Home Breaking Entertainment News Kannada RCB: ತಂಡದಲ್ಲಿದ್ದ ವ್ಯಕ್ತಿಯಿಂದಲೇ RCB ಎದುರು ಪಂಜಾಬ್ ಕಿಂಗ್ಸ್ ಸೋತು ಹೋಯ್ತಾ?

RCB: ತಂಡದಲ್ಲಿದ್ದ ವ್ಯಕ್ತಿಯಿಂದಲೇ RCB ಎದುರು ಪಂಜಾಬ್ ಕಿಂಗ್ಸ್ ಸೋತು ಹೋಯ್ತಾ?

Hindu neighbor gifts plot of land

Hindu neighbour gifts land to Muslim journalist

Shreyas Iyer : ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಗೆಲುವಿಗೆ ಮತ್ತು ತಮ್ಮ ಸೋಲಿಗೆ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯ‌ರ್ ಮಾತಾಡಿದ್ದಾರೆ. ತಾವು ಪಂದ್ಯ ಸೋಲಲು ಕಾರಣ ಬಿಚ್ಚಿಟ್ಟಿದ್ದಾರೆ. ತಮ್ಮ ಸೋಲಿಗೆ ಆ ಒಬ್ಬ ಕಾರಣ ಎಂದು ಎಂದು ಅಯ್ಯರ್ ಹೇಳಿದ್ದಾರೆ. ಈ ಮಧ್ಯೆ RCB ಎದುರು ಪಂಜಾಬ್ ಸೋಲಲು ಆ ಇಬ್ಬರು ಕಾರಣ ಅಂತಿದೆ ಸೋಷಿಯಲ್ ಮೀಡಿಯಾ

“ನಾವು ಕಳೆದ ಪಂದ್ಯದಲ್ಲಿ ನಾವು 200 ರನ್‌ಗಳ ಗುರಿ ಸುಲಭವಾಗಿ ಸಾಧಿಸಿದ್ದೆವು. ಆದರೆ, ನಿನ್ನೆಯ ಪಂದ್ಯದಲ್ಲಿ ಆರ್‌ಸಿಬಿ ಬೌಲರ್‌ಗಳು ಅದ್ಭುತ ಬೌಲಿಂಗ್ ಮಾಡಿದರು. ಕೃನಾಲ್ ಪಾಂಡ್ಯ ಅಸಾಧಾರಣ ಪ್ರದರ್ಶನದೊಂದಿಗೆ ಪಂದ್ಯದ ದಿಕ್ಕನ್ನೇ ತಿರುಗಿಸಿದರು. ವಿಶೇಷವಾಗಿ ನಾವು ಸೋಲಲು ಆತನೇ ಕಾರಣ ಎಂದು ಅಯ್ಯರ್ ಸೂಚಿಸಿದರು. ಕೃನಾಲ್ ಪಾಂಡ್ಯ ತಮ್ಮ ಅನುಭವ ಬಳಸಿಕೊಂಡು ಬೌಲಿಂಗ್ ಮಾಡಿ ಗೆದ್ದರು ಎಂದಿದ್ದಾರೆ.

ಜತೆಗೆ, ‘ನಮ್ಮ ತಂಡದ ಹುಡುಗರಲ್ಲಿ ಅನೇಕರು ತಮ್ಮ ಮೊದಲ ಸೀಸನ್ ಆಡಿದ್ದಾರೆ. ಹಾಗಿದ್ರೆ ಕೂಡಾ ಅವರು ನಿರ್ಭೀತ ಆಟ ಆಡಿದರು. ಮುಂದಿನ ವರ್ಷ ನಾವು ಪ್ರಶಸ್ತಿಯನ್ನು ಗೆಲ್ಲಲು ಪ್ರಯತ್ನಿಸುತ್ತೇವೆ ಎಂದು ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಹೇಳಿದರು.

ಅಂತಿಮ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ರನ್ ಗಳಿಸುವಲ್ಲಿ ವಿಫಲರಾದರು. ಕೇವಲ ಒಂದು ರನ್ ಗಳಿಸಿ ರೊಮ್ಯಾರಿಯೋ ಶೆಫರ್ಡ್‌ಗೆ ವಿಕೆಟ್ ಒಪ್ಪಿಸಿ ನಡೆದ ಕಾರಣಕ್ಕೆ ಪಂದ್ಯ ಸೋತಿದೆ ಎನ್ನುತ್ತಿದ್ದಾರೆ.

ಇನ್ನು ಆರ್‌ಸಿಬಿ ಬೌಲರ್‌ಗಳಾದ ಕೃನಾಲ್ ಪಾಂಡ್ಯ 4 ಓವ‌ರ್ ಬೌಲಿಂಗ್ ಮಾಡಿ ಕೇವಲ 17 ರನ್ ನೀಡಿ ಎರಡು ಅಗತ್ಯ ವಿಕೆಟ್ ಪಡೆದರು. ಅಲ್ಲಿಗೆ ಪಂದ್ಯದ ದಿಕ್ಕೇ ಬದಲಾಗಿ ಹೋಯಿತು.