Home News Cyclone Alert: ಬಿಪರ್ ಜಾಯ್ ಚಂಡಮಾರುತ ಆಕ್ಟೀವ್ – ಮೀನುಗಾರರಿಗೆ ಸಂಕಷ್ಟ, ಗುಡುಗು ಸಹಿತ ಬಿರುಗಾಳಿ...

Cyclone Alert: ಬಿಪರ್ ಜಾಯ್ ಚಂಡಮಾರುತ ಆಕ್ಟೀವ್ – ಮೀನುಗಾರರಿಗೆ ಸಂಕಷ್ಟ, ಗುಡುಗು ಸಹಿತ ಬಿರುಗಾಳಿ ಮಳೆ ಶೀಘ್ರ !

Cyclone Alert
Image source :Ndtv

Hindu neighbor gifts plot of land

Hindu neighbour gifts land to Muslim journalist

Cyclone Alert: ಅರಬ್ಬಿ ಸಮುದ್ರದಲ್ಲಿ ದೊಡ್ಡ ಪ್ರಮಾಣದ ಚಂಡಮಾರುತ ಎದ್ದಿದೆ ಎನ್ನುವುದನ್ನು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈ ಚಂಡಮಾರುತಕ್ಕೆ (Cyclone Alert)’ಬಿಪರ್​ಜಾಯ್’ ಎನ್ನುವ ಹೆಸರನ್ನು ಬಾಂಗ್ಲಾದೇಶ ಇಟ್ಟಿದೆ. ಇದರ ಅರ್ಥ ‘ವಿಪತ್ತು’ ಎಂಬುದಾಗಿದೆ.

 

ಸದ್ಯ ಬಿಪರ್​ಜಾಯ್ ಚಂಡಮಾರುತವು ಅರಬ್ಬಿ ಸಮುದ್ರದಲ್ಲಿ ತೀವ್ರ ಸ್ವರೂಪ ಪಡೆದಿದ್ದು, ಮುಂದಿನ ಕೆಲವು ಗಂಟೆಗಳಲ್ಲಿ ದ.ಕ. ಉಡುಪಿ, ಉತ್ತರ ಕನ್ನಡ ಸಹಿತ ಹಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

 

ಅಲ್ಲದೆ ಬಿಪರ್​ಜಾಯ್ ಚಂಡಮಾರುತ ಈ ಮೊದಲು ಊಹಿಸಿದಕ್ಕಿಂತ ತೀವ್ರವಾಗಿದ್ದು, ಉತ್ತರದತ್ತ ಸಂಚರಿಸುತ್ತಿದ್ದು ಮತ್ತಷ್ಟು ಪ್ರಬಲವಾಗಿದೆ. ಗೋವಾ , ಗುಜರಾತ್ ನಲ್ಲಿ ಹೆಚ್ಚಿನ ಪ್ರಭಾವ ಬೀರಲಿದೆ.

 

ಬರುವ ಮುಂದಿನ 3-4 ದಿನಗಳಲ್ಲಿ ಚಂಡ ಮಾರುತದ ಪರಿಣಾಮ ಕೆಲವು ರಾಜ್ಯಗಳಲ್ಲಿ ಭಾರಿ ಮಳೆ ಸುರಿಯುವ ಮುನ್ಸೂಚನೆಯನ್ನು (Cyclone Alert) ಹವಾಮಾನ ಇಲಾಖೆ ನೀಡಿದೆ. ಮುಖ್ಯವಾಗಿ ಚಂಡ ಮಾರುತದ ಹಿನ್ನೆಲೆಯಲ್ಲಿ ಜೂ.9 ರಿಂದ ಜೂ 12ರವರೆಗೆ ಮುಂದಿನ ನಾಲ್ಕು ದಿನಗಳು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ತುಮಕೂರಿನಲ್ಲಿ ಭಾರಿ ಮಳೆಯಾಗಲಿದೆ, ಜೊತೆಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

 

ಇನ್ನು ಕರ್ನಾಟಕ ಕರಾವಳಿಯ ಮಂಗಳೂರಿನಿಂದ ಕಾರವಾರದವರೆಗೆ 2.5 – 3.3 ಮೀಟರ್ ವ್ಯಾಪ್ತಿಯಲ್ಲಿ ಎತ್ತರದ ಅಲೆಗಳನ್ನು ಮುನ್ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಮುದ್ರಕ್ಕೆ ಇಳಿದ ಮೀನುಗಾರರು ಮರಳುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ :ʻವಾಟ್ಸಾಪ್ ಚಾನೆಲ್ ʼ ಎಂಬ ಹೊಸ ವೈಶಿಷ್ಟ್ಯ ಪ್ರಾರಂಭ.!