Home News Booker Prize 2025: ಬೂಕರ್ ಪ್ರಶಸ್ತಿ ಸಿಕ್ಕಿರೋದು ದೀಪಾ ಬಸ್ತಿಯವರಿಗೆ – ಮೂಲ ಕೃತಿ ಬಾನು...

Booker Prize 2025: ಬೂಕರ್ ಪ್ರಶಸ್ತಿ ಸಿಕ್ಕಿರೋದು ದೀಪಾ ಬಸ್ತಿಯವರಿಗೆ – ಮೂಲ ಕೃತಿ ಬಾನು ಮುಷ್ತಾಕ್ ಬರೆದ ಕನ್ನಡದ ಕೃತಿಗಲ್ಲ – ಧರ್ಮೇಂದ್ರ ಕುಮಾರ್

Hindu neighbor gifts plot of land

Hindu neighbour gifts land to Muslim journalist

Booker Prize 2025: ಕನ್ನಡಿಗರನ್ನು ಎಡಚರರು ಹೇಗೆ ಮಂಗ ಮಾಡಿದರೆಂದರೆ ಬೂಕರ್ ಪ್ರಶಸ್ತಿ ಸಿಕ್ಕಿರೋದು ದೀಪಾ ಬಸ್ತಿಯವರು ಬರೆದ ಅನುವಾದಿತ ಇಂಗ್ಲಿಷ್ ಕೃತಿ “ಹಾರ್ಟ್ ಲ್ಯಾಂಪ್”ಗೇ ಹೊರತು, ಮೂಲ ಕೃತಿ ಬಾನು ಮುಷ್ತಾಕ್ ಬರೆದ ಕನ್ನಡದ ಕೃತಿಗಲ್ಲ ಅನ್ನುವ ಸತ್ಯವನ್ನು ಮರೆಮಾಚಿ ಬಾನು ಮುಷ್ತಾಕ್ ಅವರನ್ನೇ ಹೈಲೈಟ್ ಮಾಡಲಾಯಿತು ಎಂದು ಇತಿಹಾಸಕಾರ, ಸಂಶೋಧಕ, ಮತ್ತು ಲೇಖಕರಾಗಿ ಪ್ರಸಿದ್ಧರಾಗಿರುವ ಧರ್ಮೇಂದ್ರ ಕುಮಾರ್ ಅರೇನಹಳ್ಳಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅವರು ಸಿವಿಲ್ ಇಂಜಿನಿಯರ್ ಆಗಿದ್ದು, ‘ಸವಿನೆನಪೇ ಮನದಲ್ಲಿ ಆರಾಧನೆ’ ಮತ್ತು ‘ಮರೆತು ಹೋದ ಮೈಸೂರಿನ ಪುಟಗಳು’ ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ. ಮೈಸೂರಿನಲ್ಲಿ ಹುಟ್ಟಿ ಬೆಳೆದ ಇವರು, ಇಂಜಿನಿಯರಿಂಗ್ ಪದವಿ ಪಡೆದು ನಂತರ ಎರಡು ದಶಕಗಳ ಕಾಲ ಮಧ್ಯಪ್ರಾಚ್ಯದಲ್ಲಿ ಕೆಲಸ ಮಾಡಿದರು. ಇವರು ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿರುವ ಬೂಕರ್‌ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್, ಅವರಿಗೆ ನಿಜವಾಗಿ ಬೂಕರ್‌ ಪ್ರಶಸ್ತಿ ಅವರ ಮೂಲ ಕೃತಿಗೆ ಸಂದಿದ್ದು ಅಲ್ಲ ಎಂದು ಹೇಳಿದ್ದಾರೆ.

ಬಾನು ಮುಷ್ತಾಕ್ ಅವರಿಗೆ ಅಂತರಾಷ್ಟ್ರೀಯ ಬೂಕರ್‌ ಪ್ರಶಸ್ತಿ ಲಭಿಸಿದೆ ಎಂದು ಜನರೂ ತಲೆ ಮೇಲೆ ಹೊತ್ತು ಕೂರಿಸಿದರು. ಪ್ರಶಸ್ತಿ ಕೊಡುವಾಗ ಇಬ್ಬರಿಗೂ ಕೊಟ್ಟಿರಬಹುದು, ಆದರೆ ಪ್ರಶಸ್ತಿ ಆಯ್ಕೆಗೆ ಪರಿಗಣನೆ ಮಾಡೋದು ಅನುವಾದಿತರ ಕೃತಿಯನ್ನು ಮಾತ್ರ ಎಂದು ಹೇಳಿದ್ದಾರೆ.

