Home News Assembly : ಬಜೆಟ್ ಮಂಡನೆ ವೇಳೆ ಒಂದು ಕ್ಷಣ ಇಡೀ ಸದನವೇ ಗಾಬರಿ, ಬಜೆಟ್ ಓದುವುದನ್ನೇ...

Assembly : ಬಜೆಟ್ ಮಂಡನೆ ವೇಳೆ ಒಂದು ಕ್ಷಣ ಇಡೀ ಸದನವೇ ಗಾಬರಿ, ಬಜೆಟ್ ಓದುವುದನ್ನೇ ನಿಲ್ಲಿಸಿದ ಸಿದ್ದು – ಯಾಕಾಗಿ? ಇಲ್ಲಿದೆ ನೋಡಿ ಅಚ್ಚರಿ ವಿಡಿಯೋ

Hindu neighbor gifts plot of land

Hindu neighbour gifts land to Muslim journalist

Assembly : ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಎರಡನೇ ಬಜೆಟ್ ಇಂದು ಮಂಡನೆಯಾಗಿದೆ. ಇದು ಸಿದ್ದರಾಮಯ್ಯ ಅವರು ಮಂಡಿಸುತ್ತಿರುವ ದಾಖಲೆಯ 16ನೇ ಬಜೆಟ್ ಆಗಿದ್ದು 4 ಲಕ್ಷ ಕೋಟಿ ಗಾತ್ರವನ್ನು ಹೊಂದಿದೆ. ಇನ್ನು ಸಿದ್ದರಾಮಯ್ಯ ಅವರು ಬಜೆಟನ್ನು ಮಂಡಿಸುತ್ತಿದ್ದ ವೇಳೆ ಒಂದು ಕ್ಷಣ ಇಡೀ ಸದನವೇ ಗಾಬರಿ ಬಿದ್ದಿದೆ. ಸಿದ್ದರಾಮಯ್ಯ ಅವರು ಕೂಡ ಬಜೆಟ್ ಓದುವುದನ್ನು ನಿಲ್ಲಿಸಿ ಅಚ್ಚರಿಂದ ಸುತ್ತಮುತ್ತ ನೋಡಿದ್ದಾರೆ.

ಹೌದು, ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡುತ್ತಿದ್ದಾಗ ಕೆಲ ಕಾಲ ಸದನದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬಜೆಟ್ ಮಂಡನೆ ವೇಳೆ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ವ್ಯಕ್ತಿಯೋರ್ವ ಕೂಗಿದ್ದಕ್ಕಾಗಿ ಇಡೀ ಸದನ ಒಂದು ಕ್ಷಣ ಗಾಬರಿಗೆ ಒಳಗಾಗಿತ್ತು.

ಅಂದಹಾಗೆ ಒಳ ಮೀಸಲಾತಿಗೆ ಸಂಬಂಧಿಸಿದ ಕೂಗು ಇದಾಗಿದೆ. ಸಿಎಂ ಬಜೆಟ್ ಭಾಷಣದ ವೇಳೆ ಒಳ ಮೀಸಲಾತಿ ಸದ್ದು ಮಾಡಿದ್ದು, ಒಳಮೀಸಲಾತಿ ನೀಡಿ ಎಂದು ವ್ಯಕ್ತಿಯೋರ್ವ ಜೋರಾಗಿ ಕೂಗಿದ ಪರಿಣಾಮ ಇಡೀ ಸದನ ಗಾಬರಿಗೆ ಒಳಗಾಗಿತ್ತು. ಬಳಿಕ ಆ ವ್ಯಕ್ತಿ ಕೂಗಿದ್ದಕ್ಕೆ ಕ್ರಮ ಕೈಗೊಳ್ಳುವಂತೆ ಸ್ಪೀಕರ್ ಖಾದರ್ ಮಾರ್ಷಲ್ ಗಳಿಗೆ ಸೂಚಿಸಿದರು.