Home News Dr Bro: 3 ತಿಂಗಳಿಂದ ಯೂಟ್ಯೂಬ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡುತ್ತಿಲ್ಲ ಡಾ. ಬ್ರೋ !!...

Dr Bro: 3 ತಿಂಗಳಿಂದ ಯೂಟ್ಯೂಬ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡುತ್ತಿಲ್ಲ ಡಾ. ಬ್ರೋ !! ಯಾಕೆ ಗೊತ್ತಾ?

Hindu neighbor gifts plot of land

Hindu neighbour gifts land to Muslim journalist

Dr Broo: ಡಾಕ್ಟರ್ ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್ ಎಂದರೆ ಕನ್ನಡಿಗರಿಗೆಲ್ಲ ಅದೇನೋ ಅಚ್ಚುಮೆಚ್ಚು. ನಮಸ್ಕಾರ ದೇವರು ಎನ್ನುತ್ತಾ ಇಡೀ ವಿಶ್ವವನ್ನು ಕನ್ನಡಿಗರಿಗೆ ತೋರಿಸಿದ ಹೆಮ್ಮೆಯ ಯುವಕ ಈತ. ಈತನ ಮಾತು ಕೇಳುತ್ತ ಆತ ಮಾಡುವ ಫ ವಿಡಿಯೋ ನೋಡುವುದೇ ಕನ್ನಡಿಗರಿಗೆ ಒಂದು ಖುಷಿ. ಡಾಕ್ಟರ್ ಬ್ರೋ(Dr Broo) ವಿಡಿಯೋ ಅಪ್ಲೋಡ್ ಮಾಡಿದ ಕೆಲವೇ ಕ್ಷಣಗಳಲ್ಲಿ ಅದು ಲಕ್ಷಗಟ್ಟಲೆ ವೀವ್ಸ್ ಪಡೆಯುತ್ತದೆ. ಆದರೆ ಇದೀಗ 3 ತಿಂಗಳಿಂದ ಡಾ. ಬ್ರೋ ಅವರು ಯೂಟ್ಯೂಬ್ ನಲ್ಲಿ ತಮ್ಮ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿಲ್ಲ. ಇದಕ್ಕೆ ಕಾರಣವೇನು ಗೊತ್ತಾ?

ಕಳೆದ ಮೂರು ತಿಂಗಳಿನಿಂದ ಯೂಟ್ಯೂಬ್ ಚಾನೆಲ್‌ನಲ್ಲಿ ಯಾವುದೇ ಹೊಸ ವಿಡಿಯೋ ಅಪ್‌ಲೋಡ್ ಆಗಿಲ್ಲ. ಅವರು ಕೊನೆಯದಾಗಿ ಅಪ್‌ಲೋಡ್ ಮಾಡಿರುವ ವಿಡಿಯೋ ಜೀವಂತ ದೇವತೆ.. ? ಭೂತಾನ್ ದೇಶದ ಧಾರ್ಮಿಕ ಸಂಪ್ರದಾಯಕ್ಕೆ ಸಂಬಂಧಿಸಿದಂತೆ ಗಗನ್ ಅವರು ವಿಡಿಯೋ ಮಾಡಿದ್ದರು. ಇದಾಗಿ ಮೂರು ತಿಂಗಳಾದರೂ ಅವರು ಅವರ ಚಾನೆಲ್‌ನಲ್ಲಿ ವಿಡಿಯೋ ಅಪ್‌ಲೋಡ್ ಮಾಡಿಲ್ಲ. ಇದು ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಆದರೆ ಇದರ ಹಿಂದೆ ಬೇರೆಯ ಕಾರಣ ಇದೆ.

ಅಂದಹಾಗೆ ಅವರು ಈಗ ಯೂಟ್ಯೂಬರ್‌ ಮಾತ್ರವಲ್ಲ ಉದ್ಯಮಿಯೂ ಹೌದು. ಗಗನ್ ಅವರು ಕೆಲವು ತಿಂಗಳುಗಳ ಮುಂಚೆ ಗೋ ಪ್ರವಾಸ ಎನ್ನುವ ಕಂಪನಿಯನ್ನು ಶುರು ಮಾಡಿದ್ದಾರೆ. ಈ ಕಂಪನಿಯ ಮೂಲಕ ಕನ್ನಡಿಗರು ಹಾಗೂ ಭಾರತೀಯರಿಗೆ ವಿದೇಶಿ ಪ್ರವಾಸ ಮತ್ತು ಟ್ರಿಪ್ ಪ್ಲ್ಯಾನ್‌ ಮಾಡಿಕೊಡುವುದು ಈ ಕಂಪನಿಯ ಉದ್ದೇಶ. ಪ್ಯಾಕೇಜ್‌ಗಳ ಮೂಲಕ ವಿದೇಶಿ ಪ್ರವಾಸಕ್ಕೆ ಈ ಕಂಪನಿ ಅವಕಾಶ ಮಾಡಿಕೊಡುತ್ತಿದೆ. ಗಗನ್ ಅವರು ಈ ಕಂಪನಿ ಕೆಲಸದಲ್ಲಿ ಬ್ಯೂಸಿ ಆಗಿರುವುದರಿಂದ ವಿಡಿಯೋ ಅಪ್‌ಲೋಡ್ ಮಾಡುವುದು ವಿಳಂಬವಾಗಿರಬಹುದು ಅಂತ ಹೇಳಲಾಗುತ್ತಿದೆ. ಆದರೆ, ಯಾವ ಕಾರಣಕ್ಕೆ ಡಾ ಬ್ರೋ ವಿಡಿಯೋ ಅಪ್‌ಲೋಡ್‌ ಮಾಡುತ್ತಿಲ್ಲ ಅಂತ ಅವರಿಂದಲೇ ತಿಳಿದುಕೊಳ್ಳಲು ಅವರ ಫ್ಯಾನ್ಸ್‌ ಕಾಯುತ್ತಿದ್ದಾರೆ.