Home News Suicide: “ಜೀವನದಲ್ಲಿ ಏನು ಬೇಕಾದರೂ ಮಾಡಿ, ಆದರೆ ಮದುವೆಯಾಗಬೇಡಿ” ಆತ್ಮಹತ್ಯೆ ಮುನ್ನ ಯುವಕನ ಮನ...

Suicide: “ಜೀವನದಲ್ಲಿ ಏನು ಬೇಕಾದರೂ ಮಾಡಿ, ಆದರೆ ಮದುವೆಯಾಗಬೇಡಿ” ಆತ್ಮಹತ್ಯೆ ಮುನ್ನ ಯುವಕನ ಮನ ಮಿಡಿಯುವ ವಿಡಿಯೋ ವೈರಲ್!

Hindu neighbor gifts plot of land

Hindu neighbour gifts land to Muslim journalist

Suicide: ಕೆಲವರ ಜೀವನದಲ್ಲಿ ಮದುವೆ ಅನ್ನೋದು ಜೀವನದ ಒಂದು ಹೊಸ ತಿರುವು ಆಗಿರುತ್ತೆ. ಆ ತಿರುವು ಸೋಲಿನ ಕಡೆಗೂ ಆಗಿರಬಹುದು ಅಥವಾ ಗೆಲುವಿನ ಕಡೆಗೂ ಆಗಿರಬಹುದು. ಈ ಅನುಭವ ಪಡೆಯಲು ಮದುವೆ ಆದ್ರೆ ಮಾತ್ರ ಸಾಧ್ಯ. ಆದ್ರೆ ಇದೀಗ ಉತ್ತರ ಪ್ರದೇಶದ ಗಾಜಿಯಾಬಾದ್‌ನ 38 ವರ್ಷದ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಳ್ಳುವ ಮುನ್ನ ಮದುವೆ ಬಗ್ಗೆ ಆಘಾತ ವಿಷಯ ಹೇಳಿದ್ದಾನೆ.

ಹೌದು, ಉತ್ತರ ಪ್ರದೇಶದ ಗಾಜಿಯಾಬಾದ್‌ನ 38 ವರ್ಷದ ವ್ಯಕ್ತಿ ಪ್ರಕಾರ ‘ಜೀವನದಲ್ಲಿ ಏನು ಬೇಕಾದರೂ ಮಾಡಿ ಆದರೆ ಮದುವೆಯಾಗಬೇಡಿ’ ಎಂದು ಮನವಿ ಮಾಡಿಕೊಳ್ಳುತ್ತಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.

ಮಾಹಿತಿ ಪ್ರಕಾರ, ಬುಲಂದ್‌ಶಹರ್‌ನ ನರಸೈನಾ ಪ್ರದೇಶದ ಜಗಜಿತ್ ಸಿಂಗ್ ರಾಣಾ ಎಂಬಾತ ಫ್ಲಾಟ್‌ನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದು, ಔಷಧಿ ಪೂರೈಕೆ ವ್ಯವಹಾರದಲ್ಲಿ ಕೆಲಸ ಮಾಡುತ್ತಿದ್ದರು. ಈತ ಪತ್ನಿ ಹಾಗೂ ಅತ್ತೆಯ ಕಿರುಕುಳದಿಂದ ನೊಂದು ಕೊನೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆದ್ರೆ ಆತ್ಮಹತ್ಯೆಗೂ ಮುನ್ನ ತನ್ನ ಮೊಬೈಲ್‌ನಲ್ಲಿ ಎರಡು ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡಿದ್ದು, ವಿಡಿಯೋದಲ್ಲಿ ಜಗಜಿತ್ ತನ್ನ ಅತ್ತೆಯಿಂದ ಜೀವ ಭಯವಿದೆ, ತನ್ನನ್ನು ಅವರು ಆತ್ಮಹತ್ಯೆಗೆ ಒತ್ತಾಯಿಸುತ್ತಿದ್ದುದ್ದಾಗಿ ಹೇಳಿದ್ದಾನೆ.

ಇನ್ನು “ನನ್ನ ಹೆಂಡತಿ ಮತ್ತು ಅತ್ತೆಯ ಕಿರುಕುಳದಿಂದ ನಾನು ನನ್ನ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದೇನೆ, ಇದು ಅಸಹನೀಯವಾಗಿದೆ. ತನ್ನ ಹೆಂಡತಿ ಮತ್ತು ಅತ್ತೆ ನೀಡಿದ ಹಿಂಸೆಯನ್ನು ವಿವರಿಸಲು ಸಾಧ್ಯವಿಲ್ಲ” ಎಂದು ವಿಡಿಯೋದಲ್ಲಿ ಹೇಳಿದ್ದಾನೆ.

ಇನ್ನು ತನ್ನ ಆಸ್ತಿಯಲ್ಲಿ ಯಾರಿಗೂ ಪಾಲು ನೀಡಬಾರದು, ನನ್ನ ಮುಖವನ್ನು ಅವರಿಗೆ ತೋರಿಸಬಾರದು ಎಂದು ಹೇಳಿದ್ದಾರೆ.ತನ್ನ ಅಂತಿಮ ಸಂಸ್ಕಾರವನ್ನು ಪೊಲೀಸರು ಮತ್ತು ಆಡಳಿತ ಮಂಡಳಿಯವರು ನಡೆಸಬೇಕು ಮತ್ತು ಯಾರಿಗೂ ಅವರ ಮುಖ ತೋರಿಸಬಾರದು ಎಂದು ವಿಡಿಯೋದಲ್ಲಿ ವಿನಂತಿಸಿದ್ದಾರೆ.

ಎರಡನೇ ವೀಡಿಯೋದಲ್ಲಿ ಜಗಜಿತ್ ಸಿಂಗ್ ತನ್ನ ಕುತ್ತಿಗೆಗೆ ನೇಣು ಕುಣಿಕೆ ಹಾಕಿಕೊಳ್ಳುತ್ತಿದ್ದು ‘ಜೀವನದಲ್ಲಿ ನೀವು ಏನು ಬೇಕಾದರೂ ಮಾಡಿ, ಆದರೆ ಎಂದಿಗೂ ಮದುವೆಯಾಗಬೇಡಿ. ಜೈ ಶ್ರೀ ರಾಮ್.” ಎಂದು ಹೇಳಿದ್ದಾರೆ.

ಸದ್ಯ ಫ್ಲಾಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿದ್ದ ಶವ ಕಂಡು ನೆರೆಹೊರೆಯವರು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಹೊರತೆಗೆದಿದ್ದಾರೆ. ತನಿಖೆ ವೇಳೆ ಪೊಲೀಸರಿಗೆ ಆತ್ಮಹತ್ಯೆಗೂ ಮುನ್ನ ರೆಕಾರ್ಡ್ ಮಾಡಿದ್ದ ಎರಡು ವಿಡಿಯೋಗಳು ಪತ್ತೆಯಾಗಿವೆ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.