

Mangaluru: ಕಲ್ಲಾಪು,ಬುರ್ದುಗೋಳಿ (Mangaluru) ಗುಳಿಗ- ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳಕ್ಕೆ ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಉಳ್ಳಾಲ ಭೇಟಿ ನೀಡಿರುವ ವಿಚಾರ ಬೆಳಕಿಗೆ ಬಂದಿದೆ.
ಹೌದು, ದುನಿಯಾ ವಿಜಯ್ ಈ ವೇಳೆ ಬುರ್ದುಗೋಳಿ ಸಾನಿಧ್ಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬುರ್ದುಗೋಳಿ ಕ್ಷೇತ್ರದ ಪರವಾಗಿ ದುನಿಯಾ ವಿಜಯ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿಜಯ್ ಅವರು ವಿನಯ್ ರಾಜಕುಮಾರ್ ನಾಯಕರಾಗಿರುವ ಸಿಟಿ ಲೈಟ್ಸ್ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದು, ಈಗಾಗಲೇ ‘ಸಿಟಿ ಲೈಟ್ಸ್’ ಚಿತ್ರದ ಸ್ಕ್ರಿಪ್ಟ್ ಕೆಲಸ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಚಿತ್ರೀಕರಣ ಶುರುವಾಗಲಿದೆ.
ಸದ್ಯಕ್ಕೆ ವಿಜಯ್ ಎರಡೂರು ಚಿತ್ರಗಳಲ್ಲಿ ಬಿಝಿ ಇದ್ದಾರೆ. ಜಡೇಶ್ ನಿರ್ದೇಶನದ ಚಿತ್ರದ ಎರಡನೇ ಹಂತದ ಚಿತ್ರೀಕರಣ ಕೂಡ ಮುಗಿಯುತ್ತಿದ್ದು, ಶೀಘ್ರದಲ್ಲೇ ಸಿನಿಮಾ ಚಿತ್ರೀಕರಣ ಪೂರ್ಣಗೊಳ್ಳಲಿದೆ. ಈ ಚಿತ್ರಕ್ಕೆ ‘ರಾಚಯ್ಯ’ ಎಂದು ಹೆಸರಿಡಲಾಗಿದೆ ಎನ್ನಲಾಗಿದೆ ಬಳಿಕ ವೆಟ್ರಿವೇಲ್ (ತಂಬಿ) ನಿರ್ದೇಶನದಲ್ಲಿ ವಿಜಯ್ ನಾಯಕರಾಗಿ ನಟಿಸಲಿದ್ದಾರೆ.













