Home News Delhi Airport: ಭಾರೀ ಮಳೆ, ಬಿರುಗಾಳಿಗೆ ಟರ್ಮಿನಲ್‌ 1ರ ಶೇಡ್‌ ಕುಸಿತ, ವಿಮಾನ ಸಂಚಾರದಲ್ಲಿ ವ್ಯತ್ಯಯ

Delhi Airport: ಭಾರೀ ಮಳೆ, ಬಿರುಗಾಳಿಗೆ ಟರ್ಮಿನಲ್‌ 1ರ ಶೇಡ್‌ ಕುಸಿತ, ವಿಮಾನ ಸಂಚಾರದಲ್ಲಿ ವ್ಯತ್ಯಯ

Hindu neighbor gifts plot of land

Hindu neighbour gifts land to Muslim journalist

Delhi Airport: ಭಾರೀ ಮಳೆಯ ಜೊತೆಗೆ ಬಿರುಗಾಳಿಯಿಂದಾಗಿ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಐಜಿಐ) ಟರ್ಮಿನಲ್‌ 1 ರ ಆಗಮನ ವಿಭಾಗದ ಹೊರಭಾಗದ ಶೆಡ್‌ ಭಾನುವಾರ ಮುಂಜಾನೆ ಕುಸಿದು ಬಿದ್ದ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ವಿಮಾನ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿದ್ದು, 49 ವಿಮಾನಗಳನ್ನು ಬೇರೆ ಕಡೆಗೆ ತಿರುಗಿಸಲಾಗಿರುವ ಕುರಿತು ವರದಿಯಾಗಿದೆ.

ಶೇಡ್‌ ಕುಸಿತದಿಂದ ಹೊರ ಆವರಣದ ಒಂದು ಭಾಗವು ಪಾದಾಚಾರಿ ಮಾರ್ಗದ ಮೇಲೆ ಕುಸಿದಿದೆ. ನೀರು ತುಂಬಿ ಹರಿಯುತ್ತಿದೆ. ರಕ್ಷಣಾ ಕಾರ್ಯವನ್ನು ಕೂಡಲೇ ಕೈಗೊಳ್ಳಲಾಗಿದೆ.