Home News Astronauts: ಜೀವದ ಹಂಗಿಲ್ಲದೆ ಬಾಹ್ಯಾಕಾಶ ಯಾತ್ರೆ ಮಾಡುವ ಗಗನಯಾತ್ರಿಗಳ ಸಂಬಳ ಎಷ್ಟು ಗೊತ್ತಾ?

Astronauts: ಜೀವದ ಹಂಗಿಲ್ಲದೆ ಬಾಹ್ಯಾಕಾಶ ಯಾತ್ರೆ ಮಾಡುವ ಗಗನಯಾತ್ರಿಗಳ ಸಂಬಳ ಎಷ್ಟು ಗೊತ್ತಾ?

Astronauts

Hindu neighbor gifts plot of land

Hindu neighbour gifts land to Muslim journalist

Astronauts: ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳುವ ಪ್ರತಿಯೊಬ್ಬರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಆ ಸಾಹಸಕ್ಕೆ ಮುಂದಾಗುತ್ತಾರೆ. ಅಲ್ಲದೆ ಅದಕ್ಕಾಗಿ ದೈಹಿಕವಾಗಿ, ಮಾನಸಿಕವಾಗಿ ಮತ್ತು ತಾಂತ್ರಿಕವಾಗಿ ಅವರು ಸಿದ್ದಗೊಳ್ಳುವುದು ಅವಶ್ಯಕ. ಹಾಗಿರುವಾಗ ಬಾಹ್ಯಾಕಾಶ ಗಗನಯಾತ್ರಿಗಳು (Astronauts)  ಎಷ್ಟು ವೇತನ ಪಡೆಯಬಹುದು ಎಂಬ ಕುತೂಹಲ ನಿಮಗೆಲ್ಲರಿಗೂ ಇದ್ದೇ ಇರುತ್ತೆ. ಬನ್ನಿ ಈ ಬಗ್ಗೆ ತಿಳಿದುಕೊಳ್ಳೋಣ.

ಗಗನಯಾತ್ರಿಗಳಿಗೆ ವೇತನದ ಜೊತೆಗೆ ಜೀವಮಾನದ ಸಿಗುವ ಅಪರೂಪದ ಅವಕಾಶವು ಹೌದು, ಎಲ್ಲರಿಗೂ ಇಂತಹ ಅವಕಾಶ ಸಿಗುವುದಿಲ್ಲ ಆದ್ರೆ ನೀವು ಅಂದುಕೊಂಡ ಹಾಗೆ  ಗಗನಯಾತ್ರಿಗಳಿಗೆ ವಿಪರೀತ ವೇತನ ನೀಡುತ್ತಿಲ್ಲ. ಯಾಕೆಂದರೆ ಗಗನಯಾತ್ರಿಗಳಿಗಿಂತ ಹೆಚ್ಚಿನ ವೇತನ ಹಲವು ಕಂಪನಿಗಳ ಸಿಇಒಗಳೇ ಸಂಪಾದಿಸುತ್ತಾರೆ. ಜೊತೆಗೆ ಗಗನಯಾತ್ರಿಗಳ ವೇತನವು ಅವರು ಯಾವ ದೇಶದವರು ಎಂಬುದನ್ನು ಕೂಡಾ ಅವಲಂಬಿಸಿದೆ.

ಉದಾಹರಣೆಗೆ ಇತ್ತೀಚಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿ ಅಲ್ಲಿಯೇ ಸಿಕ್ಕಿಬಿದ್ದಿರುವ ಭಾರತೀಯ ಮೂಲದ ಸುನಿತಾ ವಿಲಿಯಮ್ಸ್‌ ಮತ್ತಿತರರಿಗೆ ಕಳೆದ ವರ್ಷದ ವೇತನ ಶ್ರೇಣಿಯ ಅನ್ವಯ ವಾರ್ಷಿಕ 70 ಲಕ್ಷ ರು.ನಿಂದ 1.27 ಕೋಟಿ ರು.ವರೆಗೂ ವೇತನ ನಿಗದಿಪಡಿಸಲಾಗಿದೆ.

ಹೆಸರು/ದೇಶ ವೇತನ:

ಸುನಿತಾ ವಿಲಿಯಮ್ಸ್‌ 70 ಲಕ್ಷ – 1.27 ಕೋಟಿ (ವಾರ್ಷಿಕ)

ರಾಜಾ ಚಾರಿ 8.92 ಲಕ್ಷ (ಮಾಸಿಕ)

ಯೂರೋಪ್‌ 5.50 ಲಕ್ಷ (ಮಾಸಿಕ)

ಬ್ರಿಟನ್‌ 5.86 ಲಕ್ಷ (ಮಾಸಿಕ)

ಫ್ರಾನ್ಸ್‌ 7.23- 8.43 ಲಕ್ಷ (ಮಾಸಿಕ)

ರಷ್ಯಾ 4.58 ಲಕ್ಷ (ಮಾಸಿಕ)

ಇದಲ್ಲದೇ ಗಗನಯಾತ್ರಿಗಳಿಗೆ ವಿವಿಧ ದೇಶಗಳು  ಪ್ರತ್ಯೇಕ ಬೋನಸ್‌ ಮತ್ತು ಇತರೆ ಭತ್ಯೆಗಳನ್ನೂ ನೀಡುತ್ತವೆ.