Home latest ಮೂರು ಮಕ್ಕಳ ತಾಯಿ ಪ್ರಿಯಕರನೊಂದಿಗೆ ಸೌದಿಗೆ ಪರಾರಿ| ನೊಂದ ಗಂಡ ಮಕ್ಕಳು ಕೊನೆಗೆ ಮಾಡಿದ್ದಾದರೂ ಏನು?

ಮೂರು ಮಕ್ಕಳ ತಾಯಿ ಪ್ರಿಯಕರನೊಂದಿಗೆ ಸೌದಿಗೆ ಪರಾರಿ| ನೊಂದ ಗಂಡ ಮಕ್ಕಳು ಕೊನೆಗೆ ಮಾಡಿದ್ದಾದರೂ ಏನು?

Hindu neighbor gifts plot of land

Hindu neighbour gifts land to Muslim journalist

ಅದೊಂದು ಮುದ್ದಾದ ಕುಟುಂಬ, ಮೂರು ಮಕ್ಕಳು. ಆದರೂ ಆ ಸಂಸಾರದ ಹಳಿ ತಪ್ಪಿತ್ತು. ಏಕೆಂದರೆ ಆ ಕುಟುಂಬದ ಹೆಣ್ಣು ಇನ್ನೊಬ್ಬನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಳು. ನಂತರ ದೇಶ ಬಿಟ್ಟು ಸೌದಿ ಅರೇಬಿಯಾಗೆ ಪ್ರಿಯಕರನೊಂದಿಗೆ ಪರಾರಿಯಾದಳು. ಇದನ್ನು ಸಹಿಸದ ಗಂಡ ಮಕ್ಕಳಿಗೂ ವಿಷಕೊಟ್ಟು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಹೆಂಡತಿಯ ಅನೈತಿಕ ಸಂಬಂಧಕ್ಕೆ ಆ ಕುಟುಂಬ ಛಿದ್ರವಾಗಿದೆ. ಮದುವೆಯಾಗಿ ಮೂರು ಮಕ್ಕಳಿದ್ದರೂ ಇನ್ನೊಬ್ಬನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದವಳು ಕುಟುಂಬ ಬಿಟ್ಟು ಓಡಿ ಹೋಗಿದ್ದಾಳೆ. ಅದು ಕೂಡಾ ದೇಶಾಂತರ. ಮೂರು ಮಕ್ಕಳ ತಾಯಿ ಪ್ರಿಯಕರನ ಜೊತೆ ಸೌದಿ ಅರೇಬಿಯಾಗೆ ಓಡಿ ಹೋಗಿದ್ದಾಳೆ. ಅಲ್ಲಿ ಮೋಜು ಮಸ್ತಿ ಮಾಡುತ್ತಾ ಗಂಡನಿಗೆ ವೀಡಿಯೋ ಕರೆ ಮಾಡುತ್ತಿದ್ದಳು. ಗಂಡ ಮತ್ತು ಮಕ್ಕಳು ವಾಪಸ್ ಬಾ ಎಂದು ಎಷ್ಟು ಗೋಗರೆದರೂ ಬರದಿದ್ದಾಗ ಗಂಡ ಮಕ್ಕಳಿಗೂ ವಿಷ ನೀಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ರಾಜಧಾನಿ ಪಕ್ಕದ ತುಮಕೂರಿನಲ್ಲಿ.

ಹೆಂಡತಿ ಬಿಟ್ಟು ಹೋದ ದಿನದಿಂದ ಮಾನಸಿಕ ಖಿನ್ನತೆಯಿಂದ ನರಳುತ್ತಿದ್ದ ಎನ್ನಲಾಗಿದೆ. ಆತ ಮೃತಪಟ್ಟಿದ್ದು ಮಕ್ಕಳ ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ತುಮಕೂರಿನ ಪಿಎಚ್ ಕಾಲೋನಿಯಲ್ಲಿ ವಾಸಿಸುತ್ತಿದ್ದ ಸಮೀವುಲ್ಲಾ ಎಂಬುವವನೇ ಮೃತ ದುರ್ದೈವಿ. ಮಕ್ಕಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸಾವು ಬದುಕಿನ ನಡುವೆ ಮಕ್ಕಳು ಹೋರಾಡುತ್ತಿದ್ದಾರೆ. ತನಗೆ ಮೂರು ಮಕ್ಕಳಿದ್ದಾರೆ ಎಂದು ಮರೆತ ಕರುಣೆಯಿಲ್ಲದ ತಾಯಿ ಇದ್ದಾರಾ ಎನ್ನುವುದು ನಿಜಕ್ಕೂ ಆಘಾತಕಾರಿ. ಈಗ ತಾಯಿ ಮಾಡಿದ ತಪ್ಪಿಗೆ ಮಕ್ಕಳು ನರಕ ಅನುಭವಿಸುವಂತಾಗಿರುವುದು ದುರದೃಷ್ಟಕರ.