Home News Dinesh Gundurao: ಮಂಗಳೂರಿನ ಕೆಟ್ಟ ವ್ಯವಸ್ಥೆಗೆ ಬಿಜೆಪಿ ಕಾರಣ- ದಿನೇಶ್‌ ಗುಂಡೂರಾವ್‌

Dinesh Gundurao: ಮಂಗಳೂರಿನ ಕೆಟ್ಟ ವ್ಯವಸ್ಥೆಗೆ ಬಿಜೆಪಿ ಕಾರಣ- ದಿನೇಶ್‌ ಗುಂಡೂರಾವ್‌

Hindu neighbor gifts plot of land

Hindu neighbour gifts land to Muslim journalist

Shimogga: ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌, ಬಿಜೆಪಿ ಹಾಗೂ ಸಂಘ ಪರಿವಾರದವರಿಗೆ ಒಂದು ಶವ ಸಿಕ್ಕರೂ ಅದರ ಮೇಲೆ ರಾಜಕೀಯ ಮಾಡುತ್ತಾರೆ. ಬಿಜೆಪಿಯವರಿಗೆ ಮುಸ್ಲಿಮರ ಬಗ್ಗ ಕೆಟ್ಟ ಅಭಿಪ್ರಾಯವಿದೆ ಎಂದು ಹೇಳಿದ್ದಾರೆ.

ಈ ಕುರಿತು ಅವರು ಶಿವಮೊಗ್ಗದಲ್ಲಿ ಮಾತನಾಡುತ್ತಾ, ” ಮಂಗಳೂರಿನಲ್ಲಿ ಸರಣಿ ಕೊಲೆಗಳಿಗೆ ಕೋಮು ವೈಷಮ್ಯ ಹಾಗೂ ಸೇಡು ಕಾರಣ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದುಷ್ಕರ್ಮಿಗಳ ಕೃತ್ಯವು ಬಹಳ ನೋವಿನ ಸಂಗತಿ. ಸರಣ ಹತ್ಯೆಗಳಿಂದ ಆ ಜಿಲ್ಲೆಗೆ, ರಾಜ್ಯಕ್ಕೆ ಕೆಟ್ಟ ಹೆಸರು ಎಂದು ಹೇಳಿದರು.

ಬಂಟ್ವಾಳದಲ್ಲಿ ನಡೆದ ಯುವಕ ಅಬ್ದುಲ್‌ ರಹಿಮಾನ್‌ ಕೊಲೆ ಹಿಂದೆ ಯಾರಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಗೊತ್ತಿದೆ. ಬಿಜೆಪಿಯವರ ಹಾಗೆ ಪ್ರಚೋದನಕಾರಿ ಹೇಳಿಕೆ ನೀಡುವ ಜನ ನಾವಲ್ಲ. ಅವರ ಬಾಯಿಗೆ ಲಂಗು ಲಗಾಮು ಇಲ್ಲ. ಬಿಜೆಪಿ ಹಾಗೂ ಸಂಘ ಪರಿವಾರದವರು ಇಂತಹ ಸಂದರ್ಭ ದೊರಕಿದರೆ, ಹೆಣದ ಮೇಲೆಯೂ ರಾಜಕೀಯ ಮಾಡುತ್ತಾರೆ. ಇದೇ ಅವರ ಬಂಡವಾಳ. ಮಂಗಳೂರಿನಲ್ಲಿ ನಡೆಯುತ್ತಿರುವ ಘಟನೆಗಳಿಗೆ ಅವರೂ ಕಾರಣರ್ಕತರು ಎಂದು ಗುಂಡೂರಾವ್‌ ಆರೋಪ ಮಾಡಿದರು.