Home News ರೇಣುಕಾಸ್ವಾಮಿ ಕೊಲೆ ಕೇಸ್‌ ವಿಚಾರಣೆ ಮುಗಿಸಿ ಕೈ ಹಿಡಿದುಕೊಂಡು ಹೊರಬಂದ ದರ್ಶನ್, ಪವಿತ್ರಾ! ದರ್ಶನ್‌ ನಂಬರ್‌...

ರೇಣುಕಾಸ್ವಾಮಿ ಕೊಲೆ ಕೇಸ್‌ ವಿಚಾರಣೆ ಮುಗಿಸಿ ಕೈ ಹಿಡಿದುಕೊಂಡು ಹೊರಬಂದ ದರ್ಶನ್, ಪವಿತ್ರಾ! ದರ್ಶನ್‌ ನಂಬರ್‌ ಪಡೆದ ಪವಿತ್ರಾ!

Hindu neighbor gifts plot of land

Hindu neighbour gifts land to Muslim journalist

Darshan-Pavitra: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ನಟ ದರ್ಶನ್, ಪವಿತ್ರಾ ಗೌಡ (Darshan-Pavitra) ಸೇರಿದಂತೆ ಇತರ ಆರೋಪಿಗಳು ವಿಚಾರಣೆಗಾಗಿ 57ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ವಿಚಾರಣೆ ಮುಗಿಸಿ ವಾಪಸಾಗುವಾಗ ಪವಿತ್ರಾ ಗೌಡ ನಟ ದರ್ಶನ್ ಅವರ ಕೈ ಹಿಡಿದು ಹೊರಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ಪವಿತ್ರಾ ಹಠ ಮಾಡಿದ್ದಕ್ಕೆ ದರ್ಶನ್‌ ತಮ್ಮ ಮೊಬೈಲ್‌ ಸಂಖ್ಯೆಯನ್ನೂ ನೀಡಿದ್ದಾರೆ ಎನ್ನಲಾಗಿದೆ.

ನ್ಯಾಯಾಲಯಕ್ಕೆ ನಟ ದರ್ಶನ್ ತಮ್ಮ ಸ್ನೇಹಿತ ಧನ್ವಿ‌ರ್ ಜೊತೆ ಆಗಮಿಸಿದ್ದರು. ವಿಚಾರಣೆ ಆರಂಭವಾದಾಗ ದರ್ಶನ್ ದೂರದಲ್ಲಿ ನಿಂತಿದ್ದರು. ಈ ವೇಳೆ ಜಡ್ಜ್ ಆರೋಪಿಗಳ ಸಂಖ್ಯೆಗೆ ಅನುಗುಣವಾಗಿ ನಿಲ್ಲುವಂತೆ ಸೂಚಿಸಿದ್ದಾರೆ. ಆಗ ಎ2 ಆರೋಪಿ ಆಗಿರುವ ದರ್ಶನ್ ಎ1 ಆರೋಪಿ ಪವಿತ್ರಾ ಪಕ್ಕ ಬಂದು ನಿಂತಿದ್ದಾರೆ.ಇಂದಿನ ವಿಚಾರಣೆಗೆ ಎ3 ಪವನ್ ಗೈರಾಗಿದ್ದು, ಎ11 ನಾಗರಾಜು ಕೇಸ್‌ ಮೇಲೆ ಹೊಸಪೇಟೆಗೆ ತೆರಳಲು ಅನುಮತಿ ನೀಡಿದೆ. ಕಳೆದ ಬಾರಿ ಅನಾರೋಗ್ಯದ ಕಾರಣ ಹೇಳಿ ದರ್ಶನ್ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಇದಕ್ಕೆ ಕೋರ್ಟ್ ದರ್ಶನ್ ಅವರನ್ನು ತರಾಟೆಗೆ ತೆಗೆದುಕೊಂಡಿದೆ.

ಆರೋಪಿಗಳ ವಿಚಾರಣೆಗೆ ಹಾಜರಾಗಲು ಹೆಚ್ಚಿನ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆಯನ್ನು ಜುಲೈ 10 ಕ್ಕೆ ಮುಂದೂಡಿಕೆ ಮಾಡಲಾಗಿದೆ. ಪವಿತ್ರಾ ಗೌಡ ಅವರಿಗೆ 15 ದಿನ ಹೊರರಾಜ್ಯಕ್ಕೆ ತೆರಳಲು ಅವಕಾಶ ನೀಡಿದೆ.