Home News Death: ಸಾಮಾಜಿಕ ಧುರೀಣ ಸುರೇಶ್ ಕುಮಾರ್ ನಡ್ಕ ವಿಧಿವಶ

Death: ಸಾಮಾಜಿಕ ಧುರೀಣ ಸುರೇಶ್ ಕುಮಾರ್ ನಡ್ಕ ವಿಧಿವಶ

Hindu neighbor gifts plot of land

Hindu neighbour gifts land to Muslim journalist

Death: ಕ್ರಿಯಾಶೀಲ ಸಾಮಾಜಿಕ ಸಂಘಟಕ, ಸಂಘ ಸಂಸ್ಥೆಗಳ ಪ್ರೇರಣಾ ಶಕ್ತಿ, ಪಡ್ಡಿನಂಗಡಿ ಶಿವಗೌರಿ ಕಲ್ಯಾಣ ಮಂಟಪದ ಮಾಲಕ ಸುರೇಶ್ ಕುಮಾರ್ ನಡ್ಕ ಅಲ್ಪ ಕಾಲದ ಅಸೌಖ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ  ನಿಧನರಾದರು.

ಅವರಿಗೆ 60 ವರ್ಷ ವಯಸ್ಸಾಗಿತ್ತು.ಅನಾರೋಗ್ಯಕ್ಕೀಡಾದಾಗ ಅವರನ್ನು ಮತ್ತೆ ಬೆಂಗಳೂರಿಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ಜ.11ರ ಮಧ್ಯಾಹ್ನ ನಿಧನರಾದರು.

ಹಿರಿಯ ಜಾನಪದ ವಿದ್ವಾಂಸ ದಿ. ಡಿ. ಜಿ. ನಡ್ಕರವರ ಪುತ್ರರಾಗಿದ್ದ ಸುರೇಶ್ ಕುಮಾರ್ ನಡ್ಕರವರು ನಾಯಕತ್ವ ಗುಣದಿಂದ ಚಿರಪರಿಚಿತರಾಗಿದ್ದವರು. ಹಿರಿಯ ಜಾನಪದ ವಿದ್ವಾಂಸ ದಿ. ಡಿ. ಜಿ. ನಡ್ಕರವರ ಪುತ್ರರಾಗಿದ್ದ ಸುರೇಶ್ ಕುಮಾರ್ ನಡ್ಕರವರು ನಾಯಕತ್ವ ಗುಣದಿಂದ ಚಿರಪರಿಚಿತರಾಗಿದ್ದವರು.

ಕಲ್ಮಡ್ಕ ಗ್ರಾಮ ಪಂಚಾಯತ್‌ ಸದಸ್ಯರಾಗಿ, ಉಪಾಧ್ಯಕ್ಷರಾಗಿ, ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪಡ್ಡಿನಂಗಡಿಯ ಯುವಕ ಮಂಡಲ ಸಹಿತ ವಿವಿಧ ಸಂಘ ಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿ ಪ್ರೇರಣಾ ಶಕ್ತಿಯಾಗಿದ್ದರು.

ಆರಂಭದಿಂದಲೂ ಜೆಡಿಎಸ್‌ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ಅವರು ತಾಲೂಕು, ಜಿಲ್ಲಾ ಮಟ್ಟದಲ್ಲಿ ಪಕ್ಷ ಸಂಘಟನೆಗೆ ದುಡಿದಿದ್ದರು. ಪಡ್ಡಿನಂಗಡಿಯಲ್ಲಿ ಶಿವ ಗೌರಿ ಕಲ್ಯಾಣ ಮಂಟಪ ಸ್ಥಾಪಿಸಿ ಗ್ರಾಮೀಣ ಮಟ್ಟದಲ್ಲಿ ಸೇವೆ ಒದಗಿಸಿದ್ದರು.