Home News DB Inamdar: ಬೆಳಗಾವಿಯ ಹಿರಿಯ ಕಾಂಗ್ರೆಸ್‌ ನಾಯಕ ಡಿಬಿ ಇನಾಮದಾರ್ ಅನಾರೋಗ್ಯದಿಂದ ನಿಧನ!!

DB Inamdar: ಬೆಳಗಾವಿಯ ಹಿರಿಯ ಕಾಂಗ್ರೆಸ್‌ ನಾಯಕ ಡಿಬಿ ಇನಾಮದಾರ್ ಅನಾರೋಗ್ಯದಿಂದ ನಿಧನ!!

DB Inamdar
Image source: Kannada Prabha Online

Hindu neighbor gifts plot of land

Hindu neighbour gifts land to Muslim journalist

DB Inamdar: ಬೆಳಗಾವಿ: ಹಿರಿಯ ಕಾಂಗ್ರೆಸ್‌ ನಾಯಕ ಡಿಬಿ ಇನಾಮದಾರ್(DB Inamdar) ಅವರು ಇಂದು ನಿಧನರಾಗಿದ್ದಾರೆ. ಕಳೆದ ಒಂದು ತಿಂಗಳಿಂದ ಅವರು ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆ ‌ಹೊತ್ತಲ್ಲೇ ಇನಾಮದಾರ್ ನಿಧನದಿಂದ ಬೆಳಗಾವಿ ‌ಕಾಂಗ್ರೆಸ್‌ಗೆ ಆಘಾತ ಉಂಟು ಮಾಡಿದೆ.

1983ರಲ್ಲಿ ಡಿ.ಬಿ.ಇನಾಮದಾರ್ ಅವರು ಜನತಾ ಪಕ್ಷದಿಂದ‌(Congress candidate) ಕಿತ್ತೂರು ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಈ ಮೂಲಕ ಅವರು ಮೊದಲ ಬಾರಿಗೆ ವಿಧಾನಸಭೆಗೆ ಪ್ರವೇಶಿಸಿದ್ದರು.ಒಟ್ಟು 9 ಚುನಾವಣೆಗಳನ್ನ ಎದುರಿಸಿ ಐದು ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದರು. ದೇವರಾಜ ಅರಸ, ಎಸ್.ಎಂ ಕೃಷ್ಣಾ, ಎಸ್. ಬಂಗಾರಪ್ಪ ಸರ್ಕಾರದಲ್ಲೂ ಸಚಿವರಾಗಿದ್ದರು. 1983, 1985 ರಲ್ಲಿ ಜನತಾ ಪಕ್ಷದಿಂದ, 1994, 1999, 2013ರ ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿದ್ದರು. 1989, 2004, 2008 ಹಾಗೂ 2018 ರಲ್ಲಿ ಸೋಲು ಕಂಡಿದ್ದರು.

ಆದರೆ ಈ ಬಾರಿ ವಿಧಾನಸಭೆ ಚುನಾವಣೆಯಲ್ಲೂ ಸಹ ಕಿತ್ತೂರು ಕಾಂಗ್ರೆಸ್ ‌ಟಿಕೆಟ್ ಆಕಾಂಕ್ಷಿ ಆಗಿದ್ದರು. ಆದರೆ ಆರೋಗ್ಯ ಸರಿಯಿಲ್ಲದ ಕಾರಣಕ್ಕಾಗಿ ಡಿ.ಬಿ ಇನಾಮದಾರ್ ಸೊಸೆ ಲಕ್ಷ್ಮೀ ಇನಾಮದಾರ್‌ಗೆ ಟಿಕೆಟ್ ನೀಡಬೇಕೆಂಬ ಒತ್ತಾಯ ಕೇಳಿಬಂದಿತ್ತು. ಕೊನೆಗೆ ಕಾಂಗ್ರೆಸ್​ ಹೈಕಮಾಂಡ್ ಬಾಬಾಸಾಹೇಬ್ ‌ಪಾಟೀಲ್‌ಗೆ ಟಿಕೆಟ್ ನೀಡಿದೆ. ಒಟ್ಟಾರೆಯಾಗಿ ಚುನಾವಣೆ ದಿನಾಂಕ ಹತ್ರ ಬರುತ್ತಿದ್ದಂತೆ ಇನಾಮದಾರ್ ನಿಧನದಿಂದ ಕಾಂಗ್ರೆಸ್‌ ಗೆ ಬಿಗ್‌ ಶಾಕ್‌ ಆಗಿದೆ.

 

ಇದನ್ನು ಓದಿ: Shani yoga: ಈ 5 ರಾಶಿಯವರಿಗೆ ಕಾದಿದೆ ಶನಿಯೋಗ, ಇದರಿಂದ ನೀವು ಶ್ರೀಮಂತರಾಗ್ತೀರ!