Home latest EPFO : ಉದ್ಯೋಗಿಗಳಿಗೆ ದೀಪಾವಳಿಗೂ ಮುನ್ನ ಭರ್ಜರಿ ಗಿಫ್ಟ್ !!!

EPFO : ಉದ್ಯೋಗಿಗಳಿಗೆ ದೀಪಾವಳಿಗೂ ಮುನ್ನ ಭರ್ಜರಿ ಗಿಫ್ಟ್ !!!

Hindu neighbor gifts plot of land

Hindu neighbour gifts land to Muslim journalist

ನೌಕರರ ಭವಿಷ್ಯ ನಿಧಿ ಸಂಘಟನೆ (EPFO) ಅಸಂಘಟಿತ ವಲಯದ ದಿನಗೂಲಿ ಕಾರ್ಮಿಕರು ಮತ್ತು ಸಣ್ಣ ಕಾರ್ಮಿಕರಿಗೆ ಸಿಹಿ ಸುದ್ದಿ ನೀಡಿದ್ದು, ಅವರನ್ನೂ ಈ ಯೋಜನೆಯಲ್ಲಿ ಸೇರಿಸಲಾಗುವುದು ಎಂದು ಘೋಷಿಸಿದೆ. ಪಿಂಚಣಿ ಯೋಜನೆಯ ವ್ಯಾಪ್ತಿಯನ್ನು ಹೆಚ್ಚಿಸುವ ಸಲುವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ದೀಪಾವಳಿಗೆ ಮೊದಲು ಪಿಎಫ್ ಖಾತೆದಾರರಿಗೆ
ಸಿಹಿ ಸುದ್ದಿ ಸಿಗಲಿದೆ. ಖಾಸಗಿ ವಲಯದ ಉದ್ಯೋಗಿಗಳಿಗೆ, ಇಪಿಎಫ್‌ಒ ದೀಪಾವಳಿಗೆ ಮೊದಲು ಬಡ್ಡಿಯನ್ನು ಕ್ರೆಡಿಟ್ ಮಾಡುತ್ತದೆ. ಶೇಕಡಾ 8.1ರಷ್ಟು ಬಡ್ಡಿ ದರವನ್ನು ಅಕ್ಟೋಬರ್ ಅಂತ್ಯದ ವೇಳೆಗೆ ಗ್ರಾಹಕರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎನ್ನಲಾಗಿದೆ.

ಈ ಉದ್ದೇಶಿತ ಯೋಜನೆಯಲ್ಲಿ ನಿವೃತ್ತಿ ಪಿಂಚಣಿ, ವಿಂತತು ಪಿಂಚಣಿ, ಮಕ್ಕಳ ಪಿಂಚಣಿ ಮತ್ತು ಅಂಗವೈಕಲ್ಯ ಪಿಂಚಣಿಗೆ ವಿಶೇಷ ನಿಬಂಧನೆಗಳನ್ನು ಒಳಗೊಂಡಿದೆ. ಇದನ್ನು ಪಡೆಯಲು, ಸೇವೆಯಕನಿಷ್ಠ ಅರ್ಹತಾ ಅವಧಿಯನ್ನು 10 ರಿಂದ 15 ವರ್ಷಗಳಿಗೆ ಹೆಚ್ಚಿಸಲಾಗುವುದು.

ಅಸಂಘಟಿತ ವಲಯದಲ್ಲಿ 60 ವರ್ಷ ತುಂಬಿದ ನಂತರ ಈ ಯೋಜನೆ ಜಾರಿಗೆ ಬಂದರೆ ತಿಂಗಳಿಗೆ 3,000 ರೂ. ಸಿಗಲಿದೆ.

ಈ ಯೋಜನೆಯ ಪ್ರಕಾರ, ನೀವು 60 ವರ್ಷಕ್ಕಿಂತ ಮೊದಲು ಮೃತಪಟ್ಟರೇ, ಅದನ್ನು ನಿಮ್ಮ ಕುಟುಂಬ ಸದಸ್ಯರಿಗೆ ನೀಡಲಾಗುತ್ತದೆ. ಈ ಹಣವನ್ನು ಪಡೆಯಲು, ನೀವು 5.4 ಲಕ್ಷ ರೂ.ಗಳನ್ನ ಠೇವಣಿ ಇಡಬೇಕು. ನಂತರ ತಿಂಗಳಿಗೆ 3,000 ರೂಪಾಯಿ ಲಭ್ಯವಾಗಲಿದೆ. ಇನ್ನು ಈ ಪಿಂಚಣಿಯು ಏನನ್ನು ಪಾವತಿಸಲಾಗುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಅಂದ್ದಾಗೆ. ತಿಂಗಳಿಗೆ 15,000 ರೂ.ಗಳನ್ನ ಗಳಿಸುವ ಎಲ್ಲರೂ ಇಪಿಎಫ್‌ಒಗೆ ಪಾವತಿಸಬಹುದು.