Home News Devil Cinema: ʼಡೆವಿಲ್‌ʼ ಚಿತ್ರೀಕರಣಕ್ಕೂ ಮೊದಲು ಚಾಮುಂಡೇಶ್ವರಿ ದರ್ಶನ ಪಡೆದ ದರ್ಶನ್!

Devil Cinema: ʼಡೆವಿಲ್‌ʼ ಚಿತ್ರೀಕರಣಕ್ಕೂ ಮೊದಲು ಚಾಮುಂಡೇಶ್ವರಿ ದರ್ಶನ ಪಡೆದ ದರ್ಶನ್!

Hindu neighbor gifts plot of land

Hindu neighbour gifts land to Muslim journalist

Devil Cinema: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹೊರ ಬಂದ ನಂತರ ನಟ ದರ್ಶನ್‌ ಎಂಟು ತಿಂಗಳ ನಂತರ ಮತ್ತೆ ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದ್ದಾರೆ. ಕೊಲೆ ಪ್ರಕರಣದಲ್ಲಿ ದರ್ಶನ್‌ ಜೈಲು ಸೇರಿದ್ದ ನಂತರ ನಿಂತು ಹೋಗಿದ್ದ ʼಡೆವಿಲ್‌ʼ ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ಇಂದಿನಿಂದ ಶುರುವಾಗಿದೆ. ಚಿತ್ರೀಕರಣ ಆರಂಭಕ್ಕೂ ಮುನ್ನ ದರ್ಶನ್‌ ದೇವರ ಮೊರೆ ಹೋಗಿದ್ದಾರೆ.

ಶೂಟಿಂಗ್‌ಗೆ ಮಾರ್ಚ್ 12ರಿಂದ 15ರವರೆಗೆ ಅನುಮತಿ ದೊರಕಿದೆ. ಇಂದಿನಿಂದ ಮಾ.14ರ ವರೆಗೆ ಸರ್ಕಾರಿ ಅತಿಥಿ ಗೃಹದಲ್ಲಿ ‘ಡೆವಿಲ್’ ಶೂಟಿಂಗ್ ನಡೆಯಲಿದ್ದು, ಮಾ.15ರಂದು ಲಲಿತಮಹಲ್ ಪ್ಯಾಲೇಸ್‌ನಲ್ಲಿ ಶೂಟಿಂಗ್ ನಡೆಯಲಿದೆ. ಖಾಸಗಿ ಭದ್ರತಾ ಪಡೆ ಹಾಗೂ ಪೊಲೀಸ್ ಪಡೆ ಎರಡನ್ನೂ ಭದ್ರತೆಗೆ ನಿಯೋಜನೆ ಮಾಡಲಾಗಿದೆ.