Home News ಹನುಮ ಜಯಂತಿ ದಿನ ಡಿಕೆಶಿ ಮನೇಲಿ ನಾಟಿಕೋಳಿ ಮರ್ಡರ್: ಮೀಟಿಂಗ್‌ ಬಗ್ಗೆ ಆರ್ ಅಶೋಕ್ ಲೇವಡಿ

ಹನುಮ ಜಯಂತಿ ದಿನ ಡಿಕೆಶಿ ಮನೇಲಿ ನಾಟಿಕೋಳಿ ಮರ್ಡರ್: ಮೀಟಿಂಗ್‌ ಬಗ್ಗೆ ಆರ್ ಅಶೋಕ್ ಲೇವಡಿ

R Ashok

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು: ಹನುಮ ಜಯಂತಿ ದಿನ ಡಿಕೆಶಿ ಮನೆಯಲ್ಲಿ ನಾಟಿಕೋಳಿ ಮರ್ಡರ್ ಆಗಿದೆ ಎಂದು ಡಿಕೆಶಿ ಮನೆಯ ಬ್ರೇಕ್‌ ಫಾಸ್ಟ್ ಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಲೇವಡಿ ಮಾಡಿದ್ದಾರೆ. ಮಂಗಳವಾರ ಬೆಂಗಳೂರಿನಲ್ಲಿ ಮಾತನಾಡಿದ ಅಶೋಕ್, “ಹನುಮ ಜಯಂತಿ ದಿನ ಕನಕಪುರದ ನಾಟಿ ಕೋಳಿಯ ಮರ್ಡರ್ ನಡೆದಿದೆ. ನಾಟಿಕೋಳಿ ಪಲಾವು, ಬಿರಿಯಾನಿ, ಸಾರು ಮಾಡಲಾಗಿದೆ. ಮೊದಲೇ, ಈ ಸಿದ್ದರಾಮಯ್ಯ ಮಾಂಸ ತಿಂದು ಧರ್ಮಸ್ಥಳಕ್ಕೆ ಹೋಗಿದ್ದು ಸುದ್ದಿಯಾಗಿತ್ತು. ಇಂದು ಹನುಮ ಹುಟ್ಟಿದ ದಿನದಂದು ನಾಟಿಕೋಳಿ ಸಾರು ಮಾಡಲಾಗಿದೆ” ಎಂದು ಹೇಳಿದ್ದಾರೆ.

“ನಾವು ಆಂಜನೇಯನ ಆರಾಧನೆ ಮಾಡಿದರೆ ಸಿದ್ದರಾಮಯ್ಯ ಅವರು ನಾಟಿಕೋಳಿ ಆರಾಧನೆ ಮಾಡಿದ್ದಾರೆ. ಬ್ರೇಕ್ ಫಾಸ್ಟ್ ಮೀಟಿಂಗ್ ಅನ್ನೋದು ಒಂದು ಪ್ರಹಸನ. ಮೊನ್ನೆ ಸಿದ್ದರಾಮಯ್ಯ ಮನೆಯಲ್ಲಿ ಮಾಡಲಾಗಿದೆ, ಇಂದು ಡಿಕೆಶಿ ಮನೆಯಲ್ಲಿ ಮಾಡಲಾಗಿದೆ. ಸೋನಿಯಾ ಗಾಂಧಿ ಅವರ ನಿರ್ದೇಶನ ಹಾಗೂ ರಾಹುಲ್ ಗಾಂಧಿ ಅವರ ಚಿತ್ರಕತೆ, ಕೆಸಿ ವೇಣುಗೋಪಾಲ್ ಅವರ ಡೈಲಾಗ್ ಇದರಲ್ಲಿ ಇದೆ ಎಂದು ಅಶೋಕ್ ಅವರು ವ್ಯಂಗ್ಯವಾಗಿ ಟೀಕೆ ಮಾಡಿದರು.

ಕಾಂಗ್ರೆಸ್ ವರಿಷ್ಠ ಕೆ ಸಿ ವೇಣುಗೋಪಾಲ್ ಅವರು ಸಿದ್ದರಾಮಯ್ಯ, ಡಿಕೆಶಿಗೆ ಸೂಚನೆ ನೀಡಿದ್ದಾರೆ. ಇದೆಲ್ಲಾ ಒಂದು ಪ್ರಹಸನ. ಡಿಕೆ ಶಿವಕುಮಾರ್ ಸಸ್ಯಹಾರಿಯಾಗಿದ್ದಾರೆ. ಹನುಮ ಜಯಂತಿ ಕಾರಣಕ್ಕಾಗಿ ಅವರು ತಿಂದಿಲ್ಲ. ಆದರೆ ಸಿದ್ದರಾಮಯ್ಯರಿಗೆ ನಾಮ, ಜನಿವಾರ ಕಂಡ್ರೆ ಆಗಲ್ಲ. ಅದಕ್ಕೆ ನಾಟಿಕೋಳಿ ತಿಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಟ್ಟೆ ಇಡ್ಲಿ, ಕೋಳಿ, ಬ್ರೇಕ್ ಫಾಸ್ಟ್ ನನಗೆ ಸಿಕ್ಕಿಲ್ಲ ಎಂದು ಪರಮೇಶ್ವರ್ ಅವರು ಹೇಳುತ್ತಿದ್ದಾರೆ. ಕನಿಷ್ಠ ಸಾಂಬಾರು ಆದರು ಕಳಿಸಿಕೊಡಿ ಎಂದು ಹೇಳುತ್ತಿದ್ದಾರೆ. ಕನಿಷ್ಠ ಸಾಂಬಾರು ಸಿಗದ ಪಾಡು ಕಾಂಗ್ರೆಸ್ ಪಕ್ಷದ ಇತರ ನಾಯಕರದ್ದಾಗಿದೆ ಎಂದರು.