Home News ಎಕ್ಸ್‌ಪ್ರೆಸ್‌ವೇ, ರಾಷ್ಟ್ರೀಯ ಹೆದ್ದಾರಿ ಅಪಘಾತಕ್ಕೆ ಕಾರಣ ಢಾಬಾಗಳು!- ಅಚ್ಚರಿ ಸುದ್ದಿ ಕೊಟ್ಟ ಸುಪ್ರೀಂ

ಎಕ್ಸ್‌ಪ್ರೆಸ್‌ವೇ, ರಾಷ್ಟ್ರೀಯ ಹೆದ್ದಾರಿ ಅಪಘಾತಕ್ಕೆ ಕಾರಣ ಢಾಬಾಗಳು!- ಅಚ್ಚರಿ ಸುದ್ದಿ ಕೊಟ್ಟ ಸುಪ್ರೀಂ

Hindu neighbor gifts plot of land

Hindu neighbour gifts land to Muslim journalist

ಹೊಸದಿಲ್ಲಿ: ಎಕ್ಸ್‌ಪ್ರೆಸ್‌ವೇ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತಗಳನ್ನು ತಡೆಗಟ್ಟಲು ದೇಶದಾದ್ಯಂತ ಅನ್ವಯವಾಗುವ ಮಾರ್ಗಸೂಚಿಗಳನ್ನು ರೂಪಿಸುವ ಬಗ್ಗೆ ಸುಪ್ರೀಂ ಕೋರ್ಟ್ ಚಿಂತನೆ ನಡೆಸಿದೆ.

ರಾಜಸ್ಥಾನದ ಫಲೋದಿಯಲ್ಲಿ ನ.2ರಂದು ನಡೆದಿದ್ದ ಅಪಘಾತಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ ವೇಗಗಳ ಎರಡೂ ಬದಿಗಳಲ್ಲಿ ತಲೆಎತ್ತಿರುವ ಢಾಬಾಗಳು ಅಪಘಾತಗಳಿಗೆ ಕಾರಣ ಆಗಿರಲೂಬಹುದು ಎಂದು ಸೋಮವಾರ ಹೇಳಿ ಅಚ್ಚರಿ ಮೂಡಿಸಿದೆ.

ಇಂತಹ ಢಾಬಾಗಳ ವಿರುದ್ಧ ಕ್ರಮಕೈಗೊಳ್ಳಲು ಲಭ್ಯವಿರುವ ಶಾಸನಬದ್ಧ ನಿಯಮಗಳ ವಿವರ ಸಲ್ಲಿಸುವಂತೆ ಕೂಡಾ ಸುಪ್ರೀಂ ಪೀಠವು ಸೂಚಿಸಿದೆ. ಆದರೆ ಢಾಬಾಗಳು ಹೇಗೆ ಅಪಘಾತಕ್ಕೆ ಕಾರಣ ಆದೀತು ಅನ್ನೋದು ಸದ್ಯಕ್ಕೆ ಕುತೂಹಲಕ್ಕೆ ಕಾರಣವಾಗಿದೆ.