Home News ED Raid: ಬಳ್ಳಾರಿ ಸಂಸದ ತುಕಾರಾಂ ಮನೆ ಮೇಲೆ ಇಡಿ ದಾಳಿ – ಸಂಸದ ಇಡಿ...

ED Raid: ಬಳ್ಳಾರಿ ಸಂಸದ ತುಕಾರಾಂ ಮನೆ ಮೇಲೆ ಇಡಿ ದಾಳಿ – ಸಂಸದ ಇಡಿ ವಶಕ್ಕೆ – ಹಲವು ಶಾಸಕರ ಮನೆಯಲ್ಲೂ ಅಧಿಕಾರಿಗಳಿಂದ ದಾಖಲೆಗಳ ಪರಿಶೀಲನೆ

Hindu neighbor gifts plot of land

Hindu neighbour gifts land to Muslim journalist

ED Raid: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣದ ಪ್ರಕರಣ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿರುವ ಸಂಸದ ಇ.ತುಕಾರಾಂ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಬುಧವಾರ ದಾಳಿ ಮಾಡಿದ್ದಾರೆ.ಲೋಕಸಭಾ ಚುನಾವಣೆ ವೇಳೆ ವಾಲ್ಮೀಕಿ ನಿಗಮದ ಹಣ ಬಳಕೆಯಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಬಳ್ಳಾರಿ ಚುನಾವಣೆಗೆ 21 ಕೋಟಿ ಹಣವನ್ನು ಬಳಸಿದ ಆರೋಪದಲ್ಲಿ ಸಂಸದ ತುಕಾರಾಂ ಅವರನ್ನು ಇಡಿ ವಶಕ್ಕೆ ಇದೀಗ ಪಡೆದಿದೆ.

ಬಳ್ಳಾರಿ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಕಂಪ್ಲಿ ಶಾಸಕ ಗಣೇಶ್ ಮನೆ ಮೇಲೂ ಇಡಿ ದಾಳಿ ನಡೆದಿದೆ.

ಇ. ತುಕಾರಾಂ ಮನೆ ಮೇಲೆ ಇಡಿ ಅಧಿಕಾರಿಗಳು ಶೋಧಕಾರ್ಯ ನಡೆಸುತ್ತಿದ್ದು, ಲೋಕಸಭಾ ಚುನಾವಣೆ ವೇಳೆ ಹಣ ವಾಲ್ಮೀಕಿ ನಿಗಮದ ಹಣ ಬಳಕೆಯಾಗಿದೆ ಆರೋಪದ ಇದ್ದ ಹಿನ್ನೆಲೆ ಶೋಧ ಕಾರ್ಯ ಕಥಗೊಳ್ಳಲಾಗಿದೆ. ಅಧಿಕಾರಿಗಳು ದಾಖಲೆಗಳನ್ನ ಪರಿಶೀಲನೆ ಮಾಡುತ್ತಿದ್ದು, ಇತ್ತ ಬಳ್ಳಾರಿ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಕಂಪ್ಲಿ ಶಾಸಕ ಜೆಎನ್ ಗಣೇಶ‌ಗೂ ಮನೆಯಲ್ಲೂಶೋಧ ಕಾರ್ಯ ಇಡಿ ನಡಸುತ್ತಿದೆ.