Home News Crop compensation : ರೈತರ ಖಾತೆಗೆ ಬೆಳೆ ಪರಿಹಾರ ಹಣ ಜಮಾ !!

Crop compensation : ರೈತರ ಖಾತೆಗೆ ಬೆಳೆ ಪರಿಹಾರ ಹಣ ಜಮಾ !!

Crop Consumption

Hindu neighbor gifts plot of land

Hindu neighbour gifts land to Muslim journalist

Crop compensation: ರಾಜ್ಯದ ರೈತರು ಇದುವರೆಗೂ ಕಾದಿದ್ದಂತಹ ಬೆಳೆ ಪರಿಹಾರ(Crop compensation) ಹಣ ಕೊನೆಗೂ ರೈತರ ಖಾತೆಗೆ ಜಮಾ ಆಗಿದೆ. ಕರ್ನಾಟಕದ ರೈತರಿಗೆ ಬೆಳೆ ಹಾನಿ ಪರಿಹಾರ ಹಣ ಜಮೆಗೆ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದ್ದು, ಇನ್ನು ಬಾಕಿ ಉಳಿದ ರೈತರಿಗೆ ಶೀಘ್ರದಲ್ಲಿಯೇ ಹಣ ಜಮೆಯಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ(Krishna Bhyregouda) ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Home Tips: ಇದೇ ಕಾರಣಕ್ಕೆ ಮನೆಯೊಳಗೆ ಹಾವುಗಳು ಬರೋದು! ಹುಷಾರಾಗಿರಿ

ಹೌದು, NDRF ಹಣ ಬಿಡುಗಡೆ ಆದ ಕೂಡಲೇ ರೈತರಿಗೆ ಅರ್ಹತೆ ಪ್ರಕಾರ ಪರಿಹಾರ ಪಾವತಿಸಲಾಗಿದೆ. ಇದವರೆಗೂ ರಾಜ್ಯದಲ್ಲಿ 31,82,602 ರೈತರಿಗೆ ಸಂಪೂರ್ಣ ಬೆಳೆ ಹಾನಿ ಪರಿಹಾರ ಪಾವತಿಸಲಾಗಿದ್ದು, ಇನ್ನುಳಿದ ಸುಮಾರು 2 ಲಕ್ಷ ರೈತರಿಗೆ ಮುಂದಿನ 2-3 ದಿನಗಳಲ್ಲಿ ಪಾವತಿಯಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಇದನ್ನೂ ಓದಿ: Apple Eating: ಒಳ್ಳೆದು ಅಂತ ಸೇಬು ಹಣ್ಣು ಇಷ್ಟ ಬಂದ ಟೈಮ್ ನಲ್ಲಿ ತಿನ್ನುವ ಹಾಗಿಲ್ಲ, ಅದಕ್ಕೂ ಹೊತ್ತು ಗೊತ್ತು ಇದೆ!

ಮಾಧ್ಯಮ ಪ್ರಕಟಣೆಯಲ್ಲಿ ಬೆಳೆ ಪರಿಹಾರದ ಕುರಿತು ಮಾಹಿತಿ ನೀಡಿದ ಅವರು ‘ಸುಮಾರು ತಾಲೂಕುಗಳಲ್ಲಿ ಬರ ಪರಿಹಾರ ಪಟ್ಟಿಯಲ್ಲಿ ಸೇರದೆ ಇದ್ದ ಮಳೆ ಆಧಾರಿತ ಬೆಳೆಗಳಿಗೂ ಪರಿಹಾರ ಧನ ವಿತರಿಸಲು ಮತ್ತು 2 ಲಕ್ಷ ಹೆಕ್ಟೇರ್‌ ನೀರಾವರಿ ಪ್ರದೇಶವನ್ನು ಒಳಗೊಳ್ಳುವ ಸುಮಾರು 1.63 ಲಕ್ಷ ಅರ್ಹ ರೈತರಿಗೂ ಪರಿಹಾರ ವಿತರಿಸಲು ತೀರ್ಮಾನಿಸಲಾಗಿದೆ. ಇದಲ್ಲದೆ, ಸಣ್ಣ ಮತ್ತು ಅತಿಸಣ್ಣ ಒಣ ಬೇಸಾಯ ಮಾಡುವ ಸುಮಾರು 16 ಲಕ್ಷ ಕುಟುಂಬಗಳಿಗೆ ಬರಗಾಲದಿಂದ ಆಗಿರುವ ಜೀವನೋಪಾಯದ ನಷ್ಟಕ್ಕೆ ಪರಿಹಾರವಾಗಿ ತಲಾ 3000 ರೂ. ಪರಿಹಾರ ನೀಡಲೂ ಸಹ ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.

ಜೊತೆಗೆ ಕೇಂದ್ರದಿಂದ ಅನುದಾನ ನಿರೀಕ್ಷಿಸಿ ಮೊದಲ ಹಂತದ ಪರಿಹಾರವಾಗಿ 33,58,999 ರೈತರಿಗೆ 636.45 ಕೋಟಿ ರೂ.ಗಳನ್ನು ಕಳೆದ ಫೆ198ಬ್ರವರಿ ಹಾಗೂ ಮಾರ್ಚ್‌ ಪಾವತಿಸಲಾಗಿದೆ. ಈ ಪೈಕಿ ಅತಿ ಕಡಿಮೆ ಜಮೀನು ಇರುವ 4,43,691 ರೈತರಿಗೆ ಮಾರ್ಗಸೂಚಿಯಂತೆ ಸಂಪೂರ್ಣ ಪರಿಹಾರ ಪಾವತಿಸಲಾಗಿದೆ. ಉಳಿದ ರೈತರಿಗೆ ಬಾಕಿ ಮೊತ್ತವನ್ನು ಪಾವತಿ ಮಾಡಲಾಗುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.