ಬೂಕರ್ ಪ್ರಶಸ್ತಿ ಎಂಬುದು ಎರಡು ವಿಧಗಳಲ್ಲಿದ್ದು, ಒರಿಜಿನಲ್ ಬೂಕರ್ ಪ್ರಶಸ್ತಿಯನ್ನು ಆಂಗ್ಲ ಭಾಷೆಯ ಫಿಕ್ಷನ್ (ಕಾದಂಬರಿ)ಗಳಿಗೆ ನೀಡಲಾಗುತ್ತದೆ. ಅಂದರೆ ಮೂಲ ಪುಸ್ತಕವನ್ನು ಇಂಗ್ಲೀಷ್ ನಲ್ಲಿಯೇ ಬರೆದಿದ್ದರೆ ಅದಕ್ಕೆ ನೀಡುವ ಪ್ರಶಸ್ತಿಯೇ ಒರಿಜಿನಲ್ ಬೂಕರ್ ಪ್ರಶಸ್ತಿಯಾಗಿರುತ್ತದೆ. ಮತ್ತೊಂದು ‘ದಿ ಇಂಟರ್ ನ್ಯಾಷನಲ್ ಬೂಕರ್ ಪ್ರಶಸ್ತಿಯಾಗಿದ್ದು, ಇದನ್ನು ಅನುವಾದಕರ ಪರಿಣಾಮಕಾರಿ ಅನುವಾದವನ್ನು ಪುರಸ್ಕರಿಸುವ ಸಲುವಾಗಿ ನೀಡುವ ಪ್ರಶಸ್ತಿಯಾಗಿದೆ.

ಹಾಗಾಗಿ ಶ್ರೀಮತಿ ದೀಪಾ ಬಸ್ತಿಯವರ ಪರಿಣಾಮಕಾರಿ ಅನುವಾದದಿಂದ ಬೂಕರ್ ಪ್ರಶಸ್ತಿ ಲಭಿಸಿದೆಯೇ ವಿನಃ ಬಾನು ಮುಷ್ತಾಕ್ ನಿಂದ ಅಲ್ಲ. ಅದೇ ಬಾನು ಅವರ “ಹಸಿನಾ ಮತ್ತು ಇತರ ಕತೆಗಳು” ಕೃತಿಯನ್ನು ಬೇರೆ ಸಾಧಾರಣ ಪ್ರತಿಭೆಯವರು ಅನುವಾದಿಸಿದ್ದರೆ ಬೂಕರ್ ಬಿಡಿ ಜೋಕರ್ ಪ್ರಶಸ್ತಿಯೂ ಬರುತ್ತಿರಲಿಲ್ಲ. ಕನ್ನಡಕ್ಕೆ “ಬೂಕರ್ ಪ್ರಶಸ್ತಿ” ತಂದ ಶ್ರೀಮತಿ ದೀಪಾ ಬಸ್ತಿಯವರೇ ಈ ಬಾರಿಯ ಮೈಸೂರು ದಸರಾ ಉದ್ಘಾಟನೆಗೆ ಅರ್ಹ ವ್ಯಕ್ತಿ ಎಂದು ಅವರು ಪ್ರತಿಪಾದಿಸಿದ್ದಾರೆ.

Flood: ಜಮ್ಮು ಮತ್ತು ಕಾಶ್ಮೀರದಲ್ಲಿ ಮೇಘಸ್ಫೋಟ: ರಿಯಾಸಿ, ರಾಂಬನ್‌ನಲ್ಲಿ 11 ಮಂದಿ ಸಾವು – ಜನಜೀವನ ಅಸ್ತವ್ಯಸ್ತ

 

ಕರ್ನಾಟಕದ ನೂತನ ಪೊಲೀಸ್‌ ಮಹಾನಿರ್ದೇಶಕರಾಗಿ ಎಂ.ಎ ಸಲೀಂ ನೇಮಕ

 

Reliance Intelligence: ಹೊಸ AI ಘಟಕ ‘ರಿಲಯನ್ಸ್ ಇಂಟೆಲಿಜೆನ್ಸ್’ ಪ್ರಾರಂಭ – ಗೂಗಲ್ ಮತ್ತು ಮೆಟಾ ಜತೆ ಪಾಲುದಾರಿಕೆ – ಮುಖೇಶ್ ಅಂಬಾನಿ