Home News ಸಹಜ ಸಾವೆಂದು ಮುಚ್ಚಿಹೋಗಲಿದ್ದ ಕೊಲೆ ಪ್ರಕರಣವೊಂದಕ್ಕೆ ಸಾಕ್ಷಿ ನುಡಿದ 10ರ ಬಾಲಕ!! ತಂದೆಯ ಸಾವಿಗೆ ಕಾರಣಯಾರು-ತಿಥಿ...

ಸಹಜ ಸಾವೆಂದು ಮುಚ್ಚಿಹೋಗಲಿದ್ದ ಕೊಲೆ ಪ್ರಕರಣವೊಂದಕ್ಕೆ ಸಾಕ್ಷಿ ನುಡಿದ 10ರ ಬಾಲಕ!! ತಂದೆಯ ಸಾವಿಗೆ ಕಾರಣಯಾರು-ತಿಥಿ ಊಟದ ದಿನ ಬಾಲಕ ಹೇಳಿದ ಸತ್ಯದಿಂದ ಬಯಲಾಯಿತು ತಾಯಿಯ ಅಕ್ರಮ

Hindu neighbor gifts plot of land

Hindu neighbour gifts land to Muslim journalist

ತಂದೆ ಸಾವನ್ನಪ್ಪಿ ತಿಥಿಯ ದಿನ ಪುಟ್ಟ ಬಾಲಕನೋರ್ವ ತನ್ನ ತಾತನ ಬಳಿ ಹೇಳಿದ ಆ ಒಂದು ಸತ್ಯವು ಇಡೀ ಪ್ರಕರಣಕ್ಕೆ ತಿರುವು ಕೊಟ್ಟಿದ್ದು, ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದ್ದ ಸಾವು ಕೊಲೆಯೆಂದು ಬಹಿರಂಗವಾಗಿ, ತಾಯಿಯ ಅಕ್ರಮಗಳು ಒಂದೊಂದಾಗಿ ಹೊರಬಿದ್ದಿದೆ.

ಇಂತಹದೊಂದು ಘಟನೆ ನಡೆದಿದ್ದು ಬೆಂಗಳೂರಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ.ಮೃತಪಟ್ಟ ವ್ಯಕ್ತಿಯನ್ನು ರಾಘವೇಂದ್ರ ಎಂದು ಗುರುತಿಸಲಾಗಿದ್ದು, ಪ್ರಕರಣದಲ್ಲಿ ಶಾಮೀಲಾದ ಮೂವರನ್ನು ಬಂಧಿಸಲಾಗಿದೆ.

ಘಟನೆ ವಿವರ: ಪಿಟ್ಸ್ ಹಿಡಿದು ತನ್ನ ಗಂಡ ಸಾವನ್ನಪ್ಪಿದ್ದಾರೆ ಎಂದು ಪತ್ನಿ ಶೈಲಜಾ ಕುಟುಂಬಸ್ಥರಿಗೆ ತಿಳಿಸಿದ್ದು ಅಂತೆಯೇ ಆತನ ಅಂತ್ಯಕ್ರಿಯೆಯೂ ನಡೆದಿತ್ತು.ಇದಾದ ಬಳಿಕ ಆತನ ತಿಥಿಯ ದಿನ,ಮೃತ ರಾಘವೇಂದ್ರನ ಮಗ 10 ವರ್ಷದ ಬಾಲಕ ತಂದೆಯ ಸಾವಿನ ಹಿಂದಿನ ದಿನ ನಡೆದ ಘಟನೆಯನ್ನು ತನ್ನ ತಾತನಿಗೆ ಎಳೆಎಳೆಯಾಗಿ ವಿವರಿಸಿದ್ದಾನೆ.

ಅಪ್ಪನನ್ನು ಅಮ್ಮ,ಅಜ್ಜಿ ಹಾಗೂ ಮತ್ತೊರ್ವ ವ್ಯಕ್ತಿ ರಾತ್ರಿ ಹೊಡೆದು ಕೊಂದಿದ್ದಾರೆ, ಯಾಕೆ ಹೊಡೆಯುತ್ತಿದ್ದೀರಿ ಎಂದು ಕೇಳಿದಾಗ ನನ್ನ ಗದರಿಸಿದ್ದರು. ಇದರಿಂದ ಭಯಗೊಂಡ ನಾನು ರೂಮಿನಲ್ಲಿ ಹೋಗಿ ಮಲಗಿದ್ದೆ, ಬೆಳಿಗ್ಗೆ ಇದ್ದಾಗ ಅಪ್ಪನ ಸಾವಿನ ಸುದ್ದಿ ಕೇಳಿದೆ ಎಂದು ಹೇಳಿದ್ದಾನೆ.

ಈ ವಿಷಯ ಮೃತ ವ್ಯಕ್ತಿಯ ತಮ್ಮನಿಗೆ ತಿಳಿಸಿದ್ದು ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗುತ್ತದೆ. ಪೊಲೀಸರು ಶೈಲಜಾ ಹಾಗೂ ಆಕೆಯ ತಾಯಿಯನ್ನು ವಿಚಾರಣೆಗೊಳಪಡಿಸಿದಾಗ ಕೊಲೆಯ ಹಿಂದಿನ ಸತ್ಯ ಬಯಲಾಗಿದೆ.

ಆರೋಪಿ ಶೈಲಜಾಳಿಗೂ ಇನ್ನೊರ್ವ ವ್ಯಕ್ತಿಗೂ ಅನೈತಿಕ ಸಂಬಂಧವಿದ್ದು, ಆ ಸಂಬಂಧಕ್ಕೆ ಆಕೆಯ ಪತಿ ಮೃತ ರಾಘವೇಂದ್ರ ಆಕ್ಷೇಪ ವ್ಯಕ್ತಪಡಿಸಿದ್ದ. ಇದರಿಂದ ಕೋಪಗೊಂಡ ಆಕೆ ತನ್ನ ಪ್ರಿಯಕರನೊಂದಿಗೆ ಸೇರಿ, ತಾಯಿಯ ಸಹಾಯದೊಂದಿಗೆ ಗಂಡನ ಕೊಲೆ ನಡೆಸಿದ್ದಾಗಿ ಒಪ್ಪಿಕೊಂಡಿದ್ದು ಈ ಸಂಬಂಧ ಶೈಲಜಾ, ಆಕೆಯ ಪ್ರಿಯಕರ ಹನುಮಂತು ಹಾಗೂ ಆಕೆಯ ತಾಯಿ ಲಕ್ಷ್ಮಿ ದೇವಮ್ಮನನ್ನು ಪೊಲೀಸರು ಬಂಧಿಸಿದ್ದಾರೆ.