Home News Elephant death: ಕೊನೆಯಿಲ್ಲದ ಆನೆ- ಮಾನವ ಸಂಘರ್ಷ: ವಿದ್ಯುತ್ ತಂತಿ ಸ್ಪರ್ಶಿಸಿ ಆನೆ ಸಾವು

Elephant death: ಕೊನೆಯಿಲ್ಲದ ಆನೆ- ಮಾನವ ಸಂಘರ್ಷ: ವಿದ್ಯುತ್ ತಂತಿ ಸ್ಪರ್ಶಿಸಿ ಆನೆ ಸಾವು

Hindu neighbor gifts plot of land

Hindu neighbour gifts land to Muslim journalist

Elephant death: ಆನೆ- ಮಾನವ(Elephant-Human conflict) ಸಂಘರ್ಷಕ್ಕೆ ಕೊನೆಯೇ ಇಲ್ಲ. ಮಾನವನ ಅತಿಕ್ರಮಣ, ಅತಿಯಾಸೆ ಪ್ರಾಣಿಗಳ(Animals) ಪ್ರಾಣಕ್ಕೇ ಕುತ್ತು ತರುತ್ತಿದೆ. ಇದೀಗ ಆಹಾರ ಅರಸಿ ಬಂದ ಕಾಡಾನೆಯೊಂದು(Wild elephant) ತನ್ನ ಪ್ರಾಣ ತೆತ್ತಿದೆ.

ಸಕಲೇಶಪುರ ತಾಲೂಕಿನ ಕೊಡಗಿನ ಗಡಿ ಬನವಾಸೆ ಗ್ರಾಮದ ಬಳಿ ಕಾಡಾನೆಯೊಂದು ಮೃತಪಟ್ಟಿದೆ. ಗ್ರಾಮದ ಬಿಎಸ್ ಎನ್ ಎಲ್ ಟವರ್ ಬಳಿ ವಿದ್ಯುತ್ ತಂತಿ ಸ್ಪರ್ಶಿಸಿ ಅಂದಾಜು 25 ವರ್ಷದ ಒಂಟಿಸಲಗ ಸಾವಿಗೀಡಾಗಿದೆ.

ಆನೆ ಆಹಾರ ಅರಸಿ ಗ್ರಾಮದ ಬಳಿ ಬಂದಿತ್ತು. ಈ ವೇಳೆ ವಿದ್ಯುತ್ ತಂತಿಗೆ ಆನೆಯ ಸೊಂಡಿಲು ತಾಗಿ ಮೃತಪಟ್ಟಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.