Home News Google Search : ಪಹಲ್ಗಾಮ್ ದಾಳಿ ನಂತರ ಪಾಕಿಸ್ತಾನಿಯರು ಗೂಗಲ್‌ನಲ್ಲಿ ಸರ್ಚ್ ಮಾಡಿದ್ದೇನು ಗೊತ್ತೇ ?

Google Search : ಪಹಲ್ಗಾಮ್ ದಾಳಿ ನಂತರ ಪಾಕಿಸ್ತಾನಿಯರು ಗೂಗಲ್‌ನಲ್ಲಿ ಸರ್ಚ್ ಮಾಡಿದ್ದೇನು ಗೊತ್ತೇ ?

Hindu neighbor gifts plot of land

Hindu neighbour gifts land to Muslim journalist

Google Search : ಜಮ್ಮು ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರರು ದಾಳಿ ನಡೆಸಿದ ಬಳಿಕ ಪಾಕಿಸ್ತಾನಿಯರು ಹೆಚ್ಚಾಗಿ ಗೂಗಲ್ ನಲ್ಲಿ ಒಂದು ವಿಚಾರ ಒಂದನ್ನು ಚರ್ಚ್ ಮಾಡಿದ್ದಾರೆ. ಅದು ಏನೆಂಬುದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಹೌದು, ಬೈಸರನ್ ಕಣಿವೆಯಲ್ಲಿ ಭಯೋತ್ಪಾದಕ ದಾಳಿ (Terrorists Attack) ನಡೆದ ಬಳಿಕ ಪಾಕಿಸ್ತಾನಿಯರು ಆನ್‌ಲೈನ್ ಮೂಲಕ ಭಾರತದ ಪ್ರಧಾನಿ ನರೇಂದ್ರ ಮೋದಿಗಾಗಿ (PM Narendra Modi) ಹೆಚ್ಚಿನ ಹುಡುಕಾಟ ನಡೆಸಿದ್ದಾರೆ ಎಂಬುದನ್ನು ಗೂಗಲ್ ಟ್ರೆಂಡ್‌ ತೋರಿಸಿದೆ.

ಅಲ್ಲದೆ ಗೂಗಲ್ ಟ್ರೆಂಡ್‌ ಮಾಹಿತಿಯ ಪ್ರಕಾರ ಪಾಕಿಸ್ತಾನಿ ಬಳಕೆದಾರರು ಪಹಲ್ಗಾಮ್ ದಾಳಿ, ಕಾಶ್ಮೀರ ದಾಳಿ, ಸಿಂಧೂ ಜಲ ಒಪ್ಪಂದ, ಭಾರತೀಯ ವಾಯುಪಡೆ, ಮೋದಿ, ಭಾರತದ ಸೇಡು, ಜಮ್ಮು.. ಮೊದಲಾದವುಗಳನ್ನು ಹೆಚ್ಚಾಗಿ ಹುಡುಕಾಡಿದ್ದಾರೆ. ಅದರಲ್ಲೂ ಪಹಲ್ಗಾಮ್ ಎಂಬ ಕೀವರ್ಡ್ ಪಾಕಿಸ್ತಾನದಲ್ಲಿ ಅತಿ ಹೆಚ್ಚು ಹುಡುಕಿದ ಮೂರನೇ ಪದವಾಗಿದೆ. ಇವು ಮಾತ್ರವಲ್ಲದೆ ಉಗ್ರರ ದಾಳಿಗೆ ಭಾರತದ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ತಿಳಿಯಲು ಹೆಚ್ಚಿನವರು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರ ಕುರಿತು ಜಾಲಾಡಿದ್ದಾರೆ. ಮೋದಿ ಪಹಲ್ಗಾಮ್ ಪ್ರತಿಕ್ರಿಯೆ ಮತ್ತು ಪಾಕಿಸ್ತಾನ ಸೇನೆಯ ಬಗ್ಗೆ ಭಾರತದ ಸುದ್ದಿ ಕುರಿತಾದ ಹುಡುಕಾಟಗಳೂ ನಡೆದಿವೆ.