Home News Belthangady: ಮುಳಿಯದಲ್ಲಿ ಡೈಮಂಡ್ ಫೆಸ್ಟ್ ಗೆ ಚಾಲನೆ; ವಿನೂತನ ವಜ್ರಾಭರಣ ಖರೀದಿಗೆ ಸುಮಧುರ ಅವಕಾಶ

Belthangady: ಮುಳಿಯದಲ್ಲಿ ಡೈಮಂಡ್ ಫೆಸ್ಟ್ ಗೆ ಚಾಲನೆ; ವಿನೂತನ ವಜ್ರಾಭರಣ ಖರೀದಿಗೆ ಸುಮಧುರ ಅವಕಾಶ

Hindu neighbor gifts plot of land

Hindu neighbour gifts land to Muslim journalist

 

Belthangady: ಮುಂಡಾಜೆ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಗಾಯತ್ರಿ ಪಿ. ಅವರು ಬೆಳ್ತಂಗಡಿ (Belthangady) ಮುಳಿಯ ಚಿನ್ನಾಭಾರಣಗಳ ಮಳಿಗೆಯಲ್ಲಿ ಮಾ 3ರಂದು ಡೈಮಾಂಡ್ ಪೆಸ್ಟ್ ಗೆ ಚಾಲನೆ ನೀಡಿದರು.

ಜೇಸಿಐ ಭಾರತದ ವಲಯ 15 ರ ಉಪಾಧ್ಯಕ್ಷ ರಂಜಿತ್‌ ಹೆಚ್‌.ಡಿ ಮಾತನಾಡಿ, 80 ದಶಕದಿಂದ ಜನರೊಂದಿಗೆ ಅವಿನಾಭವ ಸಂಬಂಧವನ್ನು ಉಳಿಸಿಕೊಂಡು ಬಂದಿರುವ ಸಂಸ್ಥೆ ಮುಳಿಯ. ಚಿನ್ನಾಭಾರಣಗಳಲ್ಲಿ ಉತ್ತಮ ಗುಣ ಮಟ್ಟವನ್ನು ನೀಡುತ್ತಾ ಬಂದಿರುವ ಮುಳಿಯ ವಿನೂತನ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ವ್ಯವಹಾರಕ್ಕೆ ಸಾಮಾಜಿಕವಾಗಿ ತೊಡಗಿಸಿಕೊಂಡು ಜನರ ಕಷ್ಟಗಳಿಗೆ ಸ್ಪಂದಿಸುತ್ತಿರುವ ಸಂಸ್ಥೆ ಮುಳಿಯ ಎಂದು ಅಭಿಪ್ರಾಯಪಟ್ಟರು

ಇನ್ನು ಮಾರ್ಕೇಟಿಂಗ್‌ ಕನ್ಸಲ್‌ಟೆಂಟ್ ವೇಣು ಶರ್ಮ ಮಾತನಾಡಿ, ಚಿನ್ನಭಾರಣ ಸುರಕ್ಷಿತ ಹೂಡಿಕೆಯ ಉದ್ಯಮವಾಗಿದೆ. ವಿಶಿಷ್ಟ ಹಾಗೂ ವಿನೂತನ ವಜ್ರಭಾರಣಗಳ ಸಂಗ್ರಹಣೆ ಈ ಬಾರಿಯ ಡೈಮಾಂಡ್‌ ಫೆಸ್ಟ್ ನಲ್ಲಿದೆ. ಜೀವನದ ಮೊದಲ ವಜ್ರಾಭರಣ ಖರೀದಿಯನ್ನು ಮುಳಿಯೊಂದಿಗೆ ಪ್ರಾರಂಭಿಸಿ ಎಂದು ಹೇಳಿದರು.

ಕಾರ್ಯನಿರ್ವಾಹಕ ಕಾರ್ಯದರ್ಶಿ ಶಿವಕೃಷ್ಣಮೂರ್ತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾಹಕರು, ಸಿಬ್ಬಂದಿ ವರ್ಗವದರು ಭಾಗವಹಿಸಿದ್ದರು. ಶಾಖಾ ಪ್ರಬಂಧಕ ಲೋಹಿತ್ ಸ್ವಾಗತಿಸಿ, ಸಿಬ್ಬಂದಿ ಅಶ್ವಥ್‌ ವಂದಿಸಿ, ಕನ್ನಿಕಾ ನಿರೂಪಿಸಿದರು.