Home News Dharwada: ಅಪ್ರಾಪ್ತೆಯನ್ನು ಲಾಡ್ಜ್ ಗೆ ಕರೆದೊಯ್ದು ಯುವಕನಿಂದ ಲೈಂಗಿಕ ದೌರ್ಜನ್ಯ – ವಿಡಿಯೋ ಶೇರ್ ಮಾಡಿ...

Dharwada: ಅಪ್ರಾಪ್ತೆಯನ್ನು ಲಾಡ್ಜ್ ಗೆ ಕರೆದೊಯ್ದು ಯುವಕನಿಂದ ಲೈಂಗಿಕ ದೌರ್ಜನ್ಯ – ವಿಡಿಯೋ ಶೇರ್ ಮಾಡಿ ಅಟ್ಟಹಾಸ

Hindu neighbor gifts plot of land

Hindu neighbour gifts land to Muslim journalist

Dharwada: ಅಪ್ರಾಪ್ತ ಬಾಲಕಿಯ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆಯುತ್ತಿರುವುದು ನಿಜಕ್ಕೂ ದುರಂತ. ಕಠಿಣ ಕಾನೂನು, ಶಿಕ್ಷೆಗಳೆಲ್ಲವೂ ಜಾರಿಯಲ್ಲಿದ್ದರೂ ಕಾಮುಕರು ಯಾವುದನ್ನು ಲೆಕ್ಕಿಸದೆ ಅಪ್ರಾಪ್ತರ ಜೀವನವನ್ನೇ ನಾಶ ಮಾಡುತ್ತಾ ತಮ್ಮ ಕಾಮತೃಷೆ ತೀರಿಸಿಕೊಳ್ಳುತ್ತಿದ್ದಾರೆ. ಅಂತೆಯೇ ಇದೀಗ ಧಾರವಾಡದಲ್ಲೊಂದು(Dharawada) ಅವಮಾನಕರ ಘಟನೆ ಬೆಳಕಿಗೆ ಬಂದಿದ್ದು, ಪಾಪಿ ಯುವಕನೊಬ್ಬ ಅಬಲೆಯ ಬಾಳಿಗೆ ಕೊಳ್ಳಿ ಇಡುವ ಕೆಲಸ ಮಾಡಿದ್ದಾನೆ.

ಹೌದು, ಪೇಡಾ ನಗರಿ ಧಾರವಾಡದಲ್ಲಿ ಕಾಮುಕನೊಬ್ಬ ಅಪ್ರಾಪ್ತ ಬಾಲಕಿಯನ್ನು ಆಗಸ್ಟ್ 8 ರಂದು ಲಾಡ್ಜ್ ಒಂದಕ್ಕೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ (Physical abuse) ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಷ್ಟೇ ಅಲ್ಲದೆ ಅದನ್ನು ವಿಡಿಯೊ ಮಾಡಿಕೊಂಡಿದ್ದಾನೆ. ಬಳಿಕ ಆ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.

ಈ ವಿಡಿಯೋ ಹಲವು ವಾಟ್ಸಾಪ್ ಗ್ರೂಪ್‌(Watsapp) ಗಳಲ್ಲಿ ಹರಿದಾಡಿದ್ದು, ಅದನ್ನು ಹಲವರು ಬೇರೆ ಗ್ರೂಪ್‌ಗೆ ಶೇರ್ ಮಾಡಿದ್ದಾರೆ. ಪುಣ್ಯಕ್ಕೆ ಆ ಕಾಮಾಂಧ ಯುವಕನನ್ನು ಧಾರವಾಡ ವಿದ್ಯಾಗಿರಿ ಠಾಣೆ ಪೊಲೀಸರು ಬಂಧಿಸಿ ಫೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ. ಜತೆಗೆ ಬೇರೆ ಬೇರೆ ಗ್ರೂಪ್‌ನಲ್ಲಿ ವಿಡಿಯೋ ಶೇರ್ ಮಾಡಿದ್ದ 9 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ.