Home News Elephants: ರಾಜ್ಯದಿಂದ ಆಂಧ್ರಕ್ಕೆ ನಾಲ್ಕು ಕುಮ್ಕಿ ಆನೆ: ಈ 4 ಆನೆಗಳಿಗೆ ಅಲ್ಲೇನು ಕೆಲಸ?

Elephants: ರಾಜ್ಯದಿಂದ ಆಂಧ್ರಕ್ಕೆ ನಾಲ್ಕು ಕುಮ್ಕಿ ಆನೆ: ಈ 4 ಆನೆಗಳಿಗೆ ಅಲ್ಲೇನು ಕೆಲಸ?

Hindu neighbor gifts plot of land

Hindu neighbour gifts land to Muslim journalist

Elephants: ಕಾಡಾನೆಗಳನ್ನು ಪಳಗಿಸಲು ಕುಮ್ಕಿ ಆನೆಗಳಿಂದಲೇ(Trained Elephants) ಸಾಧ್ಯ. ಇದೀಗ ಆಂಧ್ರಪ್ರದೇಶದಲ್ಲಿ(Andra Pradesh) ಆನೆಗಳ ಅಟ್ಟಹಾಸ ಜೋರಾಗಿದೆ. ನಮ್ಮ ರಾಜ್ಯದಂತೆ ಅಲ್ಲೂ ಕಾಡಿನಿಂದ ನಾಡಿಗೆ ಬಂದು ಬಹಳ ಉಪಟಳವನ್ನು ಕಾಡಾನೆಗಳು ನೀಡುತ್ತಿದ್ದವೆ. ಕಾಡಾನೆಗಳ ಹಾವಳಿ ಅಲ್ಲೂ ಜಾಸ್ತಿಯಾಗಿದ್ದು, ಸಾವು ನೋವು ಸಂಭವಿಸುತ್ತಿದೆ. ಆಂಧ್ರದಲ್ಲಿ ರೈತರು(Farmers) ಕಷ್ಟ ಪಟ್ಟು ಬೆಳೆದ ಬೆಳೆಗೆ ಹಾನಿ(Crop lose) ಮಾಡುತ್ತಿದ್ದಾವೆ. ಹಾಗಾಗಿ ಮಾನವೀಯ ನೆಲೆಗಟ್ಟಿನಲ್ಲಿ ಕರ್ನಾಟಕದ(Karnataka) ದಸರಾ ಆನೆಗಳನ್ನು(Dasara Elephants) ಹೊರತು ಪಡಿಸಿ 4 ಕುಮ್ಕಿ ಆನೆಗಳನ್ನು ಆಂಧ್ರಕ್ಕೆ ನೀಡಲು ನಿರ್ಧರಿಸಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.

ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ಅರಣ್ಯ ಇಲಾಖೆಯ ಸಮನ್ವಯ ಸಮಿತಿ ಸಭೆಯನ್ನು ನಡೆಸಲಾಗಿತ್ತು. ಸಭೆಯ ನಂತರ ಮಾತನಾಡಿದ ಸಚಿವರು, ಆಂಧ್ರದ ಅರಣ್ಯ ಇಲಾಖೆ ಸಿಬ್ಬಂದಿಗೆ ಹಾಗೂ ಅಲ್ಲಿನ ಮಾವುತರಿಗೆ ಆನೆ ಸೆರೆ ಹಿಡಿಯುವ, ಪಳಗಿಸುವ ಬಗ್ಗೆ ರಾಜ್ಯದಿಂದಲೇ ತರಬೇತಿ ನೀಡಲಾಗುವುದು. ಹಾಗೂ ಕುಮ್ಕಿ ಆನೆಗಳನ್ನು ಕಾಡಾನೆ ಕಾರ್ಯಾಚರಣೆಗೆ ಹೇಗೆ ಬಳಸಿಕೊಳ್ಳಬೇಕು ಎಂಬ ಬಗ್ಗೆ ಕೂಡ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

ದಸರಾ ಆನೆ ಕೊಡುವುದಿಲ್ಲ:
ಕುಮ್ಕಿ ಆನೆಗಳೆಂದರೆ ಕಾಡಿನ ಆನೆಗಳನ್ನು ಸೆರೆ ಹಿಡಿದು ಅದಕ್ಕೆ ತರಬೇತಿಯನ್ನು ನೀಡಲಾಗಿರುತ್ತದೆ. ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳು ಕುಮ್ಕಿ ಆನೆಗಳು. ರಾಜ್ಯದ ದಸರಾ ಮಹೋತ್ಸವದಲ್ಲಿ ಭಾಗಿಯಾಗೂ ಆನೆಗಳ ಬಗ್ಗೆ ಸಾರ್ವಜನಿಕರಲ್ಲಿ ಭಾವನಾತ್ಮಕ ನಂಟಿರುತ್ತದೆ. ಹಾಗಾಗಿ ದಸರಾದಲ್ಲಿ ಭಾಗಿಯಾಗುವ ಯಾವುದೇ ಆನೆಯನ್ನು ನೀಡುವುದಿಲ್ಲ. ಹಾಗೆ ಮುಂದಿನ ದಸರಾ ಮಹೋತ್ಸವಕ್ಕಾಗಿ ಕೆಲವು ಕೆಲವು ಕುಮ್ಕಿ ಆನೆಗಳನ್ನು ಗುರುತಿಸಲಾಗಿದೆ. ಆ ಆನೆಗಳನ್ನು ನೀಡಲಾಗುವುದಿಲ್ಲ ಎಂದು ಅರಣ್ಯ ಅಚಿವರು ಸ್ಪಷ್ಟಪಡಿಸಿದ್ದಾರೆ.