Home News Fashion Tips: ಹುಡುಗರೇ, ಪ್ರತಿದಿನವೂ ನೀವು ಈ ರೀತಿ ಇದ್ರೆ ಹುಡುಗಿಯರು ಕನಸಲ್ಲೂ ನಿಮ್ಮನ್ನು ಕನವರಿಸುತ್ತಾರೆ...

Fashion Tips: ಹುಡುಗರೇ, ಪ್ರತಿದಿನವೂ ನೀವು ಈ ರೀತಿ ಇದ್ರೆ ಹುಡುಗಿಯರು ಕನಸಲ್ಲೂ ನಿಮ್ಮನ್ನು ಕನವರಿಸುತ್ತಾರೆ !

Fashion Tips

Hindu neighbor gifts plot of land

Hindu neighbour gifts land to Muslim journalist

Fashion Tips: ಪ್ರೀತಿ ಎಂಬುದು ಒಂದು ಭಾವನೆ. ಹೀಗಾಗಿಯೇ ಪ್ರಪಂಚದಲ್ಲಿ ರೊಟ್ಟಿಗೆ ಹಸಿದವರಿಗಿಂತ ಪ್ರೀತಿಗಾಗಿ ಹಾತೊರೆಯುವವರು ಜಾಸ್ತಿ ಎಂದು ಮಹಾನುಭಾವರೊಬ್ಬರು ಹೇಳಿದ್ದರು. ಕೆಲವರು ಸಂಗಾತಿಯೊಂದಿಗಿನ ಪ್ರೀತಿಯಿಂದಲೇ ಜೀವನ ರೂಪಿಸಿಕೊಂಡರೆ, ಮತ್ತೆ ಕೆಲವರು ಪ್ರೀತಿ ಹಾಗೂ ಯುದ್ಧದಲ್ಲಿ ಮಾಡಿದ್ದೆಲ್ಲವೂ ಸರಿ ಎಂಬಂತೆ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಹುಡುಗರೇ, ಪ್ರತಿದಿನವೂ ನೀವು ಈ ರೀತಿ ಇದ್ರೆ ಹುಡುಗಿಯರು ಕನಸಲ್ಲೂ ನಿಮ್ಮನ್ನು ಕನವರಿಸುತ್ತಾರೆ !

ಹುಡುಗರೇ ಪ್ರತಿದಿನ ನಿಮ್ಮ ಉಡುಗೆ, ತೊಡುಗೆ ಮತ್ತು ಹೇರ್ ಸ್ಟೈಲ್ (Fashion Tips) ಬದಲಾಯಿಸಿ. ಕೆಲವು ಡ್ರಸಿಂಗ್ ಸೆನ್ಸ್ನಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಂಡರೆ ಸಾಕು. ಆಗ ಹುಡುಗಿಯರು ನಿಮ್ಮನ್ನು ಬಿಟ್ಟು ಕದಲುವುದಿಲ್ಲ. ಸಂದರ್ಭಕ್ಕೆ ಅನುಗುಣವಾಗಿ ತಯಾರಾಗುವುದರಿಂದ ಯಾವಾಗಲೂ ನೀವು ಒಂದೇ ಲುಕ್ನಲ್ಲಿ ಕಾಣುವುದಿಲ್ಲ. ಇದರರ್ಥ ನೀವು ಕಾರ್ಯಕ್ರಮ, ಪಾರ್ಟಿ, ಬ್ಯುಸಿನೆಸ್ ಹೀಗೆ ಎಲ್ಲಿಗೆ ಹೇಗೆ ಸಿದ್ಧರಾಗಬೇಕು ಎಂದು ತಿಳಿದುಕೊಳ್ಳಿ.

ಬಟ್ಟೆಗಳು ಲೂಸ್ ಆಗಿದ್ದರೆ ಅದು ನಿಮ್ಮ ಲುಕ್ ಹಾಳು ಮಾಡುತ್ತದೆ. ಬಟ್ಟೆ ಫಿಟ್ ಆಗಿದ್ದರೆ ನಿಮ್ಮ ದೇಹದ ಆಕಾರವು ಉತ್ತಮವಾಗಿ ಕಾಣುತ್ತದೆ. ಇದು ನಿಮ್ಮ ನೋಟವನ್ನು ಸ್ವಲ್ಪಮಟ್ಟಿಗೆ ಬದಲಾಯಿಸುತ್ತದೆ. ಹಾಗೇ ಯಾವಾಗಲೂ ಒಂದೇ ತರಹದ ಬಟ್ಟೆಗಳನ್ನು ಧರಿಸುವ ಬದಲು, ಕೆಲವು ಹೊಸ ಬಣ್ಣಗಳ ಬಟ್ಟೆಗಳನ್ನು ಧರಿಸಲು ಪ್ರಯತ್ನಿಸಿ.

ನಿಮ್ಮ ಕಂಪ್ಲೀಟ್ ಲುಕ್ ಬಗ್ಗೆ ಗಮನ ಹರಿಸಿ. ವಾಚ್, ಬೆಲ್ಟ್, ಸ್ಯಾಂಡಲ್ ಅಥವಾ ಶೂಗಳು, ವಾಲೆಟ್ ಕೂಡ ಮ್ಯಾಚಿಂಗ್ ಆಗಿರಬೇಕು. ಆಗ ಮಾತ್ರ ನೀವು ಸ್ಟೈಲಿಶ್ ಆಗಿ ಕಾಣುತ್ತೀರಿ. ಎಲ್ಲರೂ ತೊಡುವ ಬಟ್ಟೆಯನ್ನು ಹೊರತುಪಡಿಸಿ ನಿಮಗೆ ಸೂಟ್ ಆಗುವಂತಹ ವೆರೈಟಿ ಡ್ರಸ್ ಧರಿಸಿ, ನಿಜಕ್ಕೂ ಇದು ನಿಮಗೆ ಡಿಫರೆಂಟ್ ಲುಕ್ ನೀಡುತ್ತದೆ ಮತ್ತು ಹುಡುಗಿಯರು ಇಂಪ್ರೆಸ್ ಆಗುತ್ತಾರೆ.

 

ಇದನ್ನು ಓದಿ: Navratri Festival : ನವರಾತ್ರಿ ಸಮಯದಲ್ಲಿ ಮನೆಯಲ್ಲಿ ಯಾವುದೇ ಕಾರಣಕ್ಕೂ ಈ ವಸ್ತುಗಳನ್ನು ಇಡಬೇಡಿ !! ಇಟ್ರೆ ನೀವು ಕೆಟ್ಟಂತೆ !!