Home Karnataka State Politics Updates Excise Policy Scam : ಬಿಜೆಪಿಯಿಂದ ನನಗೆ ಬಿಗ್ ಆಫರ್ ಬಂದಿದೆ -ಮನೀಶ್ ಸಿಸೋಡಿಯಾ

Excise Policy Scam : ಬಿಜೆಪಿಯಿಂದ ನನಗೆ ಬಿಗ್ ಆಫರ್ ಬಂದಿದೆ -ಮನೀಶ್ ಸಿಸೋಡಿಯಾ

Hindu neighbor gifts plot of land

Hindu neighbour gifts land to Muslim journalist

ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು, ಬಿಜೆಪಿ ನನಗೆ ಆಫರ್ ಮಾಡಿದೆ ಎಂದು ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ. ಆಮ್ ಆದ್ಮಿ ಪಕ್ಷವನ್ನು ಬಿಟ್ಟು ನಮ್ಮ ಪಕ್ಷಕ್ಕೆ ಬನ್ನಿ, ನಿಮ್ಮ ಎಲ್ಲಾ ಸಿಬಿಐ ತನಿಖೆ ಮತ್ತು ಎಲ್ಲ ಪ್ರಕರಣಗಳಿಂದ ಮುಕ್ತಿ ನೀಡುವಂತೆ ಮಾಡುತ್ತೇವೆ ಎಂಬ ಸಂದೇಶ ಬಿಜೆಪಿಯಿಂದ ಬಂದಿದೆ ಎಂದು ಹೇಳಿದ್ದಾರೆ.

ಮದ್ಯದ ನೀತಿ ಉಲ್ಲಂಘನೆಗೆ ಸಂಬಂಧಿಸಿದಂತೆ ತನಿಖಾ ಸಂಸ್ಥೆ ಸಿಬಿಐ ತನಿಖೆಯನ್ನು ನಡೆಸುತ್ತಿರುವ ಸಂದರ್ಭದಲ್ಲಿ ಬಿಜೆಪಿ ನನಗೆ ಆಫರ್ ಮಾಡಿತ್ತು ಎಂದು ಮನೀಶ್ ಸಿಸೋಡಿಯಾ ಹೇಳಿದ್ದಾರೆ.

ನನಗೆ ಬಿಜೆಪಿಯಿಂದ ಸಂದೇಶ ಬಂದಿದೆ, ಆಪ್ ಪಕ್ಷವನ್ನು ತೊರೆದು ಬಿಜೆಪಿಗೆ ಸೇರಿಕೊಳ್ಳಿ, ಎಲ್ಲಾ ಸಿಬಿಐ, ಇಡಿ ಪ್ರಕರಣಗಳನ್ನು ಮುಚ್ಚಲಾಗುವುದು ಎಂಬುದಾಗಿ ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ. ತಮ್ಮ ವಿರುದ್ಧದ ಎಲ್ಲಾ ಪ್ರಕರಣಗಳು ಸುಳ್ಳು ಎಂದು ಸಿಸೋಡಿಯಾ ಹೇಳಿದ್ದಾರೆ. ಬಿಜೆಪಿಗೆ ನೀವು ಏನು ಬೇಕಾದರೂ ಮಾಡಲಿ ಎಂದು ಸವಾಲು ಹಾಕಿದ್ದಾರೆ.

ಈಗ ಮನೀಶ್ ಅವರು ಬಿಜೆಪಿಗೆ ನನ್ನ ಪ್ರತ್ಯುತ್ತರ ನೀಡಿದ್ದಾರೆ : ” ಸಿಸೋಡಿಯಾ ನಾನು ರಜಪೂತ, ಮಹಾರಾಣಾ ಪ್ರತಾಪ್ ವಂಶಸ್ಥ. ನಾನು ನನ್ನ ತಲೆಯನ್ನು ಕತ್ತರಿಸುತ್ತೇನೆ ಆದರೆ ಭ್ರಷ್ಟ ಪಿತೂರಿಗಾರರ ಮುಂದೆ ಬಗ್ಗುವುದಿಲ್ಲ. ನನ್ನ ಮೇಲಿನ ಎಲ್ಲಾ ಪ್ರಕರಣಗಳು ಸುಳ್ಳು, ನೀವು ಏನು ಬೇಕಾದರೂ ಮಾಡಿ” ಎಂದು ಹೇಳಿದ್ದಾರೆ.