Home News Saffron Remedies : ಹಣದ ಮಳೆ ಸುರಿಸುತ್ತೆ ಹೊಸ ವರ್ಷದಲ್ಲಿ ಈ ಕೇಸರಿ ! ಹೇಗೆ...

Saffron Remedies : ಹಣದ ಮಳೆ ಸುರಿಸುತ್ತೆ ಹೊಸ ವರ್ಷದಲ್ಲಿ ಈ ಕೇಸರಿ ! ಹೇಗೆ ಅಂತೀರಾ?

Hindu neighbor gifts plot of land

Hindu neighbour gifts land to Muslim journalist

ಹಿರಿಯರ ಅನುಭವ ಮತ್ತು ಶಾಸ್ತ್ರ ಪುರಾಣಗಳ ಪ್ರಕಾರ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹೀಗೆ ಮಾಡುವುದರಿಂದ ಲಕ್ಷ್ಮಿಯೂ ನೆಲೆಸುತ್ತಾಳೆ ಎಂಬ ನಂಬಿಕೆ ಇದೆ.ನಾವು ಜೀವನವನ್ನು ಸಂತೋಷ ಮತ್ತು ಸಮೃದ್ಧಿಯಿಂದ ನಡೆಸಲು ವಾಸ್ತು ಶಾಸ್ತ್ರದ ನಿಯಮಗಳನ್ನು ಅನುಸರಿಸುವುದು ಸಹಜವಾಗಿದೆ.
ಹೊಸ ವರ್ಷದಂದು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆಯಲು ವಾಸ್ತುವಿನಲ್ಲಿ ಕೆಲವು ವಿಷಯಗಳನ್ನು ತಿಳಿಸಲಾಗಿದೆ.

  • ನಿಮ್ಮ ಜಾತಕದಲ್ಲಿ ಗುರುವು ಅಶುಭ ಸ್ಥಾನದಲ್ಲಿದ್ದರೆ, ಇದರಿಂದ ನೀವು ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಪಾಯಸವನ್ನು ಮನೆಯಲ್ಲಿ ತಯಾರಿಸಿ ಬಳಿಕ ಅದಕ್ಕೆ ಕೊಂಚ ಕೇಸರಿಯನ್ನು ಸೇರಿಸಿ ತಿನ್ನಿರಿ. ಇದರಿಂದ ಅಶುಭ ಪರಿಣಾಮ ದೂರವಾಗುತ್ತದೆ.
  • ನಿಮ್ಮ ಜಾತಕದಲ್ಲಿ ಮಂಗಳಿಕ ದೋಷವಿದ್ದರೆ, ಕೆಂಪು ಚಂದನದಲ್ಲಿ ಕೇಸರಿಯನ್ನು ಬೆರೆಸಿ ಆಂಜನೇಯ ದೇವರಿಗೆ ತಿಲಕವನ್ನು ಹಚ್ಚಿ. ಇದು ನಿಮ್ಮ ಮಂಗಳಿಕ ದೋಷದ ಪರಿಣಾಮವನ್ನು ಕೊನೆಗೊಳಿಸುತ್ತದೆ.
  • ನಿಮ್ಮ ಬಳಿ ಹಣವಿಲ್ಲದಿದ್ದರೆ ಮತ್ತು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದರೆ, ಕವಡೆಗಳಿಗೆ ಕೇಸರಿ ಬಣ್ಣವನ್ನು ಹಚ್ಚಿ. ಬಳಿಕ ಕೆಂಪು ಬಟ್ಟೆಯಲ್ಲಿ ಕಟ್ಟಿ. ಅವುಗಳನ್ನು ನಿಮ್ಮ ಮನೆಯ ಗೋಡೆಯಲ್ಲಿ ಇರಿಸಿ. ಇದು ನಿಮ್ಮ ಹಣದ ಸಮಸ್ಯೆಗಳನ್ನು ನಿವಾರಿಸುತ್ತದೆ .
  • ದಾಂಪತ್ಯ ಜೀವನದಲ್ಲಿ ತೊಂದರೆಯಾದರೆ ಪತಿ-ಪತ್ನಿಯರು ಮೂರು ತಿಂಗಳ ಕಾಲ ಕೇಸರಿ ಮಿಶ್ರಿತ ಹಾಲಿನಿಂದ ಶಿವನಿಗೆ ಅಭಿಷೇಕ ಮಾಡಬೇಕು. ಇದರಿಂದ ದಾಂಪತ್ಯ ಜೀವನ ಸುಧಾರಿಸುತ್ತದೆ.
  • ನಿಮ್ಮ ಜಾತಕದಲ್ಲಿ ಚಂದ್ರನು ದುರ್ಬಲನಾಗಿದ್ದರೆ ಮತ್ತು ಅಶುಭ ಫಲಿತಾಂಶಗಳನ್ನು ನೀಡುತ್ತಿದ್ದರೆ, ಬೆಳ್ಳಿಯ ಪೆಟ್ಟಿಗೆಯಲ್ಲಿ ಕೇಸರಿಯೊಂದಿಗೆ ಘನ ಬೆಳ್ಳಿಯ ಗುಂಡನ್ನು ಇರಿಸಿ. ಇದು ನಿಮ್ಮ ಜಾತಕದಲ್ಲಿ ಚಂದ್ರನನ್ನು ಬಲಪಡಿಸುತ್ತದೆ.

ಹೀಗೆ ಕೆಲವೊಂದು ಕ್ರಮಗಳನ್ನು ಅನುಸರಿಸಿದಲ್ಲಿ ನಿಮ್ಮ ಜೀವನದಲ್ಲಿ ಆರ್ಥಿಕವಾಗಿ ಸಬಲರಾಗಲು , ಕೌಟುಂಬಿಕ ನೆಮ್ಮದಿ ನೆಲೆಸಲು ಸಾಧ್ಯವಾಗುತ್ತದೆ.