Home News Bangla: ‘ಭಾರತಕ್ಕೆ ನುಸುಳುವುದು ಹೇಗೆ ಗೊತ್ತಾ?’ ವಿಡಿಯೋ ಮಾಡಿ ಅಪ್ಲೋಡ್ ಮಾಡಿದ ಬಾಂಗ್ಲಾ ವ್ಲಾಗರ್ !!

Bangla: ‘ಭಾರತಕ್ಕೆ ನುಸುಳುವುದು ಹೇಗೆ ಗೊತ್ತಾ?’ ವಿಡಿಯೋ ಮಾಡಿ ಅಪ್ಲೋಡ್ ಮಾಡಿದ ಬಾಂಗ್ಲಾ ವ್ಲಾಗರ್ !!

Hindu neighbor gifts plot of land

Hindu neighbour gifts land to Muslim journalist

Bangla: ಕೆಲವು ದಿನಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ ನಡೆಸಿದ ಮೆಗಾ ರ‍್ಯಾಲಿಯಲ್ಲಿ ಮಾತನಾಡಿದ್ದ ಮಮತಾ ಬ್ಯಾನರ್ಜಿ, ‘ಹಿಂಸಾಚಾರ ಪೀಡಿತ ಬಾಂಗ್ಲಾದೇಶದ ಜನರು ನಮ್ಮ ಬಾಗಿಲನ್ನು ತಟ್ಟಿದರೆ ಸರ್ಕಾರ ಅವರಿಗೆ ಆಶ್ರಯ ನೀಡುತ್ತದೆ’ ಎಂದಿದ್ದರು. ಈ ಬೆನ್ನಲ್ಲೇ ಬಾಂಗ್ಲಾದೇಶದ ವ್ಲಾಗರ್‌ (Vlogger) ಒಬ್ಬ, ಭಾರತಕ್ಕೆ ಹೇಗೆ ಅಕ್ರಮವಾಗಿ ನುಗ್ಗಬಹುದು (Infiltration) ಎಂಬುದನ್ನು ತೋರಿಸುವ ವಿಡಯೊವನ್ನು ಹರಿಬಿಟ್ಟಿದ್ದಾನೆ. ಇದು ಸಂಚಲನಕ್ಕೆ ಕಾರಣವಾಗಿದೆ.

ಸದ್ಯ ಬಾಂಗ್ಲಾದೇಶದಲ್ಲಿ (Bangladesh) ಅರಾಜಕತೆ, ನಾಗರಿಕ ದಂಗೆ ಭುಗಿಲೆದ್ದಿದೆ. ವಿವಾದಿತ ಮೀಸಲಾತಿ ವಿರುದ್ಧ ಜನ ಹಿಂಸಾಚಾರದಲ್ಲಿ ತೊಡಗಿದ್ದು, 200ಕ್ಕೂ ಅಧಿಕ ಮಂದಿ ಮೃತಪಟ್ಟು, ಸಾವಿರಾರು ಜನ ಗಾಯಗೊಂಡಿದ್ದಾರೆ.ಈ ಬೆನ್ನಲ್ಲೇ ಬಾಂಗ್ಲಾದೇಶದ ಗಡಿಗೆ ತೆರಳಿದ ವ್ಲಾಗರ್‌ ಒಬ್ಬನು, ಅಕ್ರಮವಾಗಿ ಹೇಗೆ ಭಾರತವನ್ನು ಪ್ರವೇಶಿಸಬಹುದು, ನುಸುಳಬಹುದು ಎಂಬುದನ್ನು ವಿಡಿಯೊ ಸಮೇತ ಪೋಸ್ಟ್‌ ಮಾಡಿದ್ದಾನೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ. ಆದಾಗ್ಯೂ, ಭಾರತ-ಬಾಂಗ್ಲಾ ಗಡಿಯಲ್ಲಿ ಸೈನಿಕರು ಕಟ್ಟೆಚ್ಚರ ವಹಿಸಿದ್ದಾರೆ ಎಂದು ತಿಳಿದುಬಂದಿದೆ.

ವಿಡಿಯೋದಲ್ಲಿ ಏನಿದೆ?
ಕಾಲುವೆಯ ಪುಟ್ಟದಾದ ಪೈಪ್‌ಗಳ ಮೂಲಕ ಬಾಂಗ್ಲಾದೇಶದ ಗಡಿಯಿಂದ ಭಾರತದ ಗಡಿಯೊಳಗೆ ನುಗ್ಗಬಹುದು, ಆ ಮೂಲಕ ಸುಲಭವಾಗಿ ಭಾರತದಲ್ಲಿ ಅಕ್ರಮವಾಗಿ ನೆಲೆಸಬಹುದು ಎಂಬುದನ್ನು ಕೆಲ ಸ್ನೇಹಿತರೊಂದಿಗೆ ಆತ ಪ್ರಾತ್ಯಕ್ಷಿಕೆ ತೋರಿಸಿದ್ದಾನೆ. ಇದು ಈಗ ಗಡಿಯಲ್ಲಿ ಭಾರಿ ಆತಂಕ ಸೃಷ್ಟಿಸಿದೆ.