈ ದಿನ 12 ಜ್ಯೋತಿರ್ಲಿಂಗಗಳು ಕಾಣಿಸಿಕೊಂಡಿವೆ ಎಂಬ ನಂಬಿಕೆಯು ಕೂಡ ಇದೆ.

20 ಫೆಬ್ರವರಿ 2023 ಸೋಮವಾರ:- ಈ ದಿನ ಸೋಮಾವತಿ ಅಮಾವಾಸ್ಯೆಯಿರಲಿದೆ. ಅಮವಾಸ್ಯೆಯ ತಿಥಿ ಸೋಮವಾರದಂದು ಬರುವ ದಿನವನ್ನು ಸೋಮಾವತಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಈ ದಿನದಂದು ವಿವಾಹಿತ ಮಹಿಳೆಯರು ಅಶ್ವತ್ಥಮರವನ್ನು ಪೂಜಿಸುತ್ತಾರೆ ಮತ್ತು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ಉಪವಾಸ ಹಿಡಿಯುತ್ತಾರೆ. ಸೋಮಾವತಿ ಮತ್ತು ಶನಿ ಅಮಾವಾಸ್ಯೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.

21 ಫೆಬ್ರವರಿ ಮಂಗಳವಾರ:-
ಈ ದಿನವನ್ನು ರಾಮಕೃಷ್ಣ ಪರಮಹಂಸರ ಜಯಂತಿಯ ದಿನವನ್ನಾಗಿ ದೇಶದಾದ್ಯಂತ ಆಚರಣೆ ಮಾಡಲಾಗುತ್ತದೆ.

23 ಫೆಬ್ರವರಿ 2023 ಗುರುವಾರ:
ಈ ದಿನದಂದು ವಿನಾಯಕ ಚತುರ್ಥಿಯನ್ನು ಆಚರಿಸಲಾಗುತ್ತದೆ.

25 ಫೆಬ್ರವರಿ ಶನಿವಾರ: ಈ ದಿನದಂದು ಸ್ಕಂದ ಷಷ್ಠಿಯಿದೆ.

27 ಫೆಬ್ರವರಿ 2023 ಸೋಮವಾರ:
ಹೋಲಾಷ್ಟಕ ಪ್ರಾರಂಭ, ಮಾಸಿಕ ದುರ್ಗಾಷ್ಟಮಿ, ರೋಹಿಣಿ ಉಪವಾಸವನ್ನು ಆಚರಿಸಲಾಗುತ್ತದೆ.
ಹೋಳಿ ಹಬ್ಬದ ಎಂಟು ದಿನಗಳ ಮುಂಚಿತವಾಗಿ ಹೋಲಾಷ್ಟಕವು ನಡೆಯುತ್ತದೆ. ಈ ಬಾರಿ ಹೋಳಿಯು ಮಾರ್ಚ್ 7, 2023 ರಂದು ನಡೆಯಲಿದ್ದು, ಈ ಹೋಲಾಷ್ಟಕ್ ಮಾರ್ಚ್ 6 ರವರೆಗೆ ಮುಂದುವರಿಯುತ್ತದೆ. ಈ ಅವಧಿಯಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ.