Home News EV test plant: ಬೆಂಗಳೂರಿನಲ್ಲಿ EV ಬ್ಯಾಟರಿ ಪರೀಕ್ಷಾ ಘಟಕಕ್ಕೆ ಶಂಕುಸ್ಥಾಪನೆ: ಐಟಿ ಸಿಟಿಗೆ...

EV test plant: ಬೆಂಗಳೂರಿನಲ್ಲಿ EV ಬ್ಯಾಟರಿ ಪರೀಕ್ಷಾ ಘಟಕಕ್ಕೆ ಶಂಕುಸ್ಥಾಪನೆ: ಐಟಿ ಸಿಟಿಗೆ ಮತ್ತೊಂದು ಉದ್ಯಮ

EV test plant

Hindu neighbor gifts plot of land

Hindu neighbour gifts land to Muslim journalist

EV test plant: ಬೆಂಗಳೂರಿನ ಜಕ್ಕೂರಿನಲ್ಲಿರುವ NTH-RRSL ಕ್ಯಾಂಪಸ್‌ನಲ್ಲಿ ಇಂದು ಬಹು ನಿರೀಕ್ಷಿತ EV ಬ್ಯಾಟರಿ ಮತ್ತು ಚಾರ್ಜರ್ ಪರೀಕ್ಷಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ. ಎಲೆಕ್ಟ್ರಿಕ್ ವೆಹಿಕಲ್ (ಇವಿ) ಉದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. EV ಬ್ಯಾಟರಿ ಮತ್ತು ಚಾರ್ಜರ್ ತಯಾರಿಕಾ ವಲಯವನ್ನು ನಿರ್ಮಿಸುತ್ತಿದೆ ಎಂದು ಹೇಳಿದರು.

EV ಉದ್ಯಮದಲ್ಲಿ ಸುಸ್ಥಿರ ಮತ್ತು ನವೀನ ಬದಲಾವಣೆ ತರುವಲ್ಲಿ ಭಾರತ ಬದ್ಧತೆ ಪ್ರದರ್ಶಿಸಿ, ಗಮನಾರ್ಹ ಪ್ರಗತಿ ಸಾಧಿಸುತ್ತಿದೆ ಎಂದರು. ಹಾಗೂ ಬೆಂಗಳೂರು ಮಾದರಿಯಲ್ಲಿ ಮುಂಬೈ ಮತ್ತು ಕೊಲ್ಕತ್ತಾದಲ್ಲಿ ಸಹ ಶೀಘ್ರದಲ್ಲೇ EV ಬ್ಯಾಟರಿ ಚಾರ್ಜರ್ ಮತ್ತು ಪರೀಕ್ಷಾ ಘಟಕ ಸ್ಥಾಪಿಸಲು ನ್ಯಾಶನಲ್ ಟೆಸ್ಟ್ ಹೌಸ್ (NTH) ಸಜ್ಜಾಗಿದೆ ಎಂದು ತಿಳಿಸಿದರು.

ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ EV ಉದ್ಯಮ ವೇಗವಾಗಿ ಬೆಳೆಯುತ್ತಿದ್ದು, ಇದಕ್ಕೆ ಸಾಥ್ ನೀಡುವಂತೆ EV ಬ್ಯಾಟರಿ ಮತ್ತು ಚಾರ್ಜರ್ ತಯಾರಿಕಾ ವಲಯಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದರು. EV ಚಾರ್ಜರ್ ಮತ್ತು ಪರೀಕ್ಷಾ ಘಟಕವು ಪರದೇಶಗಳನ್ನು ಅವಲಂಬಿಸದೆ ಸ್ಥಳೀಯವಾಗಿ ನಿರ್ಣಾಯಕ ಪರೀಕ್ಷೆಗಳನ್ನು ನಡೆಸಲು ಅನುವು ಮಾಡಿಕೊಡಲಿದೆ ಎಂದರು.

ಪಂಬನ್ ಸೇತುವೆ, ಮೆಟ್ರೋ ರೈಲು ಯೋಜನೆಗಳು, ಬುಲೆಟ್ ರೈಲು ಯೋಜನೆ, ಜಲ ಜೀವನ್ ಮಿಷನ್, ಡ್ರೋನ್ ಪ್ರಮಾಣೀಕರಣ ಮತ್ತಿತರ ಪ್ರಮುಖ ಯೋಜನೆಗಳಲ್ಲಿ EV ನಿರ್ಣಾಯಕ ಪಾತ್ರ ವಹಿಸಿದೆ ಎಂದರು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ತಯಾರಕರಿಗೆ ಗಮನಾರ್ಹ ಬೇಡಿಕೆ ಇದೆ. ನಮ್ಮ ಉತ್ಪನ್ನಗಳು ಜಾಗತಿಕ ಗುಣಮಟ್ಟವನ್ನು ತಲುಪುತ್ತಿದ್ದು, ರಫ್ತಿಗೆ ಉತ್ತಮವಾಗಿದೆ ಎಂದು ಹೇಳಿದರು.

500 GW ವಿದ್ಯುತ್ ಉತ್ಪಾದನೆ ಗುರಿ: ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆ ಜತೆಗೆ 2030ರ ವೇಳೆಗೆ 500 GW ವಿದ್ಯುತ್ ಉತ್ಪಾದಿಸುವ ಗುರಿಯನ್ನು ಹೊಂದಿದೆ ಎಂದು ಸಚಿವ ಜೋಶಿ ತಿಳಿಸಿದರು. ಸರ್ಕಾರಿ ವಲಯದಲ್ಲಿ EV ಬ್ಯಾಟರಿ ಪರೀಕ್ಷಾ ಸೌಲಭ್ಯವುಳ್ಳ ಘಟಕ ಸ್ಥಾಪನೆ ಭವಿಷ್ಯದಲ್ಲಿ ಮಹತ್ವದ ಮೈಲಿಗಲ್ಲು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಮತ್ತು ಜಂಟಿ ಕಾರ್ಯದರ್ಶಿ, NTH ಮಹಾನಿರ್ದೇಶಕರು ಹಾಗೂ EV ಬ್ಯಾಟರಿ ಮತ್ತು ಚಾರ್ಜರ್ ಉತ್ಪಾದನಾ ಉದ್ಯಮದ ಪ್ರಮುಖರು ಇದ್ದರು.