Home News Prayagraj: ತ್ರಿವೇಣಿ ಸಂಗಮದಲ್ಲಿ ಡಿಕೆಶಿ ಪುಣ್ಯ ಸ್ನಾನ; ಇದೊಂದು ಐತಿಹಾಸಿಕ ಕ್ಷಣ ಎಂದ ಡಿಸಿಎಂ

Prayagraj: ತ್ರಿವೇಣಿ ಸಂಗಮದಲ್ಲಿ ಡಿಕೆಶಿ ಪುಣ್ಯ ಸ್ನಾನ; ಇದೊಂದು ಐತಿಹಾಸಿಕ ಕ್ಷಣ ಎಂದ ಡಿಸಿಎಂ

Hindu neighbor gifts plot of land

Hindu neighbour gifts land to Muslim journalist

Prayagraj: ಮಹಾಕುಂಭಮೇಳದಲ್ಲಿ ಕರ್ನಾಟಕದ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ತಮ್ಮ ಪತ್ನಿ ಸಮೇತರಾಗಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ, ” ಕುಂಭಮೇಳವನ್ನು ಅತ್ಯಂತ ಪವಿತ್ರವಾಗಿ ನಡೆಸಿದ ಎಲ್ಲ ಸಂಘಟಕರಿಗೆ ನಾನು ಧನ್ಯವದ ಹೇಳುತ್ತೇನೆ. ಇದು ಒಬ್ಬರ ಜೀವನದಲ್ಲಿ ಬರುವ ಒಂದು ಐತಿಹಾಸಿಕ ಕ್ಷಣ” ಎಂದು ಸುದ್ದಿಗಾರರಿಗೆ ಹೇಳಿದರು.

 

ರವಿವಾರ ಬೆಳಗ್ಗೆ ಬೆಂಗಳೂರಿನಿಂದ ಹೊರಟಿದ್ದ ಡಿ.ಕೆ.ಶಿವಕುಮಾರ್‌ ಅವರು ಕೆಲವು ಸಾಧು, ಸಂತರ ಜೊತೆ ಪುಣ್ಯಸ್ನಾನ ಮಾಡಿದ್ದಾರೆ.

 

ಇಲ್ಲಿಗೆ ಬರುವ ಕೋಟಿಗಟ್ಟಲೆ ಜನರಿಗೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡುತ್ತಿದ್ದಾರೆ. ಇದು ಸಣ್ಣ ಕೆಲಸವಲ್ಲ. ಸಂಘಟನೆ ಹೇಗೆ ನಡೆಯುತ್ತದೆ ಎನ್ನುವುದು ನನಗೆ ಗೊತ್ತಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.