Home News Madikeri: ಕುಶಾಲನಗರದಲ್ಲಿ ಸಾಕು ನಾಯಿ, ಬೆಕ್ಕುಗಳ ಜಿಲ್ಲಾ ಮಟ್ಟದ ಪ್ರದರ್ಶನ ಸ್ಪರ್ಧೆ!

Madikeri: ಕುಶಾಲನಗರದಲ್ಲಿ ಸಾಕು ನಾಯಿ, ಬೆಕ್ಕುಗಳ ಜಿಲ್ಲಾ ಮಟ್ಟದ ಪ್ರದರ್ಶನ ಸ್ಪರ್ಧೆ!

Hindu neighbor gifts plot of land

Hindu neighbour gifts land to Muslim journalist

Madikeri: ಕುಶಾಲನಗರ ಇನ್ನರ್ ವೀಲ್ ಸಂಸ್ಥೆಯ ವತಿಯಿಂದ ವಿಶ್ವ ಪ್ರಾಣಿಗಳ ದಿನದ ಪ್ರಯುಕ್ತ ಮೇ 4 ರಂದು ಬೆಳಿಗ್ಗೆ 10 ಗಂಟೆಯಿಂದ 12.30ರ ವರೆಗೆ ಕುಶಾಲನಗರ ಗಾಯತ್ರಿ ಕಲ್ಯಾಣ ಮಂಟಪದ ಆವರಣದಲ್ಲಿ ಮೊದಲ ಬಾರಿಗೆ ಜಿಲ್ಲಾ ಮಟ್ಟದ ಸಾಕು ನಾಯಿಗಳ ಮತ್ತು ಬೆಕ್ಕುಗಳ ಪ್ರದರ್ಶನ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಸಾಕು ಪ್ರಾಣಿಗಳ ಬಗ್ಗೆ ಅರಿವು ಮೂಡಿಸುವ ಈ ಸ್ಪರ್ಧೆಯಲ್ಲಿ ಕೊಡಗು ಜಿಲ್ಲೆಯ ಎಲ್ಲರೂ ತಮ್ಮ ಸಾಕು ನಾಯಿ ಹಾಗೂ ಬೆಕ್ಕುಗಳೊಂದಿಗೆ ಭಾಗವಹಿಸಬಹುದು. ಮೂರು ವಿಧದಲ್ಲಿ ನಾಯಿ ಹಾಗೂ ಬೆಕ್ಕುಗಳ ಸ್ಪರ್ಧೆ ನಡೆಯಲಿದೆ. ವಿಜೇತರಾಗುವ
ನಾಯಿ ಹಾಗೂ ಬೆಕ್ಕುಗಳಿಗೆ ಆಕರ್ಷಕ ಬಹುಮಾನ ದೊರೆಯಲಿದೆ. ಅಲ್ಲದೇ ಭಾಗವಹಿಸುವ ಎಲ್ಲಾ ನಾಯಿ ಹಾಗೂ ಬೆಕ್ಕುಗಳಿಗೂ ಆಕರ್ಷಕ ಬಹುಮಾನ ಲಭಿಸಲಿದೆ.

ಪ್ರವೇಶ ಶುಲ್ಕ ರೂ. 250 ಆಗಿದ್ದು, ಮೊದಲು ಹೆಸರು ನೋಂದಾಯಿಸಿಕೊಳ್ಳುವ 50 ಸ್ಪರ್ಧಿಗಳಿಗೆ ಮಾತ್ರ ಅವಕಾಶವಿರುತ್ತದೆ.

ಹೆಚ್ಚಿನ ಮಾಹಿತಿಗೆ ಚಿತ್ರಾ ರಮೇಶ್ – 9342202405 ಅಥವಾ ನೇಹಾ ಜಗದೀಶ್ – 9845044645 ಇವರನ್ನು ಸಂಪರ್ಕಿಸಬಹುದು.