Home News RCB ಫ್ಯಾನ್ಸ್‌ಗೆ ಸಿಹಿ ಸುದ್ದಿ ನೀಡಿದ ಡಿಕೆಶಿ: 2026 ರ ಐಪಿಎಲ್‌ ಬೆಂಗಳೂರಿನಲ್ಲೇ

RCB ಫ್ಯಾನ್ಸ್‌ಗೆ ಸಿಹಿ ಸುದ್ದಿ ನೀಡಿದ ಡಿಕೆಶಿ: 2026 ರ ಐಪಿಎಲ್‌ ಬೆಂಗಳೂರಿನಲ್ಲೇ

D.K.Shivakumar

Hindu neighbor gifts plot of land

Hindu neighbour gifts land to Muslim journalist

19ನೇ ಆವೃತ್ತಿಯ ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಎಲ್ಲಾ ಪಂದ್ಯಗಳು ಬೆಂಗಳೂರಿನಲ್ಲೇ ನಡೆಯಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಅವರು ಘೋಷಣೆ ಮಾಡಿದ್ದಾರೆ.

ನಗರದಲ್ಲಿ ಕೆಎಸ್‌ಸಿಯ ಚುನಾವಣೆಯ ಮತದಾನದ ಸಂದರ್ಭದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಡಿಸಿಎಂ ಡಿಕೆಶಿವಕುಮಾರ್‌ ಅವರು, ನಾನು ಕ್ರಿಕೆಟ್‌ ಲವರ್‌, ಆರ್‌ಸಿಬಿ ನಮ್ಮ ಹೆಮ್ಮೆ. ಯಾವುದೇ ಕಾರಣಕ್ಕೂ ನಮ್ಮಿಂದ ಐಪಿಎಲ್‌ ಕೈ ತಪ್ಪೋದಿಲ್ಲ. ಬೆಂಗಳೂರಿನಲ್ಲೇ ನಡೆಯುತ್ತೆ. ನಾನು ಎಲ್ಲಾ ಮಾತಾಡ್ತೀನಿ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಏನು ಅನಾಹುತ ಆಗಿದೆ, ಅದೆಲ್ಲವನ್ನ ತಪ್ಪಿಸಿ ಬೆಂಗಳೂರು ಗೌರವ ಉಳಿಸುವ ಕೆಲಸ ಮಾಡ್ತೀವಿ. ಕಾನೂನು ಚೌಕಟ್ಟಿನಲ್ಲಿ ಕ್ರೌಡ್‌ ಮ್ಯಾನೇಜ್ಮೆಂಟ್‌ ಗಮನದಲ್ಲಿಟ್ಟುಕೊಂಡು ಸ್ಟೇಡಿಯಂ ಬಳಸುತ್ತೇವೆ. ಇದಕ್ಕೆ ಪರ್ಯಾಯವಾಗಿ ಬೇರೆ ದೊಡ್ಡ ಸ್ಟೇಡಿಯಂ ಮಾಡುತ್ತೇವೆ ಎಂದು ಹೇಳಿದರು.