Home News ರಾಜ್ಯದಲ್ಲಿ ಮತ್ತೆ ಭುಗಿಲೇಳುತ್ತಾ ಧರ್ಮ ದಂಗಲ್ !!? | ಮುಸ್ಲಿಮರ ಬೃಹತ್ ಶಕ್ತಿ ಪ್ರದರ್ಶನಕ್ಕೆ ವೇದಿಕೆ...

ರಾಜ್ಯದಲ್ಲಿ ಮತ್ತೆ ಭುಗಿಲೇಳುತ್ತಾ ಧರ್ಮ ದಂಗಲ್ !!? | ಮುಸ್ಲಿಮರ ಬೃಹತ್ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜು

Hindu neighbor gifts plot of land

Hindu neighbour gifts land to Muslim journalist

ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಕೊಂಚ ತಣ್ಣಗಾಗಿದ್ದ ಧರ್ಮ ದಂಗಲ್ ಗೆ ಇದೀಗ ಶ್ರೀರಂಗಪಟ್ಟಣ ವೇದಿಕೆಯಾಗುತ್ತಾ ಎಂಬ ಪ್ರಶ್ನೆ ಇದೀಗ ಮೂಡಿದೆ. ಮುಸಲ್ಮಾನರ ಉರುಸ್ ಆಚರಣೆ ನೆಪದಲ್ಲಿ ಬೃಹತ್ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜಾಗಿದೆ ಎಂದು ಹೇಳಲಾಗುತ್ತಿದೆ.

ಜೂನ್ 27, 28, 29ರಂದು ಮೂರು ದಿನಗಳ ಕಾಲ ಶ್ರೀರಂಗಪಟ್ಟಣದ ಗಂಜಾಂನ ಗುಂಬಸ್ ನಲ್ಲಿ ಉರುಸ್ ಆಚರಣೆ ನಡೆಯಲಿದೆ. ಇದು 230ನೇ ಉರುಸ್ ಆಚರಣೆಯಾಗಿರಲಿದೆ. ಇದೀಗ ಈ ಉರುಸ್ ನೆಪದಲ್ಲಿಯೇ ಮುಸಲ್ಮಾನರು ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದ್ದು, ಜೂನ್ 28 ಅಂದರೆ ನಾಳೆ ಬೃಹತ್ ಜಾಥಾ ನಡೆಸಲು ಸಿದ್ದತೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.

ಜಾಥಾದಲ್ಲಿ ಸುಮಾರು 30-40 ಸಾವಿರ ಮಂದಿ ಭಾಗವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಶ್ರೀರಂಗಪಟ್ಟಣ ಮಸೀದಿಯಿಂದ ಗುಂಬಜ್ ವರೆಗೆ ಬೃಹತ್ ಜಾಥಾ ನಡೆಯಲಿದೆ. ಮಧ್ಯಾಹ್ನ 3ರಿಂದ ಸಂಜೆ 5 ಗಂಟೆವರೆಗೆ ಬೃಹತ್ ಜಾಥಾ ನಡೆಯಲಿದೆ. ಈ ಬೃಹತ್ ಜಾಥಾಗೆ ಅನುಮತಿ ಕೋರಿ ಮಂಡ್ಯ ಎಸ್ಪಿಗೆ ಪತ್ರ ಬರೆಯಲಾಗಿದೆ.

ಹಜರತ್ ಟಿಪ್ಪು ಸುಲ್ತಾನ್ ಶಹೀದ್ ವಕ್ಫ್ ಎಸ್ಟೇಟ್ ನಿಂದ ಬೃಹತ್ ಜಾಥಾಗೆ ಅನುಮತಿ ಕೋರಿ ಮಂಡ್ಯ ಎಸ್ಪಿಗೆ ಪತ್ರ ಬರೆಯಲಾಗಿದೆ. ಜಾಥಾ ಹಿನ್ನೆಲೆಯಲ್ಲಿ 3 ದಿನಗಳ ಬಿಗಿ ಪೊಲೀಸ್ ಬಂದೋ ಬಸ್ತ್ ನೀಡುವಂತೆ ಮನವಿ ಮಾಡಲಾಗಿದೆ. ಉರುಸ್ ಆಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ, ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಮನವಿ ಸಲ್ಲಿಸಲಾಗಿದೆ.