Home News Dharmasthala Case: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ: 6ನೇ ಪಾಯಿಂಟ್‌ನಲ್ಲಿ 12 ಮೂಳೆ ಪತ್ತೆ, ಇಂದು...

Dharmasthala Case: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ: 6ನೇ ಪಾಯಿಂಟ್‌ನಲ್ಲಿ 12 ಮೂಳೆ ಪತ್ತೆ, ಇಂದು 7ನೇ ಪಾಯಿಂಟ್‌ ಅಗೆತ, ಗರಿಗೆದರಿದ ಕುತೂಹಲ

Hindu neighbor gifts plot of land

Hindu neighbour gifts land to Muslim journalist

Dharmasthala Case: ಧರ್ಮಸ್ಥಳದಲ್ಲಿ ಅನೇಕ ಸ್ಥಳಗಳಲ್ಲಿ ಶವಗಳನ್ನು ಹೂತಿರುವ ಘಟನೆಗೆ ಸಂಬಂಧಪಟ್ಟಂತೆ 6 ನೇ ಪಾಯಿಂಟ್‌ನಲ್ಲಿ 12 ಮೂಳೆಗಳು ಪತ್ತೆಯಾಗಿದ್ದು, ಕತ್ತಲವರೆಗೆ ಕಾರ್ಯಾಚರಣೆ ನಡೆದಿದ್ದು, ಅನೇಕರಲ್ಲಿ ಭಾರೀ ಕುತೂಹಲಗಳನ್ನು ತೆರೆದಿಟ್ಟಿದೆ. ಇಂದು ಮತ್ತೆ ಏಳನೇ ಪಾಯಿಂಟ್‌ನಲ್ಲಿ ಉತ್ಖನನ ಕೆಲಸ ಮುಂದುವರಿಯಲಿದೆ.

ಆರನೇ ಪಾಯಿಂಟ್‌ನಲ್ಲಿ ದೊರಕಿರುವ ಮೂಳೆಗಳು ಪುರುಷನದ್ದು ಎನ್ನಲಾಗಿದೆ. ಉತ್ಖನನ ವೇಳೆ ದೊರಕಿದ 12 ಮೂಳೆಗಳನ್ನು ಸಂರಕ್ಷಿಸಿಡಲಾಗಿದೆ.

ನದಿ ತೀರದ ಪಾಯಿಂಟ್‌ ಬಗ್ಗೆ ದೂರುದಾರ ಮಾಸ್ಕ್‌ಮ್ಯಾನ್‌ ಗೆ ವಿಶೇಷ ಧೈರ್ಯವಿತ್ತು. ಮೂರು ಅಡಿ ಅಗೆಯುವಾಗಲೇ ಎರಡು ಮೂಳೆಗಳು ಪತ್ತೆಯಾಗಿತ್ತು. ಹಿಟಾಚಿ ಬಳಸಿ ಮತ್ತಷ್ಟು ಆಳಕ್ಕೆ ಇಳಿದಾಗ 12ಮೂಳೆಗಳು ದೊರಕಿದೆ. ಮೂಳೆಗಳು ದೊರಕುತ್ತಿದ್ದಂತೆ ವೈದ್ಯರು ಹಾಗೂ ಎಫ್‌ಎಸ್‌ಎಲ್‌ ತಜ್ಞರನ್ನು ಬಳಸಿ ಸಂರಕ್ಷಿಸಿಡಲಾಗಿದೆ.

ಮೂಳೆ ಸಿಕ್ಕ ಪಾಯಿಂಟ್‌ನಲ್ಲಿ ನೀರಿನ ಒರತೆ ಹೆಚ್ಚಿದ ಕಾರಣ ತಗಡಿನ ಸೀಟುಗಳನ್ನು ಬಳಸಿ ಶೆಲ್ಟರ್‌ ಮಾಡಲಾಗಿದೆ. ಇಂದು ಬೆಳಗ್ಗೆ 7 ನೇ ಪಾಯಿಂಟ್‌ನಿಂದ ಮತ್ತೆ ಅಗೆಯುವ ಕೆಲಸ ಪ್ರಾರಂಭವಾಗಲಿದೆ. ಜೊತೆಗೆ 8 ನೇ ಪಾಯಿಂಟ್‌ನ ಬಳಿ ಎಲ್ಲಾ ಸಿದ್ಧತಾ ಕಾರ್ಯ ನಡೆದಿದೆ. ಮುಂದಿನ ಎರಡು ದಿನದಲ್ಲಿ ಎಲ್ಲಾ ಪಾಯಿಂಟ್‌ಗಳಲ್ಲಿ ಉತ್ಖನನ ಪ್ರಕ್ರಿಯೆ ಪೂರ್ಣಗೊಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ.