Home News Kerala: ಕೇರಳದಲ್ಲಿ ಅಬಕಾರಿ ಅಧಿಕಾರಿ, ಕುಟುಂಬ ಶವವಾಗಿ ಪತ್ತೆ!

Kerala: ಕೇರಳದಲ್ಲಿ ಅಬಕಾರಿ ಅಧಿಕಾರಿ, ಕುಟುಂಬ ಶವವಾಗಿ ಪತ್ತೆ!

Hindu neighbor gifts plot of land

Hindu neighbour gifts land to Muslim journalist

Kerala: ಕೇಂದ್ರ ಅಬಕಾರಿ ಮತ್ತು ಜಿಎಸ್‌ಟಿ ಇಲಾಖೆಯ ಹೆಚ್ಚುವರಿ ಆಯುಕ್ತ, ಅವರ ತಾಯಿ ಹಾಗೂ ಸಹೋದರಿ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾದ ಘಟನೆ ಕೇರಳದಲ್ಲಿ (Kerala) ನಡೆದಿದೆ.

ಮನೀಶ್ ವಿಜಯ್ ಮೃತ ಅಧಿಕಾರಿ. ಮೂಲತಃ ಜಾರ್ಖಂಡ್ (Jharkhand) ಮೂಲದವಾರಗಿದ್ದು, ಕೇರಳದ ಎರ್ನಾಕುಲಂ (Ernakulam) ಜಿಲ್ಲೆಯ ಕಕ್ಕನಾಡ್ ಕಸ್ಟಮ್ಸ್ ಕ್ವಾಟ್ರಸ್‌ನಲ್ಲಿ ವಾಸಿಸುತ್ತಿದ್ದರು. ಮನೀಶ್ ವೈಯಕ್ತಿಕ ಕಾರಣಕ್ಕೆ ನಾಲ್ಕು ದಿನಗಳ ರಜೆ ತೆಗೆದುಕೊಂಡಿದ್ದರು. ನಾಲ್ಕು ದಿನ ಕಳೆದ ಬಳಿಕವೂ ಕೆಲಸಕ್ಕೆ ಬಾರದ ಕಾರಣ ಸಹೋದ್ಯೋಗಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಬಾಗಿಲು ತೆರೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಇದು ಆತ್ಮಹತ್ಯೆಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ತನಿಖೆ ವೇಳೆ ಕೋಣೆಯಲ್ಲಿ ಒಂದು ಡೈರಿ ಸಿಕ್ಕಿದ್ದು, ಅದರಲ್ಲಿ ಅವರ ಸಹೋದರಿ ವಿದೇಶದಲ್ಲಿ ವಾಸಿಸುತ್ತಿದ್ದಾರೆ. ಅವರ ಸಾವಿನ ಬಗ್ಗೆ ಸಹೋದರಿಗೆ ತಿಳಿಸಬೇಕು ಎಂದು ಬರೆಯಲಾಗಿದೆ. ಸದ್ಯ ಮನೀಶ್ ಅವರ ಸಹೋದರಿ ವಿದೇಶದಿಂದ ಬಂದ ನಂತರ ಶವಗಳ ಮರಣೋತ್ತರ ಪರೀಕ್ಷೆ ನಡೆಸಲಾಗುವುದು. ಘಟನೆ ಸಂಬಂಧ ಅಸ್ವಾಭಾವಿಕ ಸಾವಿನ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.