Home latest ಟ್ರಾಫಿಕ್ ಫೈನ್ ರಿಯಾಯಿತಿ ಎರಡು ವಾರ ಮತ್ತೆ ವಿಸ್ತರಣೆ!

ಟ್ರಾಫಿಕ್ ಫೈನ್ ರಿಯಾಯಿತಿ ಎರಡು ವಾರ ಮತ್ತೆ ವಿಸ್ತರಣೆ!

Hindu neighbor gifts plot of land

Hindu neighbour gifts land to Muslim journalist

ಟ್ರಾಫಿಕ್ ಫೈನ್ ಕಟ್ಟಲು ಬಾಕಿ ಇರುವವರಿಗೆ ಗುಡ್ ನ್ಯೂಸ್ ಸಿಕ್ಕಿದೆ. ರಿಯಾಯಿತಿ ದರದಲ್ಲಿ ಟ್ರಾಫಿಕ್ ಫೈನ್ ಕಟ್ಟಲು ಆಗದವರಿಗೆ ಮತ್ತೊಂದು ಅವಕಾಶ ದೊರೆತಿದೆ. ಈ ಮೊದಲು ಟ್ರಾಫಿಕ್ ಫೈನ್ ಮೇಲೆ ಶೇ.50 ಪ್ರತಿಶತ ರಿಯಾಯಿತಿ ನೀಡಿದ್ದರು. ಇದೀಗ ಟ್ರಾಫಿಕ್ ಫೈನ್ ರಿಯಾಯಿತಿಯ ದರವನ್ನು ಮತ್ತೆ ಎರಡು ವಾರ ವಿಸ್ತರಣೆ ಮಾಡಲಾಗುವುದು ಎಂದು ನ್ಯಾಯಮೂರ್ತಿ ಬಿ. ವೀರಪ್ಪ ಮಾಧ್ಯಮದಲ್ಲಿ ಮಾಹಿತಿಯನ್ನು ನೀಡಿದ್ದಾರೆ.

ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾಯಮೂರ್ತಿ ಬಿ. ವೀರಪ್ಪ ಈ ಬಗ್ಗೆ ಮಾತನಾಡಿ, ಟ್ರಾಫಿಕ್ ಫೈನ್ ರಿಯಾಯಿತಿ ವಿಸ್ತರಿಸಬೇಕೆಂಬ ಬೇಡಿಕೆಯನ್ನು ಜನಸಾಮಾನ್ಯರು ಇಟ್ಟಿದ್ದಾರೆ, ಅಲ್ಲದೆ ಸಾರಿಗೆ ಇಲಾಖೆಯಿಂದಲೂ ಈ ಸಂಬಂಧ ಪತ್ರ ಬಂದಿದೆ. ಸಿಜೆ ಪ್ರಸನ್ನ ಬಿ. ವರಾಳೆ ಸಹ ಪ್ರಸ್ತಾವನೆಗೆ ಒಪ್ಪಿಗೆಯನ್ನು ನೀಡಿದ್ದಾರೆ. ಈ ಬಗ್ಗೆ ಇಂದು ಅಧಿಕೃತವಾಗಿ ತೀರ್ಮಾನವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಸಂಚಾರ ನಿಯಮ ಉಲ್ಲಂಘನೆ ದಂಡ ವಸೂಲಿಗೆ ಶೇಕಡ 50ರಷ್ಟು ರಿಯಾಯಿತಿ ನೀಡಿದ್ದು, ವಾಹನ ಸವಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರಿಂದಾಗಿ ಅನೇಕ ದಿನಗಳಿಂದ ದಂಡ ಬಾಕಿ ಉಳಿಸಿಕೊಂಡವರು ರಿಯಾಯಿತಿ ರಿಯಾಯಿತಿ ಸೌಲಭ್ಯ ಪಡೆದು ದಂಡ ಪಾವತಿಸತೊಡಗಿದ್ದಾರೆ. ಈಗಾಗಲೇ ನೂರಾರು ಕೋಟಿ ರೂಪಾಯಿ ದಂಡವನ್ನು ಸಂಗ್ರಹಿಸಲಾಗಿದೆ.

ಜನಸಾಮಾನ್ಯರಿಂದ ದಂಡ ರಿಯಾಯಿತಿ ವಿಸ್ತರಿಸಬೇಕೆಂಬ ಬೇಡಿಕೆ ಕೇಳಿ ಬಂದ ಹಿನ್ನೆಲೆಯಲ್ಲಿ ಮತ್ತೆ ಎರಡು ವಾರ ವಿಸ್ತರಿಸಲಾಗುವುದು ಎಂದು ಹೇಳಲಾಗಿದೆ.