Home News Dr G Parameshwar : ಗೃಹಮಂತ್ರಿ ಸ್ಥಾನಕ್ಕೆ ಡಾ. ಪರಮೇಶ್ವರ್ ರಾಜೀನಾಮೆ?

Dr G Parameshwar : ಗೃಹಮಂತ್ರಿ ಸ್ಥಾನಕ್ಕೆ ಡಾ. ಪರಮೇಶ್ವರ್ ರಾಜೀನಾಮೆ?

Hindu neighbor gifts plot of land

Hindu neighbour gifts land to Muslim journalist

Dr G Parameshwar : ರಾಜ್ಯದಲ್ಲಿ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಭಾರಿ ಸದ್ದು ಮಾಡುತ್ತಿದೆ. ಈ ನಡುವೆಯೇ ಗೃಹಮಂತ್ರಿ ಸ್ಥಾನಕ್ಕೆ ಪರಮೇಶ್ವರವರು ರಾಜೀನಾಮೆ ನೀಡುವ ಹೇಳಿಕೆ ನೀಡಿದ್ದು ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.

ಹೌದು. ತುಮಕೂರಿನ (Tumkur) ಕೊರಟಗೆರೆಯ ರಾಜೀವ್‌ ಭವನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಸಚಿವರು ರಾಜೀನಾಮೆಯ ಮಾತುಗಳನ್ನಾಡಿದ್ದಾರೆ. ನಿಮ್ಮೆಲ್ಲರ ಭಾವನೆಗಳಿಗೆ ಸರಿಯಾಗಿ ಸ್ಪಂದಿಸಲು ಆಗುತ್ತಿಲ್ಲ. ನಿಮ್ಮ ಕೆಲಸ ಕಾರ್ಯಗಳ ಈಡೇರಿಕೆಗೆ ನಾನು ಕೈಗೆ ಸಿಗುತ್ತಿಲ್ಲ. ಇದೆಲ್ಲದು ನಿಮಗೆ ಬೇಸರ ತರಿಸಿರಬಹುದು.

ಪಂಚಾಯಿತಿಗೆ ಬರೋದಿಲ್ಲ, ನಮನ್ನ ಮಾತಾಡಿಸೋದಿಲ್ಲ. ಇದೆಲ್ಲಾ ನಮಗೂ ಅನಿಸುತ್ತೆ ನಿಮಗೂ ಅನಿಸುತ್ತೆ. ಆದರೆ ಸಮಯ ನನ್ನ ಕೈಯಲ್ಲಿ ಇಲ್ಲ. ನೀವೆಲ್ಲಾ ದೊಡ್ಡ ಮನುಸ್ಸು ಮಾಡಿ ಒಂದೇ ಮಾತಲ್ಲಿ ಹೇಳಿಬಿಟ್ರೆ ನಾಳೇನೆ ರಾಜೀನಾಮೆ ಕೊಡುತ್ತೇನೆ. ಆಗ ನಾನು ನಿಮ್ಮ ಜೋತೆಯಲ್ಲಿ ಇರುತ್ತೆನೆ ಎಂದು ಹೇಳಿದ್ದಾರೆ.