Home News High Court: ಮಹಿಳೆಯರ ಈ ಸ್ವಭಾವಗಳು ಅಶ್ಲೀಲವಲ್ಲ- ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ ಹೈಕೋರ್ಟ್

High Court: ಮಹಿಳೆಯರ ಈ ಸ್ವಭಾವಗಳು ಅಶ್ಲೀಲವಲ್ಲ- ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ ಹೈಕೋರ್ಟ್

High Court

Hindu neighbor gifts plot of land

Hindu neighbour gifts land to Muslim journalist

High Court: ಮೇ ತಿಂಗಳಲ್ಲಿ ವತಾರ್ ಪಾರ್ಕ್ನ ಬ್ಯಾಂಕ್ವೆಟ್ ಹಾಲ್ ಒಂದರಲ್ಲಿ ಅಶ್ಲೀಲ ನೃತ್ಯ ಮಾಡಿದ ಆರೋಪದ ಮೇರೆಗೆ ತಿರ್ಖುರಾದ ಟೈಗರ್ ಪ್ಯಾರಡೈಸ್ ಎಂಬ ರೆಸಾರ್ಟ್ ವಿರುದ್ಧ ಪೊಲೀಸರು (Police)ಪ್ರಕರಣ ದಾಖಲಿಸಿಕೊಂಡಿದ್ದರು.ಆದರೆ, ಈ ಪ್ರಕರಣವನ್ನು ಹೈಕೋರ್ಟ್ (High Court)ವಜಾಗೊಳಿಸಿದೆ.

ಆರು ಮಹಿಳೆಯರು ಪ್ರೇಕ್ಷಕರಿಗಾಗಿ ನೃತ್ಯ ಮಾಡುತ್ತಿದ್ದ ಸಂದರ್ಭ ಬ್ಯಾಂಕ್ವೆಟ್ ಹಾಲ್ ಪ್ರವೇಶಿಸಿದ ಪೊಲೀಸರು ದಾಳಿ ನಡೆಸಿ ಅಸಭ್ಯವಾಗಿ ನೃತ್ಯ ಮಾಡಿದ ಆರೋಪದ ಮೇಲೆ ಮಹಿಳೆಯರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಇದರ ಜೊತೆಗೆ ಕೆಲವರು ಪ್ರೇಕ್ಷಕರು ಮಹಿಳೆಯರ ಮೇಲೆ 10 ರೂ.ಗಳ ನೋಟುಗಳನ್ನು ಎಸೆಯುತ್ತಿದ್ದರು. ಇದೇ ವೇಳೆ ಕೆಲವರು ಮದ್ಯ ಸೇವಿಸುತ್ತಿದ್ದರು ಎಂದು ಪೊಲೀಸರು ಪ್ರಕರಣ ದಾಖಲಿಸಿದ ಎಫ್‌ಐಆರ್ ನಲ್ಲಿ ಉಲ್ಲೇಖಿಸಲಾಗಿದೆ. ಅಶ್ಲೀಲ ಕೃತ್ಯಗಳಿಗೆ ಸಂಬಂಧಿಸಿದ ಐಪಿಸಿಯ ಸೆಕ್ಷನ್ 294 ಮತ್ತು ಮಹಾರಾಷ್ಟ್ರ ಪೊಲೀಸ್ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ಪ್ರಕರಣವನ್ನು ತನಿಖೆ ನಡೆಸಿದ ಬಾಂಬೆ ಹೈಕೋರ್ಟ್ (High court)ಸಣ್ಣ ಸ್ಕರ್ಟ್ ಧರಿಸುವುದು, ಪ್ರಚೋದನಕಾರಿಯಾಗಿ ನೃತ್ಯ ಮಾಡುವುದು, ಅಶ್ಲೀಲ ಸನ್ನೆಗಳನ್ನು ಮಾಡುವುದು ಇತ್ಯಾದಿಗಳನ್ನು ಪೊಲೀಸ್ ಅಧಿಕಾರಿಗಳು ಭಾವಿಸಿದಂತೆ ಅಸಭ್ಯ ಕೃತ್ಯಗಳು ಎಂದು ಪರಿಗಣಿಸಲಾಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ, ಮಹಿಳೆಯರು ಈ ರೀತಿಯ ಬಟ್ಟೆಗಳನ್ನು ಧರಿಸುವುದು ಸಾಮಾನ್ಯ ವಿಷಯವಾಗಿದ್ದು,ಇದು ಸ್ವೀಕಾರಾರ್ಹವಾಗಿದೆ. ಇಷ್ಟೇ ಅಲ್ಲದೆ, ನಾವು ಆಗಾಗ ಚಲನಚಿತ್ರಗಳಲ್ಲಿ ಈ ರೀತಿಯ ಉಡುಪನ್ನು ಧರಿಸಿರುವುದನ್ನು ಗಮನಿಸುತ್ತೇವೆ ಎಂದು ಬಾಂಬೆ ಹೈಕೋರ್ಟ್ ಮತ್ತು ನಾಗ್ಪುರ ಪೀಠ ಹೇಳಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 294 ರ ಅಡಿಯಲ್ಲಿ, ಕಾಯ್ದೆಯು ಅಪರಧಕ್ಕೆ ಸಂಬಂಧಿಸಿದೆ. ಈ ವಿಭಾಗದ ಪ್ರಕಾರ, ಅಶ್ಲೀಲ ಹಾಡುಗಳು ಅಥವಾ ಪದಗಳನ್ನು ನೋಡಿದ ಇಲ್ಲವೇ ಕೇಳಿದ ನಂತರ ಅಶ್ಲೀಲ ಕೃತ್ಯವು ಕಿರಿಕಿರಿ ಉಂಟುಮಾಡಿದರೆ ಇದನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಇದರ ಜೊತೆಗೆ, ಇಲ್ಲಿ ಕಾರ್ಯಕ್ರಮ ನಡೆದ ಸಮೀಪದವರು ಯಾರಾದರೂ ಈ ಬಗ್ಗೆ ದೂರು ನೀಡಬೇಕಾಗುತ್ತದೆ ಎಂದು ನ್ಯಾಯಾಲಯದ ಆದೇಶದಲ್ಲಿ ತಿಳಿಸಿದ್ದು, ಐಪಿಸಿ ‘ಸಾರ್ವಜನಿಕ ಸ್ಥಳ’ವನ್ನು ವ್ಯಾಖ್ಯಾನಿಸಿಲ್ಲ ಎಂದು ನ್ಯಾಯಾಲಯ ಪುನರ್ ಉಚ್ಚರಿಸಿದೆ.

 

ಇದನ್ನು ಓದಿ: Starbucks Recipe: ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಸಿಟ್ಟುಗೊಂಡ ಉದ್ಯೋಗಿ, ಮಾಡಿದ್ಳು ಘೋರ ಕೃತ್ಯ!!! ಸ್ಟಾರ್‌ಬಕ್ಸ್‌ನ ಸೀಕ್ರೇಟ್‌ ರೆಸಿಪಿ ರಿವೀಲ್‌ ಮಾಡಿದ ಉದ್ಯೋಗಿ!!!