Home News Dr G Parameshwar : ಸಿಟಿ ರವಿ ತಲೆಗೆ ಗಾಯ ಆಗಿದ್ದೇಗೆ, ಪೊಲೀಸ್ ಠಾಣೆಯಲ್ಲಿ ನಡೆದದ್ದೇನು?...

Dr G Parameshwar : ಸಿಟಿ ರವಿ ತಲೆಗೆ ಗಾಯ ಆಗಿದ್ದೇಗೆ, ಪೊಲೀಸ್ ಠಾಣೆಯಲ್ಲಿ ನಡೆದದ್ದೇನು? ಸಚಿವ ಪರಮೇಶ್ವರ್ ಏನು ಹೇಳಿದ್ರು ಗೊತ್ತಾ?

Hindu neighbor gifts plot of land

Hindu neighbour gifts land to Muslim journalist

Dr G Parameshwar : ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ವಿರುದ್ಧ ಅಶ್ಲೀಲ ಪದ ಬಳಸಿದ್ದಾರೆ ಎಂಬ ಆರೋಪದಡಿ ವಿಧಾನಪರಿಷತ್ ಸದಸ್ಯ ಸಿಟಿ ರವಿ ಅವರನ್ನು ಬಂಧಿಸಲಾಗಿದೆ. ವಿಚಿತ್ರ ಏನೆಂದರೆ ಸುವರ್ಣಸೌಧದಿಂದಲೇ ಅವರನ್ನು ಪೊಲೀಸರು ಎತ್ತುಕೊಂಡು ಹೋಗಿದ್ದಾರೆ. ಅಲ್ಲದೆ ಸಿ.ಟಿ. ರವಿ(CT Ravi)ಅವರನ್ನು ಗುರುವಾರ ತಡರಾತ್ರಿಯೇ ಬೆಂಗಳೂರಿಗೆ ಕರೆದೊಯ್ಯಲಾಯಿತು. ತಡರಾತ್ರಿ ಠಾಣೆಯಿಂದ ಅವರನ್ನು ಪೊಲೀಸರು ಹೊತ್ತು ತಂದರು. ಅವರ ತಲೆಗೆ ಪೆಟ್ಟಾಗಿ, ರಕ್ತ ಸೋರಿದ ಗಾಯಗಳು ಕಂಡವು. ಆದರೆ, ಅವರಿಗೆ ಯಾವ ರೀತಿಯ ಪೆಟ್ಟು ಬಿದ್ದಿದೆ ಎಂಬುದು ಗೊತ್ತಾಗಿಲ್ಲ. ಈ ಕುರಿತು ಇದೇ ಈಗ ಡಾಕ್ಟರ್ ಜಿ ಪರಮೇಶ್ವರ್( Dr G Parameshwar ) ಅವರು ಹೇಳಿಕೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ಸಚಿವರು ಎಂಎಲ್​ಸಿ ಸಿಟಿ ರವಿ(C T Ravi )ಅವರನ್ನು ಪೊಲೀಸರು ಇಡೀ ರಾತ್ರಿ ಸುತ್ತಾಟ ಮಾಡಿಸಿದ ವಿಚಾರ ಗೊತ್ತಿಲ್ಲ. ಘಟನೆ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಹಿರೇಭಾಗೆವಾಡಿ ಸ್ಟೇಷನ್‌ಗೆ ಕರೆದುಕೊಂಡು ಹೋದಾಗ ಅಲ್ಲಿಗೆ ಬಿಜೆಪಿ ನಾಯಕರು ಹೋಗಿದ್ದಾರೆ. ಹೊರಗೆ ಸುತ್ತಾಡಿಸಿರೋದು ಗೊತ್ತಿಲ್ಲ. ಪೊಲೀಸರು ಎಲ್ಲವನ್ನೂ ಕೇಳಿಯೇ ಮಾಡಲ್ಲ. ಸಿಎಂ‌ ಆಗಲಿ, ನಾನಾಗಲಿ ಯಾವುದೇ ಸೂಚನೆ ಕೊಟ್ಟಿಲ್ಲ. ಪ್ರೊಸೀಜರ್ ಹೀಗೇ ಮಾಡಬೇಕು ಅಂತ ಹೇಳಿಲ್ಲ ಎಂದರು.

ಖಾನಾಪುರ ಸ್ಟೇಷನ್‌ನಲ್ಲಿ ಇದ್ದಾಗಲೇ ಸಿಟಿ ರವಿ ತಲೆಯಲ್ಲಿ ರಕ್ತ ಬಂದಿರುವ ವಿಚಾರ ನನಗೆ ಗೊತ್ತಿಲ್ಲ. ಎಲ್ಲ ಆಯಾಮದಲ್ಲಿಯೂ ತನಿಖೆ ನಡೆಸುತ್ತಿದ್ದಾರೆ. ಪೊಲೀಸರಿಗೆ ಸಂಬಂಧಿಸಿದ ವಿಚಾರದಲ್ಲಿ ನಾವು ಹಸ್ತಕ್ಷೇಪ ಮಾಡಲ್ಲ ಎಂದರು.