Home News Dharmasthala : ಧರ್ಮಸ್ಥಳ ಪ್ರಕರಣ- ಅನಾಮಿಕ ಹೇಳಿದ 5 ಸ್ಥಳಗಳಲ್ಲಿ ಅಸ್ಥಿಪಂಜರ ಸಿಗದಿರಲು ಇದೇ...

Dharmasthala : ಧರ್ಮಸ್ಥಳ ಪ್ರಕರಣ- ಅನಾಮಿಕ ಹೇಳಿದ 5 ಸ್ಥಳಗಳಲ್ಲಿ ಅಸ್ಥಿಪಂಜರ ಸಿಗದಿರಲು ಇದೇ ಕಾರಣ !!

Hindu neighbor gifts plot of land

Hindu neighbour gifts land to Muslim journalist

Dharmasthala : ಧರ್ಮಸ್ಥಳದ ನೇತ್ರಾವತಿ ನದಿ ತೀರದಲ್ಲಿ ನದಿ ಅನಾಮಿಕ ವ್ಯಕ್ತಿ ತೋರಿಸುತ್ತಿರುವ ಜಾಗಗಳ ಆಧಾರದ ಮೇಲೆ ಸಮಾಧಿಗಳನ್ನು ಅಗೆಯುವ ಕಾರ್ಯ ನಡೆಯುತ್ತಿದೆ. ಮೂರನೇ ದಿನವಾದ ಇಂದು ನಡೆಯುತ್ತಿರುವ ಉತ್ಖನನ ಕಾರ್ಯಾಚರಣೆಯಲ್ಲಿ 6ನೇ ಸ್ಥಳದಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿದೆ.

ಅನಾಮಿಕ ವ್ಯಕ್ತಿಯು ಸುಮಾರು 13 ಸ್ಥಳಗಳನ್ನು ಗುರುತಿಸಿದ್ದು, ನಿನ್ನೆ ಹಾಗೂ ಮೊನ್ನೆ ಐದು ಜಾಗಗಳನ್ನು ಅಗೆಯಲಾಗಿತ್ತು. ಆದರೆ ಅಲ್ಲಿ ಯಾವುದೇ ಶವಗಳ ಅವಶೇಷ ಪತ್ತೆಯಾಗಿರಲಿಲ್ಲ. ಮೂರನೇ ದಿನವಾದ ಇಂದು ನಡೆಯುತ್ತಿರುವ ಉತ್ಖನನ ಕಾರ್ಯಾಚರಣೆಯಲ್ಲಿ 6ನೇ ಸ್ಥಳದಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿದೆ. ಸ್ಥಳ ಸಂಖ್ಯೆ 6 ರಲ್ಲಿ ಭಾಗಶಃ ಅಸ್ಥಿಪಂಜರದ ಅವಶೇಷಗಳು ಕಂಡುಬಂದಿವೆ ಎಂದು ಎಸ್‌ಐಟಿಯ ಮೂಲಗಳು ತಿಳಿಸಿವೆ.

ಇನ್ನು ಅನಾಮಿಕ ವ್ಯಕ್ತಿ ಗುರುತಿಸಿದ ಸ್ಥಳಗಳ ಬಗ್ಗೆ ಅನುಮಾನಗಳು ಮೂಡಿದ್ದು, ಸದ್ಯ ಈ ಸ್ಥಳಗಳಲ್ಲಿ ಯಾವುದೇ ಕುರುಹು ಸಿಗದಿರಲು ಕಾರಣ ಏನಿರಬಹುದು ಎಂಬ ಚರ್ಚೆಗಳು ಆರಂಭಗೊಂಡಿವೆ. ಅಂದಹಾಗೆ ಅನಾಮಿಕ ಗುರುತಿಸಿರುವ ಮೊದಲ 8 ಪಾಯಿಂಟ್‌ಗಳು ನೇತ್ರಾವತಿ ನದಿ ತೀರದಲ್ಲಿದ್ದು, ನದಿ ಪ್ರವಾಹ ಬಂದಾಗ ಈ ಸ್ಥಳಗಳಗವರೆಗೂ ನೀರು ಬರುತ್ತದೆ ಎನ್ನಲಾಗಿದೆ. ಅಲ್ಲದೇ ಚಾರ್ಮಾಡಿ ಭೂಕುಸಿತವಾದಾಗಲೂ ಇಲ್ಲಿಗೆ ಹೆಚ್ಚಿನ ಮಣ್ಣು ಬಂದಿರಬಹುದು, ಹೀಗಾಗಿ ಈ ಸ್ಥಳಗಳಲ್ಲಿ ಸಂಪೂರ್ಣ ಅಸ್ತಿಪಂಜರ ಸಿಗದೇ ಇರಬಹುದು ಎನ್ನಲಾಗಿದೆ.