Home News Dharmasthala: ವಿವಾಹಿತ ಪ್ರೊಫೆಸರ್‌ ಜೊತೆ ಪ್ರೇಮ ವೈಫಲ್ಯ; ಆಕಾಂಕ್ಷಾ ಸಾವಿಗೆ ಕಾರಣ ಬಯಲು?

Dharmasthala: ವಿವಾಹಿತ ಪ್ರೊಫೆಸರ್‌ ಜೊತೆ ಪ್ರೇಮ ವೈಫಲ್ಯ; ಆಕಾಂಕ್ಷಾ ಸಾವಿಗೆ ಕಾರಣ ಬಯಲು?

Hindu neighbor gifts plot of land

Hindu neighbour gifts land to Muslim journalist

Dharmasthala: ಪಂಜಾಬ್‌ಬಲ್ಲಿ ಧರ್ಮಸ್ಥಳ ಮೂಲದ ಏರೋನಾಟಿಕ್ಸ್‌ ಇಂಜಿನಿಯರ್‌ ಆಕಾಂಕ್ಷ ಎಸ್‌ ನಾಯರ್‌ ನಿಗೂಢ ಸಾವು ಪ್ರಕರಣಕ್ಕೆ ಪ್ರೇಮ ವೈಫಲ್ಯ ಕಾರಣ ಎಂದು ತಿಳಿದು ಬಂದಿದೆ.

ಸುರೇಂದ್ರ ನಾಯರ್‌ ಹಾಗೂ ಸಿಂಧೂದೇವಿ ದಂಪತಿಯ ಪುತ್ರಿ ಆಕಾಂಕ್ಷಾ ಎಸ್‌ ನಾಯರ್‌ ದೆಹಲಿಯಲ್ಲಿ ಏರೋಸ್ಪೇಸ್‌ ಇಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದರು. ಜಪಾನ್‌ಗೆ ಉದ್ಯೋಗಕ್ಕೆಂದು ತೆರಳಲು ತಯಾರಿ ಮಾಡಿದ್ದ ಆಕಾಂಕ್ಷ ಸರ್ಟಿಫಿಕೇಟ್‌ ತರಲೆಂದು ಪಂಜಾಬ್‌ಗೆ ಹೋಗಿದ್ದಳು.

ಪೊಲೀಸರು ನೀಡಿರುವ ವರದಿಯ ಪ್ರಕಾರ, ಆಕಾಂಕ್ಷಾ ಪಗ್ವಾರದ ಲವ್ಲಿ ಪ್ರೊಫೆಷನಲ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಕೇರಳದ ಕೊಟ್ಟಾಯಂ ನಿವಾಸಿ ಬಿಜಿಲ್‌ ಮ್ಯಾಥ್ಯೂ ಎಂಬುವವರನ್ನು ಪ್ರೀತಿಸುತ್ತಿದ್ದು, ಇದಕ್ಕೆ ಮ್ಯಾಥ್ಯೂ ಒಪ್ಪಿರಲಿಲ್ಲ. ಅಲ್ಲದೆ ನನಗೆ ಎರಡು ಮಕ್ಕಳಿದ್ದಾರೆ. ನಾನು ಮದುವೆಯಾಗಲ್ಲ ಎಂದು ಹೇಳಿ ಮನೆಯಿಂದ ಹೊರಗೆ ಕಳುಹಿಸಿದ್ದರು.

ಕಾಲೇಜಿಗೆ ಬಂದ ಆಕಾಂಕ್ಷ ಮ್ಯಾಥ್ಯೂ ಅವರನ್ನು ಮದುವೆಯಾಗುವಂತೆ ಕೇಳಿಕೊಂಡಿದ್ದಾಳೆ. ಆದರೆ ಮ್ಯಾಥ್ಯೂ ಇದಕ್ಕೆ ಒಪ್ಪದಾಗ ಇಬ್ಬರ ನಡುವೆ ಜಗಳವಾಗಿದೆ. ನಂತರ ಕಟ್ಟಡದ ನಾಲ್ಕನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಾಧ್ಯಾಪಕ ಬಿಜಿಲ್‌ ಮ್ಯಾಥ್ಯೂ ವಿರುದ್ಧ ಪಂಜಾಬ್‌ನ ಜಲಂಧರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಕಾಂಕ್ಷ ಮೃತದೇಹ ಧರ್ಮಸ್ಥಳಕ್ಕೆ ತಲುಪಿದೆ. ಇಂದು ಸಂಜೆ ಬೊಳಿಯೂರು ಮನೆಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.