Home News Pakistan : ಯುದ್ಧದ ಭಯ- ಪಾಕಿಸ್ತಾನದಲ್ಲಿ ಸೈನಿಕರ ಸಾಮೂಹಿಕ ರಾಜೀನಾಮೆ!!

Pakistan : ಯುದ್ಧದ ಭಯ- ಪಾಕಿಸ್ತಾನದಲ್ಲಿ ಸೈನಿಕರ ಸಾಮೂಹಿಕ ರಾಜೀನಾಮೆ!!

Hindu neighbor gifts plot of land

Hindu neighbour gifts land to Muslim journalist

Pakistan : ಪಹಲ್ಗಾಮ್ ದಾಳಿ ಬಳಿಕ ಭಾರತವು ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಸಜ್ಜಾಗಿದೆ. ಈಗಾಗಲೇ ಪಾಕ್ ಗೆ ಭಾರತವು ಕೆಲವು ಮಾಸ್ಟರ್ ಸ್ಟ್ರೋಕ್ ಗಳನ್ನು ನೀಡಿದೆ. ಈ ಬೆನ್ನಲ್ಲೇ ಇಂಡಿಯಾ ಮತ್ತು ಪ್ಯಾಕ್ ಯುದ್ಧ ಆಗುವುದು ಪಕ್ಕ ಎಂದು ವಿಶ್ಲೇಷಿಸಲಾಗುತ್ತಿದ್ದು ಯುದ್ಧ ನಡೆಯುವಂತಹ ಕಾರ್ಮೋಡಗಳು ಕವಿದಿದೆ. ಇದೀಗ ಯುದ್ಧಕ್ಕೆ ತಾನು ಎಲ್ಲ ರೀತಿಯಲ್ಲೂ ತಯಾರಿದ್ದೇನೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಪಾಕಿಸ್ತಾನಕ್ಕೆ ತನ್ನ ಸೈನಿಕರೇ ಶಾಕ್ ನೀಡುತ್ತಿದ್ದಾರೆ.

Mangaluru: ಕುಡುಪು: ಕೊಲೆಯಾದ ಸ್ಥಿತಿಯಲ್ಲಿ ಅಪರಿಚಿತ ಯುವಕನ ಶವ ಪತ್ತೆ!

ಹೌದು, ನಮ್ಮಲ್ಲೂ ಕೂಡ ಪ್ರಬಲವಾದ ಮಾರಕಾಸ್ತ್ರಗಳಿವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಪಾಕಿಸ್ತಾನದ ಪಾಡು ಹೇಳ ತೀರದಾಗಿದೆ. ಯಾಕೆಂದರೆ ಪಾಕಿಸ್ತಾನದಲ್ಲಿ ಸೈನಿಕರು ಭಾರತ ಅಟ್ಯಾಕ್ ಮಾಡುತ್ತದೆ ಎನ್ನುವ ಯುದ್ಧದ ಭಯದಿಂದ ಸಾಮೂಹಿಕ ರಾಜೀನಾಮೆಯನ್ನು ನೀಡುತ್ತಿದ್ದಾರೆ ಎನ್ನುವ ಸುದ್ದಿ ಬಂದಿದೆ.

Bakrabail: ಬೈಕ್‌ನಲ್ಲಿ ತೆರಳುತ್ತಿದ್ದ ಅಡಿಕೆ ವ್ಯಾಪಾರಿಗೆ ಗುಂಡೇಟು!

ಕೇವಲ ಎರಡು ದಿನಗಳಲ್ಲಿ ಸುಮಾರು 5,000 ಅಧಿಕಾರಿಗಳು ಮತ್ತು ಸೈನಿಕರು ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ. ಭಾರತವು ಯಾವುದೇ ಕ್ಷಣದಲ್ಲಿ ಪ್ರಬಲ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಬಹುದು ಎಂಬ ಭಯದಿಂದ ಪಾಕಿಸ್ತಾನಿ ಸೈನಿಕರ ಕುಟುಂಬಗಳು ಉದ್ಯೋಗಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸುತ್ತಿವೆಯಂತೆ. ಈಗ ರಾಜೀನಾಮೆ ನೀಡುವವರ ಸಂಖ್ಯೆ ಜಾಸ್ತಿಯಾಗುತ್ತಿದ್ದಂತೆ ಪಾಕ್‌ ಸೇನೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದೆ. ಸೇನೆಯ ನಿಯಮವನ್ನು ಉಲ್ಲಂಘಿಸಿದರೆ ಅವರ ವಿರುದ್ಧ ಪಾಕಿಸ್ತಾನ ಸೇನಾ ಕಾಯ್ದೆ(1952) ಅಡಿ ಕ್ರಮ ಜರುಗಿಸಲಾಗುವುದು ಎಂದು ವಾರ್ನಿಂಗ್‌ ನೀಡಿದ ಆದೇಶ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.