Home News ಖ್ಯಾತ ಪೋಷಕ ನಟ, ನಿರ್ದೇಶಕ ಶರಣ್ ರಾಜ್ ವಿಧಿವಶ

ಖ್ಯಾತ ಪೋಷಕ ನಟ, ನಿರ್ದೇಶಕ ಶರಣ್ ರಾಜ್ ವಿಧಿವಶ

Hindu neighbor gifts plot of land

Hindu neighbour gifts land to Muslim journalist

Sharan Raj: ತಮಿಳಿನ ಖ್ಯಾತ ನಿರ್ದೇಶಕ ವೆಟ್ರಿಮಾರನ್ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಶರಣ್‌ ರಾಜ್‌(Sharan Raj )(26) ಭೀಕರ ರಸ್ತೆ ಅಫಘಾತಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ನಿನ್ನೆ ರಾತ್ರಿ ಸುಮಾರು 11 ಗಂಟೆ ಚೆನ್ನೈನ ನಗರದ ಕೆ.ಕೆ.ನಗರ್‌ನಲ್ಲಿ ಬೈಕ್‌ ತೆರಳುತ್ತಿದ್ದಾಗ ವೇಗವಾಗಿ ಚಲಿಸುತ್ತಿದ್ದ ಕಾರೊಂದು ಬಂದು ಅಫಘಾತಗೊಂಡು ಶರಣ್‌ ರಾಜ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾಲಿವುಡ್‌ ನಲ್ಲಿ ಸಹನಟನಾಗಿ ಗುರುತಿಸಿಕೊಂಡಿರುವ ಪಳನಿಯಪ್ಪನ್ ಅವರ ಕಾರು ಶರಣ್ ರಾಜ್ ಬೈಕ್‌ಗೆ ಡಿಕ್ಕಿ ಹೊಡಿದಿದೆ ಎನ್ನಲಾಗಿದೆ.

ಪಳನಿಯಪ್ಪನ್ ಮದ್ಯದ ಅಮಲಿನಲ್ಲಿ ಕಾರು ಚಲಾಯಿಸಿ ಡಿಕ್ಕಿ ಹೊಡೆದಿದ್ದಾರೆ ಎಂದು ಮಾಹಿತಿ ತಿಳಿದಿದ್ದು, ಇದೀಗ ವಿಚಾರಣೆ ನಡೆಸಿದ ಬಳಿಕ ಬಂಧನ ಮಾಡಲಾಗಿದೆ ಎಂದು ವರದಿಯಾಗಿದೆ.

ಭಾರತೀಯ ಚಿತ್ರರಂಗದಲ್ಲಿ ತನ್ನದೇ ಆದ ಹೆಸರನ್ನು ಗಳಿಸಿದ ನಿರ್ದೇಶಕ ವೆಟ್ರಿಮಾರನ್ ʻವಡಾ ಚೆನ್ನೈʼ ಮತ್ತು ʻಅಸುರನ್‌ ʼಸಿನಿಮಾಗಳಲ್ಲಿ ಶರಣ್ ‌ ರಾಜ್‌ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದರು. ಅಲ್ಲದೇ ʻಅಸುರನ್‌ ಫಿಲ್ಮ್‌ನಲ್ಲಿ ಪೋಷಕ ಪಾತ್ರದಲ್ಲೂ ನಟಿಸಿದ್ದರು, ಖ್ಯಾತ ಸಹಾಯಕ ನಿರ್ದೇಶಕ ನಿಧನಕ್ಕೆ ಸಿನಿ ತಾರ ಬಳಗವೇ ಸಂತಾಪ ಸೂಚಿಸಿದ್ದಾರೆ.