Home News Dinesh Gundurao: ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸ್ಥಾನ ತ್ಯಾಗಕ್ಕೆ ಮುಂದಾದ ಸಚಿವ ದಿನೇಶ್ ಗುಂಡೂರಾವ್!?

Dinesh Gundurao: ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸ್ಥಾನ ತ್ಯಾಗಕ್ಕೆ ಮುಂದಾದ ಸಚಿವ ದಿನೇಶ್ ಗುಂಡೂರಾವ್!?

Hindu neighbor gifts plot of land

Hindu neighbour gifts land to Muslim journalist

Dinesh Gundurao: ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಸರಣಿ ಕೊಲೆ ಹಾಗು ಕೋಮು ಹಿಂಸಾಚಾರದ ವಿಚಾರವಾಗಿ ಸಚಿವ ದಿನೇಶ್ ಗುಂಡೂರಾವ್ ರೋಸಿ ಹೋಗಿದ್ದಾರೆ ಎನ್ನಲಾಗಿದೆ. ಅವರಿಗೆ ಮಂಗಳೂರಿನ ಈ ಕೋಮು ಸಂತ್ರಸ್ತ ಊರಿನ ಘಟನೆಗಳನ್ನು ನಿಯಂತ್ರಣ ಮಾಡುವುದು.ಕಷ್ಟ ಆಗುತ್ತಿದೆ. ಈ ಊರಿನ ಸಾವಾಸವೇ ಬೇಡ ಎಂದು ಅವರು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸ್ಥಾನ ತ್ಯಾಗಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ಕರಾವಳಿಯಲ್ಲಿ ಬೇರೆ ಪ್ರದೇಶಗಳಲ್ಲಿ ಮಾಡುವ.ಕಾರ್ಯತಂತ್ರ ಸಾಕಾಗೋದಿಲ್ಲ. ಕೈಯಲ್ಲಿ ಸುಭದ್ರ ಅಧಿಕಾರ ಇದ್ದರೂ ನಿಭಾಯಿಸುವುದು ಇಲ್ಲಿ ಕಷ್ಟ. ಹಾಗಾಗಿ ಜಿಲ್ಲಾ ಉಸ್ತುವಾರಿ ಸ್ಥಾನವನ್ನು ತೆರವು ಮಾಡೋದು ಸೂಕ್ತ ಎನ್ನುವ ನಿರ್ಧಾರಕ್ಕೆ ಸಚಿವ ಗುಂಡೂರಾವ್ ಬಂದಿದ್ದಾರೆ. ಹಾಗಾಗಿ ಅವರು ಸಿಎಂ ನಿವಾಸ ಕಾವೇರಿಗೆ ತೆರಳಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ತಮ್ಮನ್ನು ತೆರವು ಮಾಡುವಂತೆ ಮನವಿ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಕಳೆದ ಕೆಲ ತಿಂಗಳಿನಿಂದ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ನಡೆಯುತ್ತಿರುವ ಕೋಮು ಗಲಭೆಗೆ ಪ್ರಚೋದನಾತ್ಮಕ ವಾತಾವರಣದ ಬಗ್ಗೆ ಸಿಎಂ ನಿವಾಸದಲ್ಲಿ ಗೃಹ ಸಚಿವ ಪರಮೇಶ್ವರ್ ಜತೆಗೆ ರಾಜ್ಯದ ಡಿಜಿ, ಐಜಿಪಿ ಡಾ.ಎಂ.ಎ.ಸಲೀಂ ಉಪಸ್ಥಿತಿಯಲ್ಲಿ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ. ಮುಂದೆ ಮಾಡಬಹುದಾದ ಕಾರ್ಯತಂತ್ರ.ಮತ್ತು ತಂದಾಗ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ತಮ್ಮನ್ನು. ಜಿಲ್ಲಾ ಉಸ್ತುವಾರಿ ಇಂದ ವಿನಂತಿ ಗೊಳಿಸಲು ಸಚಿವ ಗುಂಡೂರಾವ್ ಕೇಳಿಕೊಂಡಿದ್ದಾರೆ. ಆದರೆ ಈಗ ತಕ್ಷಣಕ್ಕೆ ಬದಲಿಸಲು ಸಿಎಂ ಸಿದ್ದರಾಮಯ್ಯ ನೀರಸ ಉತ್ಸಾಹ ತೋರಿದ್ದಾರೆ ಎನ್ನಲಾಗಿದೆ